ನಕಲಿ ಮತದಾರರಿಂದ ಆಗುತ್ತಿರುವ ಅನ್ಯಾಯ ತಪ್ಪಿಸಿ

ಈ ಸುದ್ದಿಯನ್ನು ಶೇರ್ ಮಾಡಿ

mandya--fish--mans

ಮಂಡ್ಯ, ಆ.15- ಜಿಲ್ಲೆಯಲ್ಲಿ ನಕಲಿ ಮೀನುಗಾರರು ನಮ್ಮ ಸಮುದಾಯದ ಮೀನುಗಾರರನ್ನು ತುಳಿಯುತ್ತಿದ್ದಾರೆ. ಇದರಿಂದ ಗಂಗಾಮತಸ್ಥ ಆಗುತ್ತಿರುವ ಜನಾಂಗಕ್ಕೆ ಅನ್ಯಾಯ ತಡೆಗಟ್ಟಬೇಕೆಂದು ಗಂಗಾಮತಸ್ಥ ಸಂಘದ ಅಧ್ಯಕ್ಷ ಎನ್. ನಂಜುಂಡಯ್ಯ ತಿಳಿಸಿದರು.ಗಂಗಾಮತಸ್ಥ, ಬೆಸ್ತರ, ಮೀನುಗಾರರ ಸಹಕಾರ ಸಂಘಗಳ ಒಕ್ಕೂಟದ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಎಲ್ಲ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಲು ಮಂಡ್ಯದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವಾರು ಗಣ್ಯರು, ಅಧಿಕಾರಿಗಳನ್ನು ಸಮಾವೇಶಕ್ಕೆ ಕರೆದು ಅವರ ಸಮ್ಮುಖದಲ್ಲಿ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದರು.ಈ ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ನಾಲ್ಕೈದು ಸಾವಿರ ಸಂಖ್ಯೆಯಲ್ಲಿ ಸಮಾಜದ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.  ಮೀನುಗಾರಿಕೆ ಸಹಕಾರ ಸಂಘದಿಂದಲೇ ಗಂಗಾಮತಸ್ಥ ಸಂಘಗಳಿಗೆ ಕೆರೆಗಳಲ್ಲಿ ಮೀನು ಹಿಡಿಯುವ ಹಕ್ಕನ್ನು ನೀಡಬೇಕು. ನಿವೇಶನ ಹಂಚಲು ಸಂಘಗಳ ಮೂಲಕವೇ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೂ ಸಚಿವರನ್ನು ಒತ್ತಾಯಿಸಲಾಗುವುದು ಎಂದರು.ಸಮಾಜದ ಮುಖಂಡರಾದ ಚಿಕ್ಕಣ್ಣ, ಗಾಯಿತ್ರಿ, ಚನ್ನಪ್ಪ, ಈರಯ್ಯ, ಹೊನ್ನಪ್ಪ, ರಜನಿ, ಕುಮಾರಸ್ವಾಮಿ, ರಮೇಶ್ ಇತರರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin