ಧಾರಾಕಾರ ಮಳೆಯಿಂದಾಗಿ ಕಲ್ಬುರ್ಗಿ-ಬೆಳಗಾವಿ ತತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Rain-01

ಕಲ್ಬುರ್ಗಿ ,ಸೆ.23-ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಲ್ಬುರ್ಗಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ.  ಚಿಕ್ಕೋಡಿ ತಾಲ್ಲೂಕಿನ ಯಡೂರ-ಕಲ್ಲೋಳ ಸೇತುವೆ ಮುಳುಗಿದ್ದು , ಕುಸಿಯುವ ಭೀತಿ ಆವರಿಸಿದೆ. ವಾಹನಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಹಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದು , ಬೆಳೆ ಹಾನಿಯ ಜೊತೆಗೆ ಪಂಪ್‍ಸೆಟ್‍ಗಳು ಕೂಡ ಹಾಳಾಗಿವೆ.  ಜಾನುವಾರುಗಳು ಹಲವೆಡೆ ಕೊಚ್ಚಿಕೊಂಡು ಹೋಗಿದ್ದು , ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಲ್ಬುರ್ಗಿಯಲ್ಲೂ ಕೂಡ ಇದೇ ರೀತಿಯ ಪರಿಸ್ಥಿತಿ ಇದೆ. ಕಾಗಿಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬೆಣ್ಣೆತೊರ ಡ್ಯಾಂನಿಂದ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ಸೇಡಂ, ಚಿತ್ತಾಪುರ, ಬಾಲ್ಕಿ, ಸೇರಿದಂತೆ ಹಲವೆಡೆ ಗ್ರಾಮಗಳು ಜಲಾವೃತಗೊಂಡಿವೆ.  ಕಲ್ಬುರ್ಗಿ ನಗರದ ಲಾಲಗೆರೆ ಕ್ರಾಸ್ ಸೂಪರ್ ಮಾರ್ಕೆಟ್, ಎಸ್‍ಬಿ ಟೆಂಪಲ್ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಇನ್ನು ಕಳೆದ ರಾತ್ರಿಯಿಂದ ಬೀದರ್‍ನಲ್ಲೂ ಮಳೆ ಆರಂಭಗೊಂಡಿದೆ. ನಗರದ ವೆಂಕಟೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ಬ್ಯಾಂಕ್ ಕಾಲೋನಿ ನಾಡಗೇರಿಯಲ್ಲಿ ಮನೆಗಳಿಗೂ ನೀರು ನುಗ್ಗಿ ಪೀಠೋಪಕರಣಗಳು, ಆಹಾರಧಾನ್ಯಗಳು ಹಾನಿಗೊಂಡಿವೆ.

► Follow us on –  Facebook / Twitter  / Google+

Facebook Comments

Sri Raghav

Admin