ಧರ್ಮಸ್ಥಳದಲ್ಲಿ ಮದುವೆಯಾದ ಲೂಸ್‍ಮಾದ ಯೋಗಿ ಸೋದರ ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

Yogi-1

ಧರ್ಮಸ್ಥಳ, ನ.3-ಲೂಸ್‍ಮಾದ ಎಂದೇ ಖ್ಯಾತಿ ಪಡೆದಿರುವ ಯೋಗಿ ಅವರ ಸಹೋದರ ಮಹೇಶ್ ಹಾಗೂ ಸ್ವಾತಿ ವಿವಾಹ ಇಂದು ಧರ್ಮಸ್ಥಳದಲ್ಲಿ ನೆರವೇರಿತು. ಧರ್ಮಸ್ಥಳದ ಸೂರ್ಯಕುಮಲ್ ಕಲ್ಯಾಣ ಮಂಟಪದಲ್ಲಿ ಮುಂಜಾನೆ 4.15ರ ಮುಹೂರ್ತದಲ್ಲಿ ಮಹೇಶ್-ಸ್ವಾತಿ ವಿವಾಹ ನಡೆಯಿತು. ಲೂಸ್‍ಮಾದ ಯೋಗಿ ಸೇರಿದಂತೆ ಕುಟುಂಬದ ಸದಸ್ಯರು ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಹೋದರನ ವಿವಾಹದಿಂದ ಯೋಗಿ ಲೈನ್ ಕ್ಲಿಯರ್ ಆಗಿದೆ. ಮುಂದಿನ ವರ್ಷ ಸಾಹಿತ್ಯ ಜತೆ ಯೋಗಿ ವಿವಾಹ ವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಯೋಗಿ ಮದುವೆಯ ಗುಸುಗುಸು ಹಿನ್ನೆಲೆಯಲ್ಲಿ ಮಹೇಶ್ ತರಾತುರಿಯಲ್ಲಿ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ :  ಲೂಸ್‍ಮಾದ ಯೋಗಿ ಸೋದರ ಮಹೇಶ್ ಮದುವೆಯ Exclusive ಫೋಟೋಸ್ ]

► Follow us on –  Facebook / Twitter  / Google+

Facebook Comments

Sri Raghav

Admin