ನಕಲಿ ವಾಚುಗಳನ್ನು ಮಾರಾಟ ಮಾಡುತ್ತಿದ್ದ ಮೂವರ ಬಂಧನ : 1.08 ಕೋಟಿ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

3Arrested

ಬೆಂಗಳೂರು, ಡಿ.23- ಪ್ರತಿಷ್ಠಿತ ಕಂಪೆನಿಗಳ ಕೈಗಡಿಯಾರಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ 1 ಕೋಟಿ 8 ಲಕ್ಷ 20 ಸಾವಿರ ರೂ. ಮೌಲ್ಯದ 541 ನಕಲಿ ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ.  ಜೆ.ಜೆ.ನಗರದ ಷಫಿವುಲ್ಲಾ (40), ಯಲಹಂಕದ ಅಬ್ರಾರ್ (23) ಮತ್ತು ಗೋರಿಪಾಳ್ಯದ ಖಲೀಂ (34) ಬಂಧಿತ ಆರೋಪಿಗಳು. ರ್ಯಾಡೋ, ಹುಬ್ಲಾಟ್, ಟಿಸ್ಸೋಟ್, ಕಲ್‍ವಿನ್, ಓಮೆಗಾ, ಕ್ರಿಶ್ಚಿಯನ್ ಡಿಯೋರ್ ಮತ್ತಿತರ ಪ್ರತಿಷ್ಠಿತ ಕಂಪೆನಿಗಳ ನಕಲಿ ಕೈಗಡಿಯಾರಗಳನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಮುಖ ಕಂಪೆನಿಗಳ ಅಧಿಕೃತ ಪ್ರತಿನಿಧಿಯಾದ ಪ್ರಮೋದ್‍ಕುಮಾರ್ ಎಂಬುವವರು ಚಿಕ್ಕಪೇಟೆಯಲ್ಲಿ ನಕಲಿ ವಾಚ್‍ಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ದೂರು ನೀಡಿದ್ದರ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರು ಚಿಕ್ಕಪೇಟೆಯಲ್ಲಿ ನಕಲಿ ವಾಚ್ ಮಾರಾಟ ಮಾಡುತ್ತಿದ್ದ ಅಂಗಡಿಗಳಾದ ಶಫಿವುಲ್ಲಾ ವಾಚ್ ಶಾಫ್, ಎ.ಜೆ.ಟೈಮ್ಸ್ , ಎ.ಎಂ.ಟೈಮ್ಸ್ ಸೆಂಟರ್‍ಗಳ ಮೇಲೆ ದಾಳಿ ಮಾಡಿ ನಕಲಿ ವಾಚ್ ಮಾರಾಟ ಮಾಡುತ್ತಿದ್ದ ಈ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಮುಂಬೈ, ಚೆನ್ನೈನಿಂದ 3 ಸಾವಿರದಿಂದ 4 ಸಾವಿರಗಳಿಗೆ ಕೈಗಡಿಯಾರಗಳನ್ನು ಖರೀದಿಸಿ ತಂದು ರ್ಯಾಡೋ, ಹುಬ್ಲಾಟ್, ಟಿಸ್ಸೋಟ್, ಕಲ್‍ವಿನ್, ಓಮೆಗಾ, ಕ್ರಿಶ್ಚಿಯನ್ ಡಿಯೋರ್ ಮತ್ತಿತರ ಪ್ರತಿಷ್ಠಿತ ಕಂಪೆನಿಗಳ ವಾಚ್‍ಗಳೆಂದು ನಂಬಿಸಿ 7 ಸಾವಿರದಿಂದ 8 ಸಾವಿರ ರೂ.ಗಳಿಗೆ ಮಾರಾಟ ಮಾಡಿ ವಂಚಿಸುತ್ತಿದ್ದರೆಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಸಂಬಂಧ ಚಿಕ್ಕಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin