ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಗತ್ತಿಗೆ ಮಾದರಿಯಾಗಲಿ

ಈ ಸುದ್ದಿಯನ್ನು ಶೇರ್ ಮಾಡಿ

 

13

ಬೈಲಹೊಂಗಲ,ಅ.5- ಸಮಾಜ ನಮ್ಮನ್ನು ಗೌರವದಿಂದ ಕಾಣಬೇಕಾದರೆ ಬದುಕಿನಲ್ಲಿ ಸಭ್ಯವಂತರಾಗಿ ಜೀವನ ಸಾಗಿಸಿ ಸಾಧನಾ ಪಥದಲ್ಲಿ ನಡೆಯಬೇಕೆಂದು ಚೆನ್ನಮ್ಮನ ಕಿತ್ತೂರಿನ ಘಟಕದ ಕನ್ನಡ ಜನಪದ ಪರಿಷತ್ತಿನ ಅಧ್ಯಕ್ಷ, ಉಪನ್ಯಾಸಕ ಬಸವರಾಜ ಕುಪ್ಪಸಗೌಡರ ಹೇಳಿದರು. ಅವರು ಪಟ್ಟಣದ ಇಂಚಲ ರಸ್ತೆಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನ ಜಗೃತಿ ವೇದಿಕೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಗಾಂಧೀ ಜಯಂತಿ ಅಂಗವಾಗಿ ಜರುಗಿದ ನವಜೀವನ ಸದಸ್ಯರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿ, ಮನುಷ್ಯನಾಗಿ ಬದುಕಿದ ಮೇಲೆ ದೇವರಿಗೆ ಪ್ರೀತಿ ಬರುವಂತೆ ಬದುಕಬೇಕು. ಬದುಕಿನ ಸಾರ್ಥಕತೆಗಾಗಿ ಉತ್ತಮ ಹವ್ಯಾಸಗಳು ಬೆಳೆಯಬೇಕು. ಸಮಾಜದಲ್ಲಿ ಅನೇಕ ಸಾಧಕರು ಪರಿವರ್ತನೆಯ ಸಂದೇಶ ನೀಡಿದ್ದು ಅವುಗಳು ಅವಶ್ಯವಾಗಿ ಅನುಷ್ಠಾನವಾಗಬೇಕಾಗಿದೆ ಎಂದರು.

ಸಾನಿಧ್ಯ ವಹಿಸಿದ ಶಾಖಾ ಮೂರುಸಾವಿರಮಠದ ಪೂಜ್ಯ ಪ್ರಭು ನೀಲಕಂಠ ಸ್ವಾಮೀಜಿ ಮಾತನಾಡಿ, ಮಹಾತ್ಮರು ದೇಶಕ್ಕೆ ಸ್ವಾತಂತ್ರ್ಯೆ ತಂದು ಕೊಟ್ಟು ಉಪಕಾರ ಮಾಡಿದ್ದಾರೆ. ದೇಶ ಅಭಿವೃದ್ದಿಯಾಗಬೇಕಾದರೆ ದುಶ್ಚಟಗಳನ್ನು ದೂರಗೊಳಿಸಿ ಗಾಂಧೀಜಿ ಕಂಡ ಕನಸ್ಸನ್ನು ಇಂದಿನ ಯುವ ಜನಾಂಗ ನನಸಾಗಿಸುವಲ್ಲಿ ಪ್ರಯತ್ನಿಸಬೇಕಾಗಿದೆ. ಸಮಾಜದಲ್ಲಿ ಮೇಲು-ಕೀಳು ಎನ್ನದೇ ಪ್ರತಿಯೊಬ್ಬರೂ ಆರ್ಥಿಕ ಸ್ವಾವಲಂಭಣೆ ಸಾಧಿಸಲು ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರು ಪ್ರಾರಂಭಿಸಿರುವ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಮುಂಬರುವ ದಿನಗಳಲ್ಲಿ ಜಗತ್ತಿಗೆ ಮಾದರಿಯಾಗಲಿ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾ ಜನ ಜಗೃತಿ ವೇದಿಕೆಯ ಸದಸ್ಯ ವಿಠಲ ಪಿಸೆ ದುಶ್ಚಟಗಳಿಂದಾಗುವ ಪರಿಣಾಮಗಳನ್ನು ವಿವರಿಸಿದರು. ಕಳೆದ ಬಾರಿ ನಡೆದ ಮಧ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಮಧ್ಯಪಾನ ಹಾಗೂ ದುಶ್ಚಟಗಳನ್ನು ತೇಜಿಸಿದ ಸುಮಾರು 120 ಕುಟುಂಬಗಳನ್ನು ಅಭಿನಂದಿಸಲಾಯಿತು.

ಶಿಕ್ಷಕ ಎಸ್.ಎಂ. ಪಾಟೀಲ, ಜಿಲ್ಲಾ ಜನ ಜಗೃತಿ ವೇದಿಕೆಯ ಸದಸ್ಯ ಉಮೇಶ ಮುಪೈನವರಮಠ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಕೋಟಗಿ, ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶ್ರೀಶೈಲ ಶರಣಪ್ಪನವರ, ತಾಲೂಕು ಕನ್ನಡ ಜನಪದ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಕೊಪ್ಪದ, ತಾಲೂಕು ಯೋಜನಾಧಿಕಾರಿ ನಾಗರಾಜ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿಗಳಾದ ಆಶಾ ಬೋಗೂರ, ಸುವರ್ಣ ಅಬ್ಬಾಯಿ, ಭಾಗ್ಯಶ್ರೀ ಇಟಗಿ, ಮಹಾದೇವಿ ಲೋಕರಿ, ರಾಜಶ್ರೀ ಇಟಗಿ, ರೂಪಾ ಮೂಖಾಶಿ, ಮಹಾದೇವಿ ಹುಲಕುಂದ, ಕೃಷಿ ಮೇಲ್ವಚಾರಕರು, ಸೇವಾ ಪ್ರತಿ ನಿಧಿಗಳು, ಸ್ವ-ಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು. ಕೃಷಿ ಮೇಲ್ವಚಾರಕ ನಾಗೇಶ ಬೆಣ್ಣಿ, ರಮೇಶ.ವಿ, ಜ್ಞಾನ  ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮೀ ರಾಯನಾಳ ಮುಂತಾದವರಿದ್ದರು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.

 

► Follow us on –  Facebook / Twitter  / Google+

Facebook Comments

Sri Raghav

Admin