ಧರ್ಮಗುರು ದಲೈಲಾಮಾಗೆ ಅಮೇರಿಕ ಆಹ್ವಾನ, ಭಾರತ ವಿರುದ್ಧ ಚೀನಾ ಮಾಧ್ಯಮಗಳ ಕೆಂಗಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

Dalai-Lama--01

ಬೀಜಿಂಗ್, ಫೆ.10-ಅಮೆರಿಕಾದ ಕ್ಯಾಲಿಫೋನಿರ್ಯಾದ ಸ್ಯಾನ್ ಡಿಗೋ ವಿಶ್ವವಿದ್ಯಾಲಯಕ್ಕೆ ವಿಶ್ವ ಪ್ರಸಿದ್ಧ ಧರ್ಮಗುರು ದಲೈ ಲಾಮಾ ಅವರನ್ನು ಆಹ್ವಾನಿಸಿರುವುದಕ್ಕೆ ನೆರೆಯ ರಾಷ್ಟ್ರ ಚೀನಾ ಗರಂ ಆಗಿದ್ದು, ಭಾರತ ವಿರುದ್ಧ ಚೀನಾ ಮಾಧ್ಯಮಗಳು ಆಕ್ಷೇಪ ವ್ಯಕ್ತಪಡಿಸಿವೆ.  ಕ್ಯಾಲಿಫೋರ್ನಿಯಾದ ಸ್ಯಾನ್ ಡಿಗೋ ವಿವಿಯಲ್ಲಿ ಜೂನ್ ತಿಂಗಳಲ್ಲಿ ನಡೆಯಲಿರುವ ಪದವಿ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ದಿ ಎಕ್ಸ್‍ಲ್ಡ್ ಸ್ಪಿರ್ಯೂಚಿಯಲ್ ಹೆಡ್ ಅಂಡ್ ಲೀಡರ್ ಆಫ್ ದಿ ಟಿಬೆಟಿಯನ್ ಪೀಪಲ್ಸ್ ಎಂಬುದರ ಬಗ್ಗೆ ಮಾತನಾಡಲು ಭಾರತೀಯ ಮೂಲದ ಅಮೆರಿಕನ್ ಕುಲಪತಿ ಪ್ರದೀಪ್ ಕೋಶ್ಲಾ ಅವರು ದಲೈ ಲಾಮಾ ಅವರನ್ನು ಆಹ್ವಾನಿಸಿದ್ದು, ಇದಕ್ಕೆ ಚೀನಾ ಮಾಧ್ಯಮಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ದಲೈ ಲಾಮಾ ಅವರಿಗೆ ಆಹ್ವಾನ ನೀಡಿರುವುದರಿಂದ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಚೀನಾ ಕ್ಯಾತೆ ತೆಗೆದಿದೆ.
ಕಳೆದ ದಿನವಷ್ಟೆ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಆಜಾದ್‍ನನ್ನು ಅಂತಾರಾಷ್ಟ್ರೀಯ ಉಗ್ರನೆಂದು ಘೋಷಿಸುವಂತೆ ಭಾರತ ಮತ್ತು ಅಮೆರಿಕ ಮುಂದಾದಾಗ ಚೀನಾ ಮತ್ತೆ ಗೋಸುಂಬೆ ವರ್ತನೆ ತೋರಿತ್ತು. ಈಗ ಮತ್ತೆ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin