ನಕಲಿ ಡಿಟೆಕ್ಟಿವ್ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 26- ವಿದ್ಯಾರ್ಥಿ ಯನ್ನು ವಂಚಿಸಿದ ನಕಲಿ ಪ್ರೈವೇಟ್ ಡಿಟೆಕ್ಟೀವ್ ಒಬ್ಬರನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರದ 1ನೇ ಹಂತದ ನಿವಾಸಿ, ಭಾರದ್ವಾಜ್ ಶರ್ಮಾ (53) ಬಂಧಿತ ಆರೋಪಿ.

ಘಟನೆ ವಿವರ: ಈತ ಶಿವರಾಮ ಪೇಟೆಯ ವಿನೋಭಾರಸ್ತೆಯ ಎಸ್‍ಬಿಐ ಕಟ್ಟಡದ ಮೊದಲನೆ ಮಹಡಿಯ ಇಲೈಟ್ ಡಿಟೆಕ್ಟೀವ್ ಇನ್‍ವೆಸ್ಟಿಗೇಷನ್ ಎಂಬ ಕಚೇರಿ ನಡೆಸುತ್ತಿದ್ದಾನೆ.

ಮಹಿಳೆಯೊಬ್ಬರು ತಮ್ಮ ಮಗಳಿಗೆ ಯಾರೋ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆತ ಯುವತಿಯ ಜೊತೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಕಚೇರಿಗೆ ಕರೆಸಿಕೊಂಡು ನೀನು ಯುವತಿಯನ್ನು ಪ್ರೀತಿಸುತ್ತಿದ್ದೀಯಾ, ವಂಚನೆ ಮಾಡುತ್ತಿದ್ದೀಯಾ ಈ ಬಗ್ಗೆ ಟಿವಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ಹೆದರಿಸಿದ್ದಾನೆ.

ನಂತರ ವಿದ್ಯಾರ್ಥಿಯ ಪೊಷಕರನ್ನು ಕಚೇರಿಗೆ ಕರೆಸಿಕೊಂಡು ನಿಮ್ಮ ಮಗನ ವಿರುದ್ಧ ದೂರು ಬಂದಿದೆ. ಇದನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿ 50ಸಾವಿರ ಹಣವನ್ನು ಮತ್ತು ವಿದ್ಯಾರ್ಥಿ ಮೊಬೈಲ್, ಲ್ಯಾಪ್‍ಟಾಪ್‍ಗಳನ್ನು ಕಿತ್ತುಕೊಂಡಿದ್ದಾನೆ. ವಿದ್ಯಾರ್ಥಿಯೂ ಮೊಬೈಲ್, ಲ್ಯಾಪ್‍ಟಾಪ್ ವಾಪಸ್ ನೀಡುವಂತೆ ಕೇಳಿದ್ದಾನೆ.

ಅದಕ್ಕೆ ಭಾರದ್ವಾಜ್ ಇನ್ನೂ 50ಸಾವಿರ ಹಣ ನೀಡು ಆಗ ನಿನ್ನ ವಸ್ತುಗಳನ್ನು ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಇದರಿಂದ ಬೇಸತ್ತ ಪೊಷಕರು ದೇವರಾಜ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಡಿಸಿಪಿ ಎಂ. ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ ಠಾಣೆ ಎಸಿಪಿ ಬದರೀನಾಥ್, ಇನ್ಸ್‍ಪೆಕ್ಟರ್ ಶ್ರೀನಿವಾಸ್, ಸಬ್ ಇನ್ಸ್‍ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಈತನನ್ನು ಬಂಧಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ