ನಕಲಿ ಕ್ರೆಡಿಟ್ ಕಾರ್ಡ್‍ಗಳನ್ನು ಸೃಷ್ಟಿಸಿ, ಬ್ಯಾಂಕ್‍ಗಳಿಗೆ ಲಕ್ಷಾಂತರ ರೂ. ವಂಚಿಸಿದವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Bank-Chir

ಬೆಂಗಳೂರು, ಜು.7- ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಿಧ ಬ್ಯಾಂಕ್‍ಗಳಿಂದ ಕ್ರೆಡಿಟ್ ಕಾರ್ಡ್‍ಗಳನ್ನು ಪಡೆದುಕೊಂಡು ಬ್ಯಾಂಕ್‍ಗಳಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವಂಚಕರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕೇರಳದ ತಿರುವನಂತ ಪುರಂನ ನಿರನ್ ಜೈಪಾಲ್ (37) ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಅಬೂಬ ಕರ್ (39) ಬಂಧಿತ ವಂಚಕ. ಬೆಂಗಳೂರಿನ ಸಹಕಾರ ನಗರದ 11ನೆ ಕ್ರಾಸ್‍ನಲ್ಲಿ ವಾಸವಾಗಿದ್ದ ಆರೋಪಿ ನಿರನ್ ಜೈಪಾಲ್, ಸಹಚರ ಅಬೂಬಕರ್ ಜತೆ ಸೇರಿ ನಗರದ ಎಂಜಿ ರಸ್ತೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಅಸಲಿ ಎಂದು ನಂಬಿಸಿ ವಿವಿಧ ಬ್ಯಾಂಕ್‍ಗಳಿಂದ ಕ್ರೆಡಿಟ್ ಕಾರ್ಡ್‍ಗಳನ್ನು ಪಡೆದುಕೊಂಡು ಬ್ಯಾಂಕ್‍ಗಳಿಗೆ ವಂಚಿಸುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಖಚಿತ ಮಾಹಿತಿ ಸಂಗ್ರಹಿಸಿದ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಇಬ್ಬರು ವಂಚಕರನ್ನು ಬಂಧಿಸಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ಗೃಹೋಪಯೋಗಿ ಉಪಕರಣಗಳು, ನಕಲಿ ದಾಖಲೆಗಳು, ಲ್ಯಾಪ್‍ಟಾಪ್, ಟ್ಯಾಬ್ಸ್, ಪ್ರಿಂಟರ್‍ಗಳು ಮೊಬೈಲ್ ಸೇರಿದಂತೆ ಕಾರು, ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಆರೋಪಿಗಳು ನಕಲಿ ಚುನಾವಣಾ ಗುರುತಿ ಚೀಟಿ, ಚಾಲನಾ ಪರವಾನಗಿ, ಪ್ರತಿಷ್ಠಿತ ಕಂಪೆನಿಗಳ ನಕಲಿ ಗುರುತಿನ ಪತ್ರಗಳನ್ನು ಸೃಷ್ಟಿಸಿ ಪ್ಯಾನ್ ಕಾರ್ಡ್ ಪಡೆಯಲು ಬ್ಯಾಂಕ್‍ಗಳಿಗೆ ಸಲ್ಲಿಸಿ ಪ್ಯಾನ್‍ಕಾರ್ಡ್ ಮತ್ತು ಸಿಮ್‍ಕಾರ್ಡ್‍ಗಳನ್ನು ಪಡೆದುಕೊಂಡು ನಕಲಿ ವಿಳಾಸದ ದಾಖಲೆ ಮತ್ತು ಪ್ಯಾನ್‍ಕಾರ್ಡ್‍ನ ದಾಖಲೆಗಳನ್ನು ಸಲ್ಲಿಸಿ ವಿವಿಧ ಬ್ಯಾಂಕ್‍ಗಳಲ್ಲಿ ಕ್ರೆಡಿಟ್ ಕಾರ್ಡ್‍ಗಳನ್ನು ಪಡೆದುಕೊಂಡು ಅವುಗಳನ್ನು ಸ್ವಲ್ಪ ಅವಧಿಗೆ ಬಳಸಿ ಬ್ಯಾಂಕ್‍ಗೆ ಹಣ ಮರುಪಾವತಿ ಮಾಡಿ ಬ್ಯಾಂಕ್‍ನ ವಿಶ್ವಾಸ ಗಳಿಸುತ್ತಿದ್ದರು.

ತದನಂತರ ಬ್ಯಾಂಕ್‍ನಿಂದ ಕ್ರೆಡಿಟ್ ಕಾರ್ಡ್‍ನ ವೆಚ್ಚದ ಮಿತಿಯನ್ನು ಹೆಚ್ಚು ಮಾಡಿಕೊಂಡು ಸದರಿ ಕ್ರೆಡಿಟ್‍ಕಾರ್ಡ್ ಬಳಸಿ ಪ್ರತಿಷ್ಠಿತ ಚಿನ್ನದ ಅಂಗಡಿಗಳಲ್ಲಿ ಆಭರಣ ಹಾಗೂ ಉಪಕರಣಗಳ ಅಂಗಡಿಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಅಲ್ಲದೆ ಮೊಬೈಲ್ ಖರೀದಿಸಿ ಅವುಗಳನ್ನು ಒಎಲ್‍ಎಕ್ಸ್‍ನಲ್ಲಿ ಪ್ರಕಟಿಸಿ ಮತ್ತು ನೇರವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಿ ವಿಲಾಸಿ ಜೀವನ ನಡೆಸುತ್ತ ವಿದೇಶ ಪ್ರವಾಸ ಕೂಡ ಕೈಗೊಂಡಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin