ಧರ್ಮದ ಮೌಲ್ಯಗಳು ಮಾನವ ಜೀವನ ವಿಕಾಸಕ್ಕೆ ಅವಶ್ಯ

ಈ ಸುದ್ದಿಯನ್ನು ಶೇರ್ ಮಾಡಿ

15
ಗದಗ,ಮಾ.10- ವೀರಶೈವ ಧರ್ಮದ ಮೌಲ್ಯ ಗಳು ಮಾನವ ಜೀವನದ ಉಜ್ವಲ ಭವಿಷ್ಯಕ್ಕಾಗಿ, ವಿಕಾಸಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳ ಪರಿಪಾಲನೆಯಿಂದ ಮನಸ್ಸಿಗೆ ಶಾಂತಿ ಪ್ರಾಪ್ತವಾಗುತ್ತದೆ ಎಂದು ಷ. ಬ್ರ.ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಹೇಳಿದರು. ಮುಳಗುಂದನಾಕಾದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿ ನಿಮಿತ್ತ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದವರು ಆಯೋಜಿಸಿರುವ ಐದು ದಿನಗಳ ರೇಣುಕಾ ದರ್ಶನ ಪ್ರವಚನಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.ಜಾತ್ಯಾತೀತ ಮನೋಭಾವನೆಗಳನ್ನು ಬಿತ್ತಿ ಬೆಳೆದ ರೇಣುಕಾಚಾರ್ಯರ ಸಂದೇಶಗಳು ಸರ್ವಕಾಲಿಕ. ಎಲ್ಲರ ಬದುಕಿಗೆ ಹೊಸ ಆಯಾಮ ತಂದು ಕೊಡುತ್ತೇವೆ ಎಂದರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮ ಸಾಮಾಜಿಕ ಮೌಲ್ಯ ಗಳನ್ನು ರಕ್ಷಿಸಿಕೊಂಡು ಬಂದಿದೆ. ಧರ್ಮ ಎಂಬುದು ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಅಂಧನಿಗೆ ಕಣ್ಣು ಇದ್ದ ಹಾಗೆ ಪ್ರತಿಯೊಬ್ಬರು ಧರ್ಮದ ನೆರಳಿನಲ್ಲಿ ಬಾಳಿ ಜೀವನದಲ್ಲಿ ನೆಮ್ಮದಿ ಪಡೆಯಬೇಕು ಎಂದರು. ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ ಪ್ರತಿ ವರುಷ ಜಯಂತಿ ಅಂಗವಾಗಿ ರೇಣುಕಾ ದರ್ಶನ ಪ್ರವಚನ ಏರ್ಪಡಿಸುತ್ತಿರುವುದು ಸಂತೋಷದ ವಿಷಯ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಪ್ರಾರಂಭಿಸಿದಲ್ಲಿ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾನವ ಕಲ್ಯಾಣಕ್ಕಾಗಿ ಪರಶಿವನ ಸದ್ಯೋಜತ ಮುಖದಿಂದ ಸೋಮೇಶ್ವರನ ಮಹಾಲಿಂಗದಿಂದ ಜಗದ್ಗುರು ರೇಣುಕಾಚಾರ್ಯರು ಅವತರಿಸಿ ವೀರಶೈವ ಧರ್ಮ ಸ್ಥಾಪಿಸಿ ಧರ್ಮದ ದಶಸೂತ್ರಗಳನ್ನು ಬೋಧಿಸಿ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಮೂಡಲು ಕಾರಣರಾದರು. ಅವರ ತತ್ವ ಸಿದ್ಧಾಂತಗಳು ಸಕಲರ ಬಾಳಿಗೆ ಬೆಳಕು ತೋರಬಲ್ಲವು ಎಂದು ಅನೇಕ ದೃಷ್ಟಾಂತಗಳ ಮೂಲಕ ಪ್ರವಚನದಲ್ಲಿ ತಿಳಿಸಿದರು. ರೇಣುಕ ಮಂದಿರದ ನಿಯೋಜಿತ ಪಟ್ಟಾಧ್ಯಕ್ಷ ಚಂದ್ರಶೇಖರ ದೇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಸಭಾ ಅಧ್ಯಕ್ಷ ಪೀರಸಾಬ ಕೌತಾಳ, ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ನಗರಸಭಾ ಸದಸ್ಯ ಎಂ. ಸಿ.ಶೇಖ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಅನಿಲ ಅಬ್ಬಿಗೇರಿ, ಮಲ್ಲಿಕಾರ್ಜುನ ಶಿಗ್ಲಿ, ವಿಜಯಕುಮಾರ ಹಿರೇಮಠ, ಪ್ರಕಾಶ ಬೇಲಿ, ಶಿವಾನಂದ ಹಿರೇಮಠ, ಬಸವರಾಜ ಶಾಬಾದಿಮಠ, ಸುರೇಶ ಅಬ್ಬಿಗೇರಿ, ವಿರೇಶ ಕೂಗು ಮತ್ತು ಕಾಶೀ ಪಾಠಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin