ನಂಜನಗೂಡು ಉಪಚುನಾವಣೆ : ಅಕ್ರಮವಾಗಿ ಸಾಗಿಸುತ್ತಿದ್ದ 2 ಲಕ್ಷರೂ ಹಣ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Black-Money--02

ನಂಜನಗೂಡು.ಮಾ.26-ತಾಲೂಕಿನ ಹುಲ್ಲಹಳ್ಳಿಯ ಚುನಾವಣಾ ಚೆಕ್‍ಪೋಸ್ಟ್‍ನಲ್ಲಿ ಅಕ್ರಮವಾಗಿ ಕೊಂಡೊಯ್ಯುತ್ತಿದ್ದ 2ಲಕ್ಷರೂ ನಗದನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಮೂವರ ವಿರುದ್ಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ನಿನ್ನೆ ಬೆಳಿಗ್ಗೆ 9.45ರ ಸಮಯದಲ್ಲಿ ಹುಲ್ಲಹಳ್ಳಿ-ಮೈಸೂರು ರಸ್ತೆಯಲ್ಲಿರುವ ಚುನಾವಣಾ ಚೆಕ್‍ಪೋಸ್ಟ್ ಬಳಿ ಉಪಚುನಾವಣೆಯ ಸೆಕ್ಟರ್ ಮ್ಯಾಜಿಸ್ಟ್ರೇಟ್ ಡಿ.ಪರಮೇಶ್ ನೇತೃತ್ವದ ಸಿಬ್ಬಂದಿಗಳ ತಂಡ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಮೈಸೂರಿನಿಂದ ಹುಲ್ಲಹಳ್ಳಿಯತ್ತ ಬರುತ್ತಿದ್ದ ಹುಂಡೈ ಕಾರಿನಲ್ಲಿ ಸಂಚರಿಸುತ್ತಿದ್ದ ಮೂವರು ಯಾವುದೇ ದಾಖಲೆಗಳಿಲ್ಲದೆ 2ಲಕ್ಷರೂ ನಗದು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ.

ಹೀಗಾಗಿ ಕಾರಿನಲ್ಲಿದ್ದ ಕೇರಳ ರಾಜ್ಯದ ವೈನಾಡು ಜಿಲ್ಲೆಯ ಮಾನಂದವಾಡಿ ನಿವಾಸಿಗಳಾದ ಸುಹೈಲ್(34ವರ್ಷ),ನೌವಾಲ್ ಕುನಿಯಲ್(34) ಹಾಗೂ ಸೈನುಲ್ ಅಬಿದ್(27) ಎಂಬುವರನ್ನು ವಶಕ್ಕೆ ಪಡೆದು ಮೂವರ ವಿರುದ್ಧ ಹುಲ್ಲಹಳ್ಳಿ ಪೊಲಿಸ್ ಠಾಣೆಯಲ್ಲಿ ಉಪಚುನಾವಣೆಯಲ್ಲಿ ಅಕ್ರಮವಾಗಿ ಹಣ ಸಾಗಾಣೆ ಆರೋಪದ ಮೇರೆಗೆ ಸೆಕ್ಟರ್ ಮ್ಯಾಜಿಸ್ಟ್ರೇಟ್ ಪರಮೇಶ್ ದೂರು ದಾಖಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin