ನಕಲಿ ನೋಟು ಪತ್ತೆಗೆ ಆರ್‍ಬಿಐನಿಂದ ಹೊಸ ಮಷಿನ್..!

ಈ ಸುದ್ದಿಯನ್ನು ಶೇರ್ ಮಾಡಿ

RBI--01

ನವದೆಹಲಿ, ಜು.23-ರದ್ದಾಗಿರುವ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳಿಂದ ನಕಲಿ ಕರೆನ್ಸಿಗಳನ್ನು ವಿಂಗಡಿಸಲು ಅನುಕೂಲವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) 12 ಕರೆನ್ಸಿ ಪರಿಶೀಲನಾ ವ್ಯವಸ್ಥೆಯ ಯಂತ್ರಗಳನ್ನು ಹೊಂದಲಿದೆ.  ಕಳೆದ ವರ್ಷ ನವೆಂಬರ್ 9 ರಂದು ನೋಟು ಅಮಾನೀಕರಣಗೊಂಡ ನಂತರ 500/1000 ರೂ. ಮುಖಬೆಲೆಯ ಹಳೇ ನೋಟುಗಳ ರಾಶಿ ರಾಶಿಯನ್ನು ಎಣಿಕೆ ಮಾಡುವ ಕಾರ್ಯದಲ್ಲಿ ಆರ್‍ಬಿಐ ನಿರತವಾಗಿದೆ.

ಈ ಹಳೇ ನೋಟುಗಳ ನಡುವೆ ಸೇರಿರುವ ನಕಲಿ ನೋಟುಗಳನ್ನು ಪ್ರತ್ಯೇಕಿಸಲು ಕರೆನ್ಸಿ ಪರಿಶೀಲನೆ ಮತ್ತು ಸಂಸ್ಕರಣಾ ವ್ಯವಸ್ಥೆ (ಸಿಬಿಪಿಎಸ್) ಯಂತ್ರಗಳನ್ನು ಆರು ತಿಂಗಳ ಕಾಲ ಆರ್‍ಬಿಐ ಬಳಸಲಿದೆ. ಈ ಯಂತ್ರೋಪಕರಣಗಳು ಪ್ರತಿ ಸೆಕೆಂಡ್‍ಗೆ 30 ನೋಟುಗಳನ್ನು ಎಣಿಕೆ ಮಾಡುವ ಸಾಮಥ್ರ್ಯ ಹೊಂದಿದೆ. ಅಲ್ಲದೆ ನಕಲಿ ನೋಟುಗಳನ್ನು ಪ್ರತ್ಯೇಕಿಸಲು ನೆರವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin