ಧರ್ಮಸ್ಥಳಕ್ಕೆ ಹೊರಟಿದ್ದೀರಾ ..? ಹಾಗಾದರೆ ಈಗ ಆನ್‍ಲೈನ್‍ ನಲ್ಲೆ ರೂಮ್ ಬುಕ್ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

online--booking

ಧರ್ಮಸ್ಥಳ,ಆ.22- ಶ್ರೀ ಕ್ಷೇತ್ರ ಧರ್ಮಸ್ಥಳಲ್ಲಿ ಆನ್‍ಲೈನ್ ಮೂಲಕ ರೂಂ ಬುಕಿಂಗ್ ಮಾಡುವ ಸೌಲಭ್ಯಕ್ಕೆ ಚಾಲನೆ ದೊರೆತಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಶ್ರೀ ಕ್ಷೇತ್ರದ ಅಧಿಕೃತ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಸ್ತುತ ಧರ್ಮಸ್ಥಳದಲ್ಲಿರುವ ರಜತಾದ್ರಿ ವಸತಿ ಗೃಹದ 110 ರೂಮ್‍ಗಳು ಈ ಆನ್‍ಲೈನ್ ಬುಕ್ಕಿಂಗ್ ಸೌಲಭ್ಯದಡಿ ಭಕ್ತಾಧಿಗಳಿಗೆ ಲಭಿಸಲಿದೆ. ಈ ಸೌಲಭ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿದರು.
ಈ ಬುಕ್ಕಿಂಗ್‍ಗಾಗಿ ಭಕ್ತಾಧಿಗಳು ವೆಬ್‍ಸೈಟ್ಗೆ… http://www.shridharmasthala.org ಗೆ   ಲಾಗಿನ್ ಆಗಿ ರೂಮ್ ಬುಕ್ಕಿಂಗ್ ಮಾಡಬಹುದು. 

► Follow us on –  Facebook / Twitter  / Google+

Facebook Comments

Sri Raghav

Admin