ಧರ್ಮಸ್ಥಳ ಮಂಜುನಾಥನೆದುರು ಸಂಕಲ್ಪ ಮಾಡಿದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-3

ಮಂಗಳೂರು, ಏ. 27: ಎರಡು ದಿನಗಳ ಕರಾವಳಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಂಜುನಾಥ ಸ್ವಾಮಿಗೆ ಫಲಕಾಣಿಕೆ ಅರ್ಪಿಸಿದ ರಾಹುಲ್ ಗಾಂಧಿ, ವಿಶೇಷ ಪೂಜೆಯಲ್ಲಿ ಭಾಗಿಯಾದರು.  ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮಿ ಎದುರು ರಾಹುಲ್ ಗಾಂಧಿ ಸಂಕಲ್ಪವನ್ನೂ ಮಾಡಿದರು.  ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಮಹದಾಸೆಯಿಂದ ಮಂಜುನಾಥನಲ್ಲಿ  ಸಂಕಲ್ಪ ಮಾಡಿ ಬೇಡಿಕೊಂಡರು.

Rahul  01

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಜೊತೆಗೆ ಸಮಾಲೋಚನೆ ನಡೆಸಿದರು.ಪೂಜೆಯ ನಂತರ ಪ್ರಸಾದ ಸ್ವೀಕರಿಸಿದ್ದ ರಾಹುಲ್  ನಂತರ ಇಲ್ಲಿನ ಸನ್ನಿಧಿ ವಸತಿಗೃಹದಲ್ಲಿ ಮಧ್ಯಾಹ್ನದ ಊಟ ಸೇವಿಸಿದರು. ರಾಹುಲ್ ಗಾಂಧಿಯವರ ಜೊತೆ ಕಾಂಗ್ರೆಸ್ ಮುಖಂಡರು ಕೂಡ ಊಟ ಮಾಡಿದರು. ಧರ್ಮಸ್ಥಳಕ್ಕೆ ರಾಹುಲ್ ಗಾಂಧಿ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಒಂಭತ್ತು ವರ್ಷಗಳ ಹಿಂದೆ ರಾಹುಲ್ ಗಾಂಧಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.

Rahul  04

ಈ ಮೊದಲು ಬಂಟ್ವಾಳದಿಂದ ಹೆಲಿಕಾಪ್ಟರ್ ನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಈ ವೇಳೆ ದೇವಸ್ಥಾನಗಳ ಸಿಬ್ಬಂದಿಯನ್ನು ರಾಹುಲ್ ಗಾಂಧಿ ಗುರುತು ಹಿಡಿದಿದ್ದಾರೆ. ತಮಗೆ ನಿಮ್ಮನ್ನು ನೋಡಿದ ನೆನಪಿದೆ ಎಂದಿದ್ದಾರೆ. ಇದರಿಂದ ಸಿಬ್ಬಂದಿಗಳು ಖುಷಿ ಪಾರವೇ ಇಲ್ಲದಂತಾಗಿತ್ತು.

Rahul-5

Rahul 2

Facebook Comments

Sri Raghav

Admin