ಧೋಲಕ್ ಚಾಚು -ಚಮ್ಕಿ ಕೀ ಧುನಿಯಾ ಮರಳಿ ತಂದಿದೆ ಪೋಗೊ

ಈ ಸುದ್ದಿಯನ್ನು ಶೇರ್ ಮಾಡಿ

pogo
ಆಗಸ್ಟ್‌ನಲ್ಲಿ ಪೋಗೊ ವಾಹಿನಿಯ ಅಭಿಮಾನಿಗಳಿಗೆ ಸಂಸದ ಸುದ್ಧಿ ! ಸೀಸನ್ 2 ನಲ್ಲಿ ಧೋಲಕ್ ಚಾಚು ಹಾಗೂ ಚಮ್ಕಿ ಕೀ ಧುನಿಯಾ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1 ಗಂಟೆಗೆ ಮರಳಿ ವಾಪಸಾಗುತ್ತಿದ್ದು, ಅಭಿಮಾನಿಗಳಿಗೆ ಇನ್ನಷ್ಟು ಮನರಂಜನೆ ದೊರಕಲಿದೆ. ಧೋಲಕ್ ಚಾಚು ನ ಸೀಸನ್ 2, ಛೋಟಾ ಬೀಮ್‌ನ ಸಾಹಸಮಯ ಹಾಗೂ ರೋಮಾಂಚಕ ಕಥೆಗಳೊಂದಿಗೆ ಇನ್ನಷ್ಟು ಮನೋರಂಜನೆಯ ಭರವಸೆ ತಂದಿದೆ. ಅಷ್ಟೇ ಅಲ್ಲ! ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8 ಗಂಟೆಗೆ ಚಮ್ಕಿ ಕೀ ಧುನಿಯಾದ ರೋಮಾಂಚಕ ಧಾರವಾಹಿಯೊಂದಿಗೆ ಅಭಿಮಾನಿಗಳಿಗೆ ಇನ್ನಷ್ಟು ಆನಂದ ನಗು ತರುತ್ತಿದೆ ಪೊಗೊ.

ಜೊತೆಗೆ, ಹೊಸ ಸಾಹಸಗಳಲ್ಲಿ ತೊಡಗುವ ಛೋಟಾ ಭೀಮ್ ಮತ್ತು ಅವನ ಗೆಳೆಯರ ಸಾಹಸ ಪ್ರಯಾಣದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 9.30 ಕ್ಕೆ ಮತ್ತು ಬೆಳಿಗ್ಗೆ 10 ಗಂಟೆಗೆ ಮೋಜು ತುಂಬಿದ ಮೈಟಿ ರಾಜು ಎಪಿಸೋಡ್‌ಗಳೂ ಪ್ರಸಾರವಾಗುತ್ತವೆ. ಹಾಗಾಗಿ ನಿಮ್ಮ ಹುಚ್ಚು ನೆನಪುಗಳನ್ನು ಮರಳಿ ತರುತ್ತಿರುವ ಪೋಗೋಗೆ ಮತ್ತೊಮ್ಮೆ ಜೈಕಾರ ಹಾಕಿ.

► Follow us on –  Facebook / Twitter  / Google+

Facebook Comments

Sri Raghav

Admin