ನಕಲಿ ಆಭರಣ ಅಡವಿಟ್ಟು ಬ್ಯಾಂಕಿಗೆ 6.77 ಲಕ್ಷರೂ. ಪಂಗನಾಮ..!

ಈ ಸುದ್ದಿಯನ್ನು ಶೇರ್ ಮಾಡಿ

Fake-Gold--02ಕಾರವಾರ, ಅ.10- ನಕಲಿ ಆಭರಣಗಳನ್ನು ಅಡವಿಟ್ಟು , ಬ್ಯಾಂಕಿಗೆ ಸುಮಾರು 6.77 ಲಕ್ಷರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ಕುದ್ರಾ ಗ್ರಾಮದ ರಾಮಚಂದ್ರ, ಸೋನಾರವಾಡ ಗ್ರಾಮದ ಸಂದೀಪ್ ರಾಯ್ಕರ್, ಮಲ್ಲಾಪುರದ ಕಿರಣ್ ಹಾಗೂ ಅಂಜಲಿ ಎಂಬುವರು ಅಡವಿಟ್ಟಿದ್ದ ಚಿನ್ನಾಭರಣಗಳು ನಕಲಿ ಎಂಬುದು ತಿಳಿದು ಬರುತ್ತಿದ್ದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಚ್ಚರಿಗೊಂಡಿದ್ದಾರೆ.

ಅವರನ್ನು ಕರೆಸಿ ವಿಚಾರಣೆ ನಡೆಸಲು ಹೋದಾಗ ಇವರುಗಳು ತಲೆಮರೆಸಿಕೊಂಡಿರುವುದು ತಿಳಿದು ಬಂದ ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಅಡವಿಟ್ಟ ಚಿನ್ನಾಭರಣಕ್ಕೆ ಬಡ್ಡಿ ಕಟ್ಟದೆ ಇದ್ದುದರಿಂದ ನೊಟೀಸ್ ನೀಡಿದೆವು. ಆದರೆ ಗ್ರಾಹಕರು ಬರಲಿಲ್ಲ. ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂತು. ದುರಾದೃಷ್ಟವಶಾತ್ ಈ ಅವ್ಯವಹಾರದಲ್ಲಿ ಬ್ಯಾಂಕಿನ ಸಿಬ್ಬಂದಿ ರಾಜಕುಮಾರ ಎಂಬುವರ ಪಾತ್ರ ಇರುವ ಬಗ್ಗೆಯೂ ತಿಳಿದು ಬಂದಿದೆ ಎಂದು ಬ್ಯಾಂಕ್‍ನ ಮ್ಯಾನೇಜರ್ ತಿಳಿಸಿದ್ದಾರೆ. ಒಟ್ಟಾರೆ ಸುಮಾರು 7 ಲಕ್ಷ ರೂ. ಬ್ಯಾಂಕಿಗೆ ಬರಬೇಕಾಗಿದ್ದು , ಈ ಬಗ್ಗೆ ಮಲ್ಲಿಪಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin