ಧೋನಿ, ಕೊಹ್ಲಿ, ರಹಾನೆ ಜೆರ್ಸಿ ಮೇಲೆ ಅಮ್ಮಂದಿರ ಹೆಸರು

ಈ ಸುದ್ದಿಯನ್ನು ಶೇರ್ ಮಾಡಿ

Dhoni

ನವದೆಹಲಿ ಅ.19 : ಮಹಿಳೆಯರ ಕುರಿತು ಸಾಮಾಜಿಕ ಅಭಿಪ್ರಾಯವನ್ನು ಬದಲಿಸಲು, ಮಹಿಳೆಯರ ಕುರಿತು ಗೌರವ ಮೂಡಿಸಲು ಸ್ಟಾರ್ ಇಂಡಿಯಾ ವಾಹಿನಿ ‘ನಯೀ ಸೋಚ್’ ಎಂಬ ಅಭಿಯಾನ ಆರಂಭವಾಗಿದೆ. ಇದರ ಅಂಗವಾಗಿ ಖ್ಯಾತ ಕ್ರಿಕೆಟಿಗರಾದ ಧೋನಿ, ಕೊಹ್ಲಿ, ರಹಾನೆ ಜೆರ್ಸಿ ಹಿಂಬದಿಯಲ್ಲಿ ತಮ್ಮ ಹೆಸರಿನ ಬದಲು ತಮ್ಮ ತಾಯಿಯ ಹೆಸರನ್ನು ಸೇರಿಸಿಕೊಂಡಿದ್ದಾರೆ. ಧೋನಿ ಜೆರ್ಸಿ ಹಿಂಭಾಗದಲ್ಲಿ ತಾಯಿ ದೇವಕಿ ಹೆಸರು, ಕೊಹ್ಲಿ ಜೆರ್ಸಿಯಲ್ಲಿ ಸರೋಜ, ರಹಾನೆ ಜೆರ್ಸಿಯಲ್ಲಿ ಸುಜಾತ ಎಂದು ಬರೆಯಲಾಗಿದೆ. ನಯೀ ಸೋಚ್ ಅಭಿಯಾನದಲ್ಲಿ ಬಿಸಿಸಿಐ ಕೂಡ ಕೈಜೋಡಿಸಿರುವುದಕ್ಕೆ ಅಭಿಯಾನದ ನೇತೃತ್ವ ವಹಿಸಿರುವ ಸ್ಟಾರ್ ಇಂಡಿಯಾ ವಾಹಿನಿ ಕೃತಜ್ಞತೆ ಸಲ್ಲಿಸಿದೆ.

ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಅಮ್ಮನ ಪಾತ್ರ ಮಹತ್ವದ್ದಾಗಿದೆ. ವ್ಯಕ್ತಿಯ ಬೆಳವಣಿಗೆಯಲ್ಲಿ ತಾಯಿಯ ಆಶೀರ್ವಾದ, ಹಾರೈಕೆಯೂ ಇರುತ್ತದೆ. ತಮ್ಮ ಜೀವನದಲ್ಲಿ ಅವರ ಪಾತ್ರವನ್ನು ಗೌವರವವನ್ನು ಎತ್ತಿ ಹಿಡಿಯಲು ಈ ಅಭಿಯಾನ ಆರಂಭಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin