ನಂಬರ್1 ಪಟ್ಟದತ್ತ ವಿರಾಟ್ ಕೊಹ್ಲಿ ಪಡೆ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

india

ಕೋಲ್ಕತ್ತಾ, ಸೆ.29- ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡದ 500ನೆ ಪಂದ್ಯಕ್ಕೆ ಸಾಕ್ಷಿಯಾಗಿದ್ದ ಕಾನ್ಪುರ ಟೆಸ್ಟ್‌ನಲ್ಲಿ ಗೆದ್ದು ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದ ಸನಿಹ ಬಂದಿರುವ ಕೊಹ್ಲಿ ಪಡೆಯು ದ್ವಿತೀಯ ಪಂದ್ಯದಲ್ಲೂ ಗೆಲ್ಲುವ ಹಾಟ್‌ಫೇವರಿಟ್ ತಂಡವಾಗಿದೆ. ನಾಳೆ ನಡೆಯುವ ಎರಡನೆ ಟೆಸ್ಟ್ ಪಂದ್ಯವು ಭಾರತ ಸ್ವದೇಶದಲ್ಲಿ 250 ನೆ ಆಡಲಿರುವುದು ಈ ಪಂದ್ಯಕ್ಕೂ ಸಾಕಷ್ಟು ಮಹತ್ವ ಬಂದಿದೆ. ಈ ಟೆಸ್ಟ್ ಅನ್ನು ಗೆಲ್ಲುವ ಮೂಲಕ ಕೊಹ್ಲಿ ಪಡೆ ಸರಣಿಯನ್ನು ವಶಪಡಿಸಿಕೊಳ್ಳುವುದಲ್ಲದೆ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರುವ ತವಕದಲ್ಲಿದೆ.

ಮಿಂಚುವರೇ ವಿರಾಟ್ ಕೊಹ್ಲಿ..?
ನಾಗ್ಪುರ ಟೆಸ್ಟ್‌ನ ಎರಡು ಇನ್ನಿಂಗ್ಸ್‌ನಲ್ಲೂ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ನಾಯಕ ವಿರಾಟ್ ಕೊಹ್ಲಿ ನಾಳಿನ ಪಂದ್ಯದಲ್ಲಿ ಪುಟಿದೇಳುವ ಎಲ್ಲ ಲಕ್ಷಣಗಳು ದಟ್ಟವಾಗಿ ಗೋಚರಿಸಿದೆ.

ಲಯ ಕಂಡುಕೊಳ್ಳುವವರೇ ಟೇಲರ್:
ಭಾರತ ತಂಡದ ವಿರಾಟ್ ಕೊಹ್ಲಿಯಂತೆ ವಿಫಲಗೊಂಡಂತೆ ನ್ಯೂಜಿಲೆಂಡ್ ತಂಡದಲ್ಲಿರುವ ಹಿರಿಯ ಆಟಗಾರ ರಾಸ್ ಟೇಲರ್ ಕೂಡ ಮೊದಲ ಟೆಸ್ಟ್‌ನಲ್ಲಿ ರನ್ ಬರವನ್ನು ಅನುಭವಿಸಿದ್ದಾರೆ. ಅವರು ಎರಡು ಇನ್ನಿಂಗ್ಸ್‌ನಲ್ಲೂ ಕ್ರಮವಾಗಿ 0 ಮತ್ತು 17 ರನ್‌ಗಳಿಸಿ ಬೇಸರ ಮೂಡಿಸಿದ್ದು ಈಡನ್ ಗಾರ್ಡನ್ ಮಿಂಚಿದರೆ ನ್ಯೂಜಿಲೆಂಡ್‌ನ ಬ್ಯಾಟಿಂಗ್ ಬಲ ಸದೃಢವಾಗಲಿದೆ.

ಗಂಭೀರ್‌ಗೆ ಧವನ್ ಪೈಪೋಟಿ
ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿರುವ ಕೆ.ಎಲ್.ರಾಹುಲ್ 2 ನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು ಆ ಸ್ಥಾನ ತುಂಬಲು ಗೌತಮ್ ಗಂಭೀರ್ ಹಾಗೂ ಶಿಖರ್‌ಧವನ್ ನಡುವೆ ಪೈಪೋಟಿ ಆರಂಭಗೊಂಡಿದ್ದು ಅಂತಿಮ 11ರ ಬಳಗದಲ್ಲಿ ಯಾರಿಗೆ ಸ್ಥಾನ ದೊರೆಯಲಿದೆ ಎಂಬುದು ಕೂಡ ಭಾರೀ ಕುತೂಹಲ ಮೂಡಿಸಿದೆ.

ಮತ್ತೆ ಸ್ಪಿನ್ನರ್‌ಗಳ ಮೋಡಿ:
ಕಾನ್ಪುರ ಪಿಚ್‌ನಂತೆ ಈಡನ್ ಗಾರ್ಡನ್ ಪಿಚ್ ಕೂಡ ಬೌಲರ್‌ಗಳಿಗೆ ಅನುಕೂಲವಾಗಿದ್ದು ವೇಗದ ಬೌಲರ್‌ಗಳಿಗಿಂತ ಸ್ಪಿನ್ ಬೌಲರ್‌ಗಳಿಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಉತ್ತಮ ಅವಕಾಶವಿದೆ. ಮೊದಲ ಪಂದ್ಯವನ್ನು ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರಜಡೇಜಾ ಜೋಡಿ ಮತ್ತೆ ಮೋಡಿ ಮಾಡುವ ಎಲ್ಲಾ ಲಕ್ಷಣಗಳಿವೆ. ನ್ಯೂಜಿಲೆಂಡ್‌ನಲ್ಲಿರುವ ಸ್ಪಿನ್ನರ್‌ಗಳು ಕೂಡ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಲಗಾಮು ಹಾಕುವತ್ತ ಗಮನ ಹರಿಸಿದ್ದಾರೆ. ಒಟ್ಟಾರೆ ಈಡನ್ ಗಾರ್ಡನ್‌ನಲ್ಲಿ ನಡೆಯುವ ಎರಡನೆ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಹಾಗೂ ಸರಣಿಯನ್ನು ವಶಪಡಿಸಿಕೊಳ್ಳುವತ್ತ ವಿರಾಟ್ ಪಡೆ ಚಿತ್ತ ಹರಿಸಿದ್ದರೆ, ಪಂದ್ಯವನ್ನು ಗೆದ್ದು ಸರಣಿಯಲ್ಲಿ ಕಮ್‌ಬ್ಯಾಕ್ ಆಗುವ ನಿರೀಕ್ಷೆಯಲ್ಲಿ ಕೇನ್ ವಿಲಿಯಮ್ಸ್ ಪಡೆ ಇದೆ.

ಹಿರಿಯ ಕ್ರಿಕೆಟಿಗರಿಗೆ ಸನ್ಮಾನ:
ಭಾರತ ಸ್ವದೇಶದಲ್ಲಿ 250 ಪಂದ್ಯವನ್ನು ಆಡುತ್ತಿರುವ ಸುಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌ನ ಉನ್ನತಿಗೆ ಶ್ರಮಿಸಿದ ಆಟಗಾರರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin