ನಕಲಿ ನೋಟು ಕಳ್ಳಸಾಗಣೆ : ಪ್ರಮುಖ ಬಂದರುಗಳು ಸೇರಿ ದೇಶದ ವಿವಿಧೆಡೆ ತೀವ್ರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Fake-Notes--01

ಚೆನ್ನೈ, ಮಾ.21-ಭಾರತದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಪಾಕಿಸ್ತಾನ ಸೇರಿದಂತೆ ಏಷ್ಯಾದ ಕೆಲವು ದೇಶಗಳು ಕುತಂತ್ರ ನಡೆಸುತ್ತಿವೆ. ಆ ದೇಶಗಳಿಂದ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಸ್ಟಮ್ಸ್ ಮತ್ತು ಆದಾರ ಗುಪ್ತಚರ ನಿರ್ದೇಶನಾಲಯ (ಡಿಐಆರ್) ಅಧಿಕಾರಿಗಳು ಇಂದು ಸಹ ದೇಶದ ಪ್ರಮುಖ ನಗರಗಳ ಬಂದರುಗಳು ಮತ್ತಿತರ ಪ್ರದೇಶಗಳಲ್ಲಿ ತೀವ್ರ ಶೋಧ ಮುಂದುವರಿಸಿದ್ದಾರೆ.
ಹೊಸ 500 ಮತ್ತು 2,000 ರೂ.ಗಳ ಮುಖಬೆಲೆಯ ನಕಲಿ ಕರೆನ್ಸಿಗಳೂ ಸೇರಿದಂತೆ ವಿವಿಧ ಖೋಟಾ ನೋಟುಗಳನ್ನು ಕಳ್ಳಸಾಗಣೆ ಮೂಲಕ ದೇಶದೊಳಗೆ ತರಲು ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಂಬೈ, ಚೆನ್ನೈ, ಕೊಲ್ಕತಾ, ಕಾನ್ಪುರ, ತುಘಲಕಾಬಾದ್ ಸೇರಿದಂತೆ ದೇಶದ ವಿವಿಧೆಡೆ ತೀವ್ರ ಶೋಧ ಮುಂದುವರಿದಿದೆ.   ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಥವಾ ನೇಪಾಳದಿಂದ ನಕಲಿ ನೋಟುಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಆ ದೇಶಗಳಿಂದ ಬಂದಿರುವ ಎಲ್ಲ ಸರಕುಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.   ಇತ್ತೀಚಿನ ದಿನಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದ್ದು, ಅನೇಕ ಪ್ರಕರಣಗಳು ಪತ್ತೆಯಾಗಿವೆ. ಪಾಕಿಸ್ತಾನ ಸೇರಿದಂತೆ ಕೆಲವು ದೇಶಗಳು ಭಾರತದೊಳಗೆ ಖೋಟಾ ಕರೆನ್ಸಿಗಳನ್ನು ತರಲು ಕುತಂತ್ರ ನಡೆಸುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin