ಫೋನ್ ಮಾಡಿ, ಎಟಿಎಂ ನಂಬರ್ ಪಡೆದು 49,999 ಪಂಗನಾಮ..!

ಈ ಸುದ್ದಿಯನ್ನು ಶೇರ್ ಮಾಡಿ

Debit-Card-Fake-Call
ಕೆಜಿಎಫ್, ಫೆ.28- ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಎಟಿಎಂ ಕಾರ್ಡಿನ ನಂಬರ್ ಪಡೆದು 49,999 ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ಕಾರಹಳ್ಳಿಯ ಪೆರುಮಾಳ್ ಎಂಬುವರಿಗೆ ಅಪರಿಚಿತನೊಬ್ಬ ಕರೆ ಮಾಡಿ, ನಾನು ಎಸ್‍ಬಿಐ ಬ್ಯಾಂಕ್ ಮಾನೇಜರ್ ಮಾತನಾಡುತ್ತಿದ್ದೇನೆ. ನಿಮ್ಮ ಎಟಿಎಂ ಕಾರ್ಡ್ ನಂಬರ್ ಹೇಳುವಂತೆ ಹಾಗೂ ನಂತರ ಒಟಿಪಿ ನಂಬರ್ ತಿಳಿಸುವಂತೆ ಕೇಳುತ್ತಾನೆ. ಅದನ್ನು ನಂಬಿದ ಪೆರುಮಾಳ್ ಅವರು ಕೇಳಿದ ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ. ಕೊಂಚ ಸಮಯದಲ್ಲಿಯೇ ಎರಡು ಕಂಪೆನಿಗಳಿಗೆ ಒಟ್ಟು 49,999 ರೂಪಾಯಿ ಡ್ರಾ ಆಗಿರುವುದು ಕಂಡು ಬಂದಿದೆ. ಈ ಸಂಬಂಧವಾಗಿ ಪೆರುಮಾಳ ನೀಡಿದ ದೂರಿನನ್ವಯ ಸಿಇಎನ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.  ಪೋನ್ ನಂಬರ್ 7296044984 ಆಗಿದ್ದು, ಓಲಾ ಕ್ಯಾಬ್ ಮತ್ತು ಪ್ಯೂಜರ್‍ಪೇ ಅಕೌಂಟ್‍ಗೆ ಹಣ ವರ್ಗಾವಣೆಯಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin