ಧಾರವಾಡ : ಆಕಾಶವಾಣಿ ಸಂಗೀತ ಸಮ್ಮೇಳನ 2016

ಈ ಸುದ್ದಿಯನ್ನು ಶೇರ್ ಮಾಡಿ

daravada

ವಿಶ್ವದ ಬೃಹತ್ ಪ್ರಸಾರಜಾಲವಾಗಿರುವ ಅಖಿಲಭಾರತ ಆಕಾಶವಾಣಿಯ ಬಹು ನಿರೀಕ್ಷಿತ ಹಾಗೂ ಪ್ರತಿಷ್ಠಿತ ಆಕಾಶವಾಣಿ ಸಂಗೀತ ಸಮ್ಮೇಳನ 2016 ಇದೇ ತಿಂಗಳು ದಿನಾಂಕ 24 ಶನಿವಾರದಂದು ದೇಶಾದ್ಯಂತ ಆಯ್ದ ಪ್ರಮುಖ ನಗರಗಳಲ್ಲಿ ನಡೆಯಲಿದೆ. ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಂಗೀತ ದಿಗ್ಗಜರು ಹಾಗೂ ಅತ್ಯಂತ ಪ್ರತಿಭಾಶಾಲಿ ಯುವ ಕಲಾವಿದರು ಆಮಂತ್ರಿತ ಶ್ರೋತೃಗಳ ಸಮ್ಮುಖದಲ್ಲಿ ಶುದ್ದ ಶಾಸ್ತ್ರೀಯ ಸಂಗೀತದ ರಸದೌತಣ ನೀಡಲಿದ್ದಾರೆ. ಇದರ ಅಂಗವಾಗಿ, ಆಕಾಶವಾಣಿ ಮಹಾ ನಿರ್ದೇಶಕರ ಪರವಾಗಿ ಧಾರವಾಡ ಆಕಾಶವಾಣಿ ಆಶ್ರಯದಲ್ಲಿ ಆಕಾಶವಾಣಿ ಸಂಗೀತ ಸಮ್ಮೇಳನ 2016 ಸೆಪ್ಟಂಬರ

24 ರಂದು ಸಂಜೆ ಧಾರವಾಡದ ಡಾ/ಅಣ್ಣಾಜಿರಾವ ಸಿರೂರ – ಸೃಜನಾ ರಂಗ ಮಂದಿರದಲ್ಲಿ ಸಂಜೆ 6ಗಂಟೆಗೆ ಆಮಂತ್ರಿತ ಶ್ರೋತೃಗಳ ಸಮ್ಮುಖದಲ್ಲಿ ಆಯೋಜಿಸಲ್ಪಟ್ಟಿದೆ. ಭಾರತೀಯ ಶಾಸ್ತ್ರೀಯ ಸಂಗೀತದ ಎರಡು ಪ್ರಮುಖ ಜನಪ್ರೀಯ ಪ್ರಕಾರಗಳಾದ ಹಿಂದೂಸ್ತಾನಿ ಹಾಗೂ ಕರ್ನಾಟಕಿ ಶಾಸ್ರ್ತೀಯ ಸಂಗೀತವನ್ನು ಏಕಕಾಲದಲ್ಲಿ ಆಸ್ವಾದಿಸುವ ಅಪರೂಪದ ಅವಕಾಶವಾಗಿದೆ.ವಿಶ್ವವಿಖ್ಯಾತ ಸರೋದವಾದಕ ದೆಹಲಿಯ ಪಂ. ಬಿಸ್ವಜಿತ್‍ರಾಯ್ ಚೌಧರಿ ಹಾಗೂ ಹೆಸರಾಂತ ಕರ್ನಾಟಕಿ ಶಾಸ್ತ್ರೀಯ ಗಾಯಕಿ ಹೈದರಾಬಾದಿನ ಶ್ರೀಮತಿ ಜಿ ಶ್ರೀವಿದ್ಯಾ ಅಂದು ಕಾರ್ಯಕ್ರಮ ನೀಡಲಿದ್ದಾರೆ.

ಇತಿಹಾಸ:

1954ರಿಂದ ಪ್ರಾರಂಭವಾದ ಆಕಾಶವಾಣಿ ಸಂಗೀತ ಸಮ್ಮೇಳನ ಕಳೆದ 62 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ವಿಶಿಷ್ಠ ರಾಷ್ಟ್ರೀಯ ಸಂಗೀತೋತ್ಸವ ಸಮ್ಮೇಳನನದ ಸಂಗೀತ ಕಚೇರಿಗಳನ್ನು ದೇಶದ ಉದ್ದಗಲಕ್ಕೂ ಆಯ್ದ ಪ್ರಮುಖ ನಗರಗಳಲ್ಲಿ ಆಮಂತ್ರಿತ ಕೇಳುಗರ ಸಮ್ಮುಖದಲ್ಲಿ ಏಕಕಾಲದಲ್ಲಿ ಏರ್ಪಡಿಸಲಾಗುತ್ತದೆ. ಹಿಂದುಸ್ತಾನಿ ಹಾಗೂ ಕರ್ನಾಟಕಿ ಸಂಗೀತದ 150 ಕ್ಕೂ ಹೆಚ್ಚು ಖ್ಯಾತ ಹಾಗೂ ಉದಯೋನ್ಮುಖ ಕಲಾವಿದರು ತಮ್ಮ ಸಂಗೀತ ಸಾಧನೆಯನ್ನು ನಮ್ಮೆದುರಿಗೆ ಅನಾವರಣಗೊಳಿಸುತ್ತಾರೆ. ಒಂದರ್ಥದಲ್ಲಿ ಇದು ದಕ್ಷಿಣೋತ್ತರ ಸಂಗೀತಗಳ ಸಮಾಗಮ. ಲಕ್ಷ ಲಕ್ಷ ಸಂಗೀತ ರಸಿಕರು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಬೃಹತ ಯೋಜನೆಯಿದಾಗಿದೆ. ನಂತರ ಸಂಗೀತ ಸಮ್ಮೇಳನ ಕಚೇರಿಗಳ ಧ್ವನಿಮುದ್ರಣವನ್ನು ದೇಶದ ಎಲ್ಲ ಬಾನುಲಿ ಕೇಂದ್ರಗಳಿಂದ ಒಂದು ತಿಂಗಳಿಗೂ ಅಧಿಕಕಾಲ ಏಕಕಾಲಕ್ಕೆ ಪ್ರಸಾರ ಮಾಡಲಾಗುತ್ತದೆ. ಕೋಟಿ ಕೋಟಿ ಕೇಳುಗರು ಆಲಿಸುತ್ತಾರೆ. ಇದು ಆಕಾಶವಾಣಿಯ ಹೆಗ್ಗಳಿಕೆಯಾಗಿದೆ.
ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಾವಿದರ ಕಿರು ಪರಿಚಯ)ಪಂ, ಬಿಸ್ವಜಿತ್‍ರಾಯ್ ಚೌಧರಿ- ಸರೋದವಾದನ ದೆಹಲಿಸಂಗೀತ ಪರಂಪರೆಯ ಮನೆತನದಲ್ಲಿ ಜನಿಸಿರುವ ಖ್ಯಾತ ಸರೋದವಾದಕ ಪಂ. ಬಿಸ್ವಜಿತ್‍ರಾಯ್ ಚೌಧರಿ, ಆರಂಭಿಕ ಸಂಗೀತ ಶಿಕ್ಷಣವನ್ನು ತಮ್ಮ ತಂದೆ ಎ ಗ್ರೇಡ ಸರೋದವಾದಕ, ದಿವಂಗತ ರಣಜಿತ ರಾಯ್ ಚೌಧರಿಯಲ್ಲಿ ಪಡೆದರು. ಆನಂತರ ಪಂ, ಇಂದ್ರನೀಲ್ ಭಟ್ಟಾಚಾರ್ಯ ಹಾಗೂ ವಿಶ್ವಪ್ರಸಿದ್ದ ಸರೋದವಾದಕ ಉಸ್ತಾದ ಅಮ್ಜದ್ ಅಲಿಖಾನರಲ್ಲಿ ಆಳವಾದ ಸಂಗೀತಾಧ್ಯಾಯನ ಮಾಡಿದ್ದಾರೆ.

 

 

ಧಾರವಾಡದ ದಿಗ್ಗಜ ಗಾಯಕ ಪಂ. ಮಲ್ಲಿಕಾರ್ಜುನ ಮನಸೂರ ಅವರಲ್ಲಿ ಪಂ. ಬಾಳಾಸಾಹೇಬ ಪೂಛವಾಲೆ ಹಾಗೂ ಶ್ರೀಮತಿ ಸುಮತಿ ಮುಟಾಟ್ಕರ ಅವರಲ್ಲಿಯೂ ಮಾರ್ಗದರ್ಶನ ಪಡೆದಿದ್ದಾರೆ.ಪ್ರಾನ್ಸ ಸರಕಾರದ ಪ್ರತಿಷ್ಠಿತ ನೈಟಹುಡ್ ಪ್ರಶಸ್ತಿಗೆ ಭಾಜನನಾಗಿರುವ ಪಂ ಬಿಸ್ವಜಿತ್‍ರಾಯ್ ಚೌಧರಿ ಆಕಾಶವಾಣಿ ಟಾಪ ರ್ಯಾಂಕ ಕಲಾವಿದರಾಗಿದ್ದಾರೆ. 24.9.2016 ರಂದು ಧಾರವಾಡ ಸೃಜನಾರಂಗಮಂದಿರದಲ್ಲಿ ನಡೆಯುವ ಆಕಾಶವಾಣಿ ಸಂಗೀತ ಸಮ್ಮೇಳನ 2016 ಸರೋದವಾದನ ನಡೆಸಿಕೊಡಲಿದ್ದಾರೆ, ಇವರಿಗೆ ದೆಹಲಿಯ ಶ್ರೀ ಆಶಿಶ್ ಸೇನ ಗುಪ್ತಾ ತಬಲಾ ಸಾಥ ನೀಡಲಿದ್ದಾರೆ.

 

ಶ್ರೀಮತಿ :

ಜಿ. ಶ್ರೀವಿದ್ಯಾ ಕರ್ನಾಟಕ ಶಾಸ್ರ್ತೀಯ ಗಾಯನ – ಹೈದರಾಬಾದಕರ್ನಾಟಕ ಸಂಗೀತ ಪರಂಪರೆಯ ಮನೆತನದಲ್ಲಿ ಜನಿಸಿರುವ ಶ್ರೀಮತಿ ಜಿ. ಶ್ರೀವಿದ್ಯಾ ಆರಂಭಿಕ ಶಿಕ್ಷಣವನ್ನು ತಮ್ಮ ತಂದೆ ಹೆಸರಾಂತ ಗಾಯಕ ಶ್ರೀ ವಿ. ಗೋಪಾಲಕೃಷ್ಣ ಅವರಲ್ಲಿ ಪಡೆದಿದ್ದಾರೆ. ಸಂಗೀತ ಕಲಾನಿಧಿ ಮುಸಿರಿ ಸುಬ್ರಮಣ್ಯ ಅಯ್ಯರ ಅವರ ಸಂಗೀತ ಪರಂಪರೆ ಇವರಿಗಿದೆ. ಹೆಸರಾಂತ ಗಾಯಕಿಯಾಗಿರುವ ಶ್ರೀಮತಿ ಜಿ ಶ್ರೀವಿದ್ಯಾ ಕರ್ನಾಟಕಿ ಸಂಗೀತ ದಿಗ್ಗಜರಾದ ವಿದುಷಿ ಶ್ರೀಮತಿ ವಿಶಾಲಂ ವೆಂಕಟಾಚಲಂ ಹಾಗೂ ವಿದ್ಯಾ ಶ್ರೀಮತಿ ಸುಗುಣ ಪುರುಶೋತ್ತಮ ಅವರಲ್ಲಿ ಗಾಯನದ ಆಳವಾದ ಅಧ್ಯಯನ ಮಾಡಿದ್ದಾರೆ. ಸಂಗೀತ ಕಲಾವಿದ ಡಾ/ ಎಂ. ಚಂದ್ರಸೇಖರನ್ ಅವರಲ್ಲಿ ಪಿಟಿಲು ವಾದನವನ್ನು ಕಲಿತಿರುವ ಶ್ರೀಮತಿ ಶ್ರೀವಿದ್ಯಾ ಆಕಾಶವಾಣಿಯ ಎ ಶ್ರೇಣಿಯ ಕಲಾವಿದೆಯಾಗಿದ್ದಾರೆ.
ಸಂಗೀತ ಸಮ್ಮೇಳನದಲ್ಲಿ ಕರ್ನಾಟಕಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಲಿರುವ ಹೈದರಾಬಾದಿನ ಶ್ರೀಮತಿ ಜಿ ಶ್ರೀವಿದ್ಯಾ ಅವರಿಗೆ ಶ್ರೀ ಆರ್, ರಾಘುಲ್ ಪಿಟಿಲು, ಶ್ರೀ ಜಿ. ರಾಮಚಂದ್ರನ್ ಮೃದಂಗ, ಹಾಗೂ ಶ್ರೀ ಎಸ್, ಸುನೀಲಕುಮಾರ ಖಂಜಿರಾ ಪಕ್ಕವಾದ್ಯದಲ್ಲಿ ಸಹಕಾರ ನೀಡಿದ್ದಾರೆ.
ಸಂಗೀತಸಮ್ಮೇಳನ ನಡೆಯುವ ದಿನದಂದು ಸೃಜನಾ ರಂಗ ಮಂದಿರದಲ್ಲಿ ಆಕಾಶವಾಣಿಯ ಧ್ವನಿ ಭಂಡಾರದಿಂದ ಆಯ್ದ ಹೆಸರಾಂತ ಕಲಾವಿದರ ಸಿ,ಡಿ ಗಳು ಮಾರಾಟಕ್ಕೆ ಲಭ್ಯವಿರುತ್ತದೆ.ಸಂಗೀತ ರಸಿಕರನ್ನು ಈ ಸಂಗೀತ ಸಮ್ಮೇಳನಕ್ಕೆ ಧಾರವಾಡ ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಶ್ರೀ ಸತೀಶ ಪರ್ವತೀಕರ ಆಮಂತ್ರಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin