ಧೂಮ್-4 ನಲ್ಲಿ ಬಾಹುಬಲಿ ಪ್ರಭಾಸ್ ನಟಿಸುತ್ತಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Doom

ಸೂಪರ್‍ಹಿಟ್ ಬಾಹುಬಲಿ ಸಿನಿಮಾದಿಂದ ಭಾರತೀಯ ಚಿತ್ರರಂಗದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಟಾಲಿವುಡ್ ಸೂಪರ್‍ಸ್ಟಾರ್ ಪ್ರಭಾಸ್ ಬಗ್ಗೆ ಅನೇಕ ಊಹಾಪೋಹಾಗಳು ಮತ್ತು ಫುಕಾರುಗಳು ಕೇಳಿಬರುತ್ತಿವೆ. ಪ್ರಭಾಸ್ ಸದ್ಯದಲ್ಲೇ ಬಾಲಿವುಡ್ ಅಂಗಳಕ್ಕೆ ಜಿಗಿಯಲಿದ್ದಾರೆ ಹಾಗೂ ಧೂಮ್ ಚಿತ್ರದ ನಾಲ್ಕನೇ ಸರಣಿಯಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ವದಂತಿಗಳು ಹಬ್ಬಿವೆ. ಆದರೆ ಬಾಹುಬಲಿ ಇದನ್ನು ನಿರಾಕರಿಸಿದ್ದಾನೆ.  ಮುಂಬೈನಲ್ಲಿ ಜಿಯೋ ಮಾಮಿ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಪ್ರಭಾಸ್‍ನನ್ನು ಮಾಧ್ಯಮ ಮಿತ್ರರು ಈ ಬಗ್ಗೆ ಕೇಳಿದಾಗ, ಬಾಲಿವುಡ್‍ನಲ್ಲಿ ನನಗೆ ಕೆಲವು ಆಫರ್‍ಗಳು ಬಂದಿರುವುದು ನಿಜ. ಆದರೆ ನಾನು ನನ್ನ ಸ್ವಂತ ನಿರ್ಮಾಣದ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಬಂದಿದ್ದ ಆಫರ್‍ಗಳು ಉತ್ತಮವಾಗಿದ್ದರೂ ನನಗೆ ಸಮಯದ ಕೊರತೆ ಇದೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ನಾನು ಹೇಳುತ್ತಿಲ್ಲ ಎಂದಿದ್ದಾನೆ.

ಯಶ್‍ರಾಜ್ ಫಿಲಂಸ್‍ನ ಧೂಮ್-4 ಸಿನಿಮಾದಲ್ಲಿ ನೀವು ನಟಿಸುವಿರಂತೆ ಎಂಬ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಪ್ರಭಾಸ್ ಇಲ್ಲ ಎಂದು ಚುಟುಕಾಗಿ ಉತ್ತರಿಸಿದ. ಪ್ರಭಾಸ್ ಈಗ ಡಬಲ್ ಧಮಾಕದ ಖುಷಿಯಲ್ಲಿದ್ದಾನೆ. ಒಂದೆಡೆ ಬಾಹುಬಲಿ ಎರಡನೇ ಭಾಗದ ಫಸ್ಟ್‍ಲುಕ್ ಬಿಡುಗಡೆ ಸಂಭ್ರಮ, ಇನ್ನೊಂದಡೆ ಪ್ರಭಾಸ್‍ಗೆ ಬರ್ತ್‍ಡೇ ಸಡಗರ. ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಎರಡನೇ ಸೀಕ್ವೆಲ್ ಏಪ್ರಿಲ್ 2017ರಂದು ತೆರೆಕಾಣಲಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin