ನಗದು ಭಾಗ್ಯ ರದ್ದುಗೊಳಿಸದಿದ್ದರೆ ಪಡಿತರ ವಿತರಣೆ ಮಾಡಲ್ಲ : ವಿತರಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Ration-Card-01

ಬೆಂಗಳೂರು,ಜ.19-ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಕಾರ್ಡುದಾರರಿಗೆ ಪಡಿತರ ಬದಲು ನಗದು ಕೂಪನ್ ಜಾರಿಗೊಳಿಸದಿದ್ದರೆ ಮುಂದಿನ ತಿಂಗಳಿನಿಂದ ಪಡಿತರ ಧಾನ್ಯ ವಿತರಣೆ ಮಾಡದಿರಲು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಮುಂದಾಗಿದೆ.  ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ವಿತರಕರ ಸಂಘ ತಕ್ಷಣವೇ ನಗದು ಭಾಗ್ಯ ಹಿಂಪಡೆದು ಹಿಂದಿನ ಯಥಾಸ್ಥಿತಿಯನ್ನು ಮುಂದುವರೆಸಬೇಕೆಂದು ಮನವಿ ಮಾಡಿದ್ದಾರೆ.

ನಗದು ಭಾಗ್ಯ ಸಾಕಷ್ಟು ದುರುಪಯೋಗವಾಗಲಿದ್ದು , ಫಲಾನುಭವಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಕೂಪನ್ ಅಳವಡಿಸಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡುದಾರರು ತರುವ ಕೂಪನ್‍ನ್ನು ಪಡೆದು ಪಡಿತರ ವಿತರಿಸುವುದು ನಮ್ಮ ಕರ್ತವ್ಯ. ಅಪ್‍ಲೋಡ್ ಮಾಡುವುದು ಅಧಿಕಾರಿಗಳ ಹೊಣೆಯಾಗಿದ್ದು , ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದು ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಆಕ್ಷೇಪಿಸಿದ್ದಾರೆ.  ಪ್ರತಿ ಕ್ವಿಂಟಾಲ್‍ಗೆ 70 ರೂ. ಕಮೀಷನ್ ನೀಡುತ್ತಿರುವುದನ್ನು 150 ರೂ.ಗೆ ಹೆಚ್ಚಿಸಬೇಕೆಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಈ ಕುರಿತು ಮುಖ್ಯಮಂತ್ರಿಗಳು, ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಹಲವು ಬಾರಿ ಮಾತುಕತೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2014ರಿಂದ ಅನ್ವಯವಾಗುವಂತೆ ಮಾಲೀಕರ ಖಾತೆಗೆ ಹೆಚ್ಚುವರಿ ಕಮೀಷನ್ ನೀಡುತ್ತೇವೆಂದು ಸರ್ಕಾರ ನೀಡಿದ ಭರವಸೆ ಹುಸಿಯಾಗಿ ಉಳಿದಿದೆ. ತಕ್ಷಣವೇ ಹಣ ಜಮೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.  2017ರ ಮಾರ್ಚ್ ತಿಂಗಳೊಳಗೆ ಎಲ್ಲ ಮಾಲೀಕರು ಸ್ವಂಚ ಖರ್ಚಿನಲ್ಲಿ ಲ್ಯಾಪ್‍ಟ್ಯಾಪ್, ಪ್ರಿಂಟರ್, ಯುಪಿಎಸ್‍ಸಿ ಖರೀದಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಬೇಕಾದ ಹಣವನ್ನು ಭರಿಸಲು ಸಾಧ್ಯವಿಲ್ಲದ ಕಾರಣ ಸರ್ಕಾರ 50 ಸಾವಿರ ಭರಿಸಬೇಕೆಂದು ಕೋರಿದ್ದಾರೆ.

ನಾನ್‍ಗ್ಯಾಸ್ ಕಾರ್ಡ್‍ದಾರರಿಗೆ ಎಂದಿನಂತೆ 5 ಲೀಟರ್ ಸೀಮೆಎಣ್ಣೆ ವಿತರಣೆ ಮಾಡುವುದು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮಗಳಲ್ಲಿ ಅಧಿಕಾರಿಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ಖಾಸಗಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆ.14ರಂದು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಕೃಷ್ಣಪ್ಪ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin