ನಂದಿನಿ ಹಾಲಿನ ಪ್ಯಾಕೆಟ್ ಮೇಲೂ ಮತದಾನದ ಜಾಗೃತಿ

ಈ ಸುದ್ದಿಯನ್ನು ಶೇರ್ ಮಾಡಿ

Nandini--01

ಬೆಂಗಳೂರು, ಮೇ 8- ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈಗ ಕೆಎಂಎಫ್ ಕೂಡ ಮುಂದಾಗಿದೆ. ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಮೇ 12ರಂದು ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶವನ್ನು ಮುದ್ರಿಸಲಾಗಿದೆ. ಈಗಾಗಲೇ ಕೆಎಸ್‍ಆರ್‍ಟಿಸಿ ಪ್ರಯಾಣಿಕರಿಗೆ ನೀಡುವ ಟಿಕೆಟ್‍ನಲ್ಲೂ ಕೂಡ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಮುದ್ರಿಸಿದೆ. ಕೆಎಸ್‍ಆರ್‍ಟಿಸಿಯ ಮೈಸೂರು ನಗರ ಸಾರಿಗೆ, ಬಿಎಂಟಿಸಿ ಬಸ್‍ಗಳ ಒಳ ಭಾಗದಲ್ಲಿ ಸ್ಥಳ ಸೂಚಿಸುವ ಡಿಜಿಟಲ್ ಡಿಸ್‍ಪ್ಲೇನಲ್ಲೂ ಕೂಡ ಮತದಾನದ ಅರಿವು ಮೂಡಿಸುವ ಸಂದೇಶವನ್ನು ಬಿತ್ತರಿಸಲಾಗುತ್ತಿದೆ.

ಭಾರತದ ಚುನಾವಣಾ ಆಯೋಗ ಮತದಾನದ ಪ್ರಮಾಣ ಹೆಚ್ಚಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಂಡಿದ್ದು, ಅದರ ಜತೆಗೆ ಕೆಲವು ಸಂಸ್ಥೆಗಳು ಕೂಡ ಕೈ ಜೋಡಿಸಿವೆ. ಆಯೋಗವು ವಾಕಥಾನ್, ಜಾಹೀರಾತು, ಕ್ರೀಡಾಪಟುಗಳು, ಕಲಾವಿದರು, ಗಣ್ಯ ವ್ಯಕ್ತಿಗಳಿಂದ ಮತದಾನದ ಜಾಗೃತಿ ಮೂಡಿಸುವ ಸಂದೇಶಗಳನ್ನು ನೀಡಿದೆ.  ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 12ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ಮತಚಲಾಯಿಸಿ ಎಂಬ ಸಂದೇಶವನ್ನು ನೀಡಲಾಗುತ್ತಿದೆ.

Facebook Comments

Sri Raghav

Admin