ನಗದು ರಹಿತ ವ್ಯವಹಾರ ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

Cashless1

ದೊಡ್ಡ ನೋಟು ರದ್ಧತಿ ನಂತರ ದೇಶದಲ್ಲಿ ಡಿಜಿಟಲ್ ಪೇಮೆಂಟ್ ಅಥವಾ ನಗದು ರಹಿತ ವ್ಯವಹಾರ ಪ್ರಮುಖ ಪಾತ್ರ. ಈ ಹಿನ್ನೆಲೆಯಲ್ಲಿ ಸರ್ಕಾರ ನಗದು ರಹಿತ ವ್ಯವಹಾರದ ಉತ್ತೇಜನಕ್ಕೆ ಹಲವಾರು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ.  ಹೊಸದಾದ ತಂತ್ರಜ್ಞಾನದ ಮೂಲಕ ಹಣದ ವಹಿವಾಟು ಹೆಚ್ಚುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಜನಸಾಮಾನ್ಯರಲ್ಲಿ ಈ ವ್ಯವಹಾರ ನಡೆಸಲು ಕೆಲವು ಗೊಂದಲಗಳು ಉದ್ಭವಿಸಿವೆ. ಆದರೆ ಎಲ್ಲರಿಗೂ ಇದು ಅನಿವಾರ್ಯವಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯುವುದು ಅನಿವಾರ್ಯವೆನಿಸಿದೆ. ಈಗಾಗಲೇ ನಗದು ರಹಿತ ವ್ಯವಹಾರಕ್ಕೆ ಬ್ಯಾಂಕುಗಳ ಎಟಿಎಮ್ ಇದೆ. ಅಲ್ಲದೆ ಪಿಓಎಸ್ ಮೂಲಕವೂ ವ್ಯವಹರಿಸಬಹುದು. ಪ್ರಸ್ತುತ ದೇಶದಾದ್ಯಂತ 6.5ಲಕ್ಷ ಪಾಯಿಂಟ್ ಆಫ್ ಸೇಲ್ ಯಂತ್ರಗಳಿದ್ದು ಜನಸಂಖ್ಯೆ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲೂ ಈ ಯಂತ್ರಗಳ ಸೌಲಭ್ಯ ಹೆಚ್ಚಿಸಲಾಗುವುದು.ನಗದು ರಹಿತ ವಹಿವಾಟು ಎಂದರೇನು ?

ಯಾವುದೇ ವಸ್ತುಗಳ ವ್ಯಾಪಾರ, ಸೇವಾ ಶುಲ್ಕ ಇಂತಹ ಇತರೆ ಹಣ ಪಾವತಿಸುವ ಮತ್ತು ಪಡೆಯುವ ವಹಿವಾಟುಗಳನ್ನು ನೋಟು ಮತ್ತು ಚಿಲ್ಲರೆಗಳನ್ನು ಬಳಸದೆ ಡಿಜಿಟಲ್ ಮೂಲಕ ವ್ಯವಹಾರ ಮಾಡುವುದು. ಬ್ಯಾಂಕಿನಲ್ಲಿ ಖಾತೆ ಹೊಂದಿರುವವರಿಗೆ ರೂಪೇ ಡೆಬಿಟ್ ಕಾರ್ಡ್ ಅಲ್ಲದೆ ಗ್ರಾಹಕರಿಗೆ ಕ್ರೆಡಿಟ್ ಮತ್ತು ಪ್ರಿಪೇಡ್ ಕಾರ್ಡ್ ಕೂಡ ನೀಡಲಾಗುತ್ತದೆ.   ಈ ಕಾರ್ಡನ್ನು ಉಪಯೋಗಿಸಿ, ಬ್ಯಾಂಕ್ ಆಫ್ ಸೇಲ್ ಮಿಷನ್ ಮೂಲಕ ಸ್ವೈಪ್ ಮಾಡಿ ನಗದು ರಹಿತ ವಹಿವಾಟು ಮಾಡಬೇಕಾಗುತ್ತದೆ. ಕಾರ್ಡ್‍ಗಳ ಸೌಲಭ್ಯದೊಂದಿಗೆ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಕಿಸಾನ್ ಕಾರ್ಡ್ ಬದಲಾಗಿಯೂ ರೂಪೇ ಕಾರ್ಡ್‍ನ್ನು ಕೊಡುತ್ತಿದೆ.  ಇದಕ್ಕೆ ಸರ್ಕಾರದ ಆದೇಶವು ಇದೆ. ರೈತರು ಇನ್ನೂ ಬದಲಾಯಿಸಿಕೊಳ್ಳಬೇಕು. ಬ್ಯುಸಿನೆಸ್ ಕರೆಸ್ಪಾನ್‍ಡೆಂಟ್ ಬಿಸಿ ಸುವಿಧಾ ಅಥವಾ ಬ್ಯಾಂಕ್ ಮಿತ್ರದಿಂದ ಮನೆ ಬಾಗಿಲಿಗೆ ರೂಪೇ ಕಾರ್ಡ್ ತಲುಪಲಿದ್ದು, ಇದೊಂದು ಇಂಟರ್‍ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ.
ಹಲವರು ನೆಫ್ಟ್(ಎನ್‍ಇಎಫ್‍ಟಿ) ಮತ್ತು ಆರ್‍ಟಿಜಿಎಸ್ ಉಪಯೋಗಿಸಿಕೊಂಡು ಪ್ರತ್ಯೇಕವಾಗಿ 2 ಲಕ್ಷದವರೆಗೂ ವ್ಯವಹಾರ ಮಾಡಬಹುದು. ಇದರೊಂದಿಗೆ ಚೆಕ್ ಮೂಲಕವೂ ಯಾವುದೇ ಶುಲ್ಕ ಇಲ್ಲದೇ ಹಣ ವರ್ಗಾಯಿಸಬಹುದು.

ಮೊಬೈಲ್ ಬ್ಯಾಂಕಿಗ್:

ಈಗ ಪ್ರತಿಯೊಬ್ಬರು ಮೊಬೃಲ್ ಹೊಂದಿರುವುದರಿಂದ ಬೀಮ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು, ರೂ. 50 ರಿಂದ 1 ಲಕ್ಷ ರೂ.ವರೆಗೂ ಹಣ ವರ್ಗಾವಣೆ ಪ್ರಕ್ರಿಯೆ ನಡೆಸಬಹುದಾಗಿದೆ.
ಪಾಯಿಂಟ್ ಆಫ್ ಸೇಲ್ ಮಿಷನ್‍ಗಳ ಸಹಯೋಗದೊಂದಿಗೂ ಯಾವುದೇ ವ್ಯಾಪಾರ ಮಳಿಗೆಗಳ ಹಣ ಪಾವತಿಗೆ ಇದನ್ನು ಬಳಸುವುದು. 5000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ನಬಾರ್ಡ್ ವತಿಯಿಂದ 2 ಪಾಯಿಂಟ್ ಆಫ್ ಸೇಲ್ಸ್ ಮಿಷನ್‍ನ್ನು ಬ್ಯಾಂಕಿನ ಸಹಕಾರದೊಂದಿಗೆ ಉಚಿತವಾಗಿ ಕೊಡಲಾಗುತ್ತದೆ.   ಸಾಮಾನ್ಯವಾಗಿ ಈ ಮೊಬೈಲ್ ಬ್ಯಾಂಕಿಂಗ್ ನಲ್ಲಿ *99*55* ಸಂಬಂಧಿಸಿದ ಬ್ಯಾಂಕಿನ ಕೋಡ್ ಸಂಖ್ಯೆ ಹಾಕಿ 1. ಬಾಕಿ ಖಾತೆಯಲ್ಲಿಯ ಹಣ, 2. ಮಿನಿ ಸ್ಟೇಟ್‍ಮೆಂಟ್, ಮತ್ತು 3.ಹಣದ ಮೊತ್ತ ಮತ್ತು ಹಣ ವರ್ಗಾವಣೆಯನ್ನು ಮಾಡಬಹುದು. ಈ ಮೂರು ವಿವರ ಪಡೆಯಬಹುದು. ಇದಕ್ಕೆ ಆ ಖಾತೆಯನ್ನು ಸಂಬಂಧಿಸಿದ ಬ್ಯಾಂಕಿನಿಂದ ನೋಂದಾಣಿ ಮಾಡಿರಬೇಕು. ಆಧಾರ್ ಕಾರ್ಡ್ ಆಧಾರಿತ ಲಿಂಕ್ ಆಗಿದ್ದರೆ ಇದರ ಮೂಲಕ ಹಣ ವರ್ಗಾವಣೆ ಇತರೆ ವ್ಯವಹಾರಗಳನ್ನು ಮಾಡಬಹುದು.

ಆಧಾರ್ ಮೂಲಕ ಹಣ ಪಾವತಿ (Adhar Enabled Payment System (AEPS):

ಕೇಂದ್ರ ಸರ್ಕಾರ ಸಿದ್ಧಪಡಿಸಿದ ಮೊಬೈಲ್ ಅಪ್ಲಿಕೇಷನ್ ಬಳಸಿಕೊಂಡು ಹಣವನ್ನು ಶುಲ್ಕವಿಲ್ಲದೆ ಪಾವತಿಸಬಹುದು. ಬಡವರು ಕೂಡಾ ಡಿಜಿಟಲ್ ಪಾವತಿ ವ್ಯವಸ್ಥೆ ವ್ಯಾಪ್ತಿಗೆ ಬರಬೇಕು. ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದೆ ಹಳ್ಳಿಗಳಲ್ಲೂ ಡಿಜಿಟಲ್ ಪಾವತಿ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ.   ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿ ಗ್ರಾಹಕನ ಬಳಿ ಯಾವುದೇ ಕಾರ್ಡ್ ಇಲ್ಲದಿದ್ದರೂ ಡಿಜಿಟಲ್ ರೂಪದಲ್ಲಿ ಹಣ ಪಾವತಿ ಸಾಧ್ಯ. ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಿಸಿರುವ ಯಾವುದೇ ವ್ಯಕ್ತಿ ಆ ವ್ಯವಸ್ಥೆಯಲ್ಲಿ ಹಣ ಪಾವತಿಸಬಹುದು. ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಪಾವತಿ ನಿಗಮ , ಐಡಿಎಫ್‍ಸಿ ಬ್ಯಾಂಕ್ ಜೊತೆಯಾಗಿ ಇದನ್ನು ಅಭಿವೃದ್ಧಿಪಡಿಸಿವೆ.   ಇದು ಸಣ್ಣ ಎಟಿಎಮ್ ಅಥವಾ Mcro ATM ಆಗಿದ್ದು ಬ್ಯುಸಿನೆಸ್ ಕರಸ್ಪಾಂಡಂಟ್(ಬಿಸಿ)ನಿಂದ ನಿರ್ವಹಿಸಬಹುದಾಗಿದೆ. ಕೇವಲ ಆಧಾರ್ ಕಾರ್ಡ್ ಮಾತ್ರ ಈ ಮಾದರಿಯ ವಹಿವಾಟಿಗೆ ಬೇಕಾಗುತ್ತದೆ.

ಹಣ ಪಾವತಿ ಹಂತಗಳು:

ವ್ಯಾಪಾರಿಗಳು ಅಥವಾ ಗ್ರಾಹಕರು ಮೊದಲು ತಮ್ಮ ಸ್ಮಾರ್ಟ್ ಫೆÇೀನಿನಲ್ಲಿ ಈ ಅಪ್ಲಿಕೇಷನ್ ಹಾಕಿಕೊಳ್ಳಬೇಕು. ಹಣ ಪಾವತಿಸಬೇಕಾಗಿರುವ ಗ್ರಾಹಕ ಹಣದ ಮೊತ್ತದ ಜೊತೆ ತನ್ನ ಆಧಾರ ಸಂಖ್ಯೆಯನ್ನು ಈ ಅಪ್ಲಿಕೇಷನ್‍ನಲ್ಲಿ ನಮೂದಿಸಬೇಕು. ತನ್ನ ಖಾತೆ ಇರುವ ಬ್ಯಾಂಕ್ ಹೆಸರು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಹಕ ತನ್ನ ಬಯೋಮೆಟ್ರಿಕ್ ಮಾಹಿತಿಗಳಾದ ಬೆರಳಚ್ಚು ಅಥವಾ ಕಣ್ಣಿಪಾಪೆ ಎರಡರಲ್ಲಿ ಒಂದನ್ನು ಬಯೋಮೆಟ್ರಿಕ್ ರೀಡರ್ ಯಂತ್ರದ ಮೂಲಕ ನೀಡಬೇಕು. ಬಯೋಮೆಟ್ರಿಕ್ ರೀಡರ್ ಯಂತ್ರಕ್ಕೆ ನೀಡುವ ಮಾಹಿತಿಯು ಗ್ರಾಹಕನ ಪಾಸ್ವರ್ಡ್ ಮಾದರಿಯಲ್ಲಿ ಕೆಲಸ ಮಾಡುತ್ತದೆ.

ಹೀಗೆ ಈ ಆಪ್ ಬಳಕೆಗೆ ಬಂದ ನಂತರ ವ್ಯಾಪಾರಿಗಳು ಕಾರ್ಡ್ ಸ್ವೈಪಿಂಗ್ ಯಂತ್ರ (ಪಿಓಎಸ್) ಬಳಸುವ ಅಗತ್ಯ ಇಲ್ಲ. ಯಾವುದೇ ಪಾಸ್‍ವರ್ಡ್ ಇಲ್ಲದೇ ಕೇವಲ ಆಧಾರ್ ಕಾರ್ಡ್ ಸಂಖ್ಯೆ ಸಹಾಯದಿಂದ (AEPS) ಬ್ಯಾಂಕಿನ ಸೇವೆ ಪಡೆಯಲು ಸಾಧ್ಯ. ಉದಾಹರಣೆಗೆ, ಖಾತೆಯಿಂದ ಹಣ ತೆಗೆದುಕೊಳ್ಳಬಹುದು, ಹಣ ಸಂಗ್ರಹಣೆ, ಆಧಾರ್‍ಕಾರ್ಡ್‍ನಿಂದ ಆಧಾರ ಕಾರ್ಡ್‍ಗೆ ವಹಿವಾಟು, ಶಾಪಿಂಗ್ ಮಾಡಬಹುದಾಗಿದೆ.

ನಗದು ರಹಿತ ವ್ಯವಹಾರಕ್ಕಾಗಿ ಯುಪಿಐ ಮತ್ತು ಬಿಬಿಬಿಪಿಓಯು ಆ್ಯಪ್:

ವ್ಯಾಪಾರಿಗಳಿಗೆ ಹಣವನ್ನು ಡಿಜಿಟಲ್ ರೂಪದಲ್ಲಿ ಶುಲ್ಕ ರಹಿತವಾಗಿ ಪಾವತಿಸಲು ಡೆಬೆಟ್/ಕ್ರೆಡಿಟ್ ಕಾರ್ಡ್, ಮೊಬೈಲ್ ಫೆÇೀನ್ ಅಥವಾ ಡೆಸ್ಕ್‍ಟಾಪ್‍ಗಳಲ್ಲಿನ ಅಂತರ್ಜಾಲದ ಲಿಂಕ್‍ನೊಂದಿಗೆ ನಗದು ರಹಿತ ವಹಿವಾಟು ನಡೆಸಲು ಸಾಧ್ಯವಾಗಿಸಲು ಹೊಸ ಆ್ಯಪ್‍ಗಳು ಸಿದ್ಧವಾಗಿವೆ. ಭಾರತದ ರಾಷ್ಟ್ರೀಯ ಪಾವತಿ ನಿಗಮ(ಎನ್‍ಪಿಸಿಐ) ಹಣದ ಚಲಾವಣೆ ಕಡಿಮೆ ಮಾಡುವ ಉದ್ದೇಶದಿಂದ 2 ಹೊಸ ಸೇವೆ ಆರಂಭಿಸಿದೆ. ಅಂದರೆ ಸ್ಮಾರ್ಟ್‍ಫೆÇೀನ್ ಮೂಲಕ ಅತ್ಯಂತ ಸುಲಭವಾಗಿ, 1. ಹಣ ಪಾವತಿಸುವ ಮತ್ತು ಸ್ವೀಕರಿಸುವ ಯುನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್ (Unified Payment Interface-UPI) ಸೌಲಭ್ಯ, 2. ನಾಗರಿಕ ಸೇವೆಗಳಾದ ವಿದ್ಯುತ್, ನೀರು, ಅಡುಗೆ ಅನಿಲ, ದೂರವಾಣಿ ಮತ್ತು ಡಿಟಿಎಚ್‍ನ ಮಾಸಿಕ ಸೇವಾ ಶುಲ್ಕ ಪಾವತಿಸಲು ನೆರವಾಗುವ ಭಾರತ್ ಬಿಲ್ ಪೇಮೆಂಟ್ ಆಪರೇಟಿಂಗ್ ಯೂನಿಟ್ಸ್ (Bharat Bill Payment Operating Units-BBBPOUs) ಸೇವೆ ಚಾಲ್ತಿಯಲ್ಲಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಅವುಗಳ ಬಳಕೆದಾರರ ಮಧ್ಯೆ ಸಂಪರ್ಕ ಏರ್ಪಡಿಸಿ ಪ್ರಮುಖ ನಾಗರಿಕ ಸೇವೆಗಳಿಗೆ ಬಿಲ್ ಪಾವತಿ ಸುಲಭಗೊಳಿಸಲಾಗಿದೆ. ಆಯ್ದ ಶಾಖೆಗಳಲ್ಲಿ ಈ ಸೇವೆ ಲಭ್ಯ ಇದೆ.
UPI ಎಂದರೇನು:

ನೊಂದಾವಣೆ ಮತ್ತು ವ್ಯವಹಾರ ಪ್ರಕ್ರಿಯೆ (Unified Payment Interface-UPI)ಈ ಇಂಟರ್‍ಫೇಸ್ ಮೂಲಕ 28 ಬ್ಯಾಂಕುಗಳ ಆ್ಯಪ್‍ಗಳಲ್ಲಿ ನಗದುರಹಿತ ವ್ಯವಹಾರವನ್ನು ಸುಲಲಿತವಾಗಿ ಮಾಡಬಹುದು. ನಗದು ರಹಿತ ವ್ಯವಹಾರಕ್ಕಾಗಿ ಯಾವ ಬ್ಯಾಂಕಿನ ಖಾತೆಯಿರುತ್ತೋ ಆ ಬ್ಯಾಂಕಿನ ಅಪ್ಲಿಕೇಷನ್ ಡೌನಲೋಡ್ ಮಾಡಿಕೊಳ್ಳಬೇಕು.ಒಂದು ಸಾಮಾನ್ಯ ಸಂಖ್ಯೆಯನ್ನು ನೆನಪಿಟ್ಟುಕೊಂಡು, ಬ್ಯಾಂಕನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ನಿಮ್ಮ ಖಾತೆಯ ಎಲ್ಲ ವಿವರವನ್ನು ಎಂಟ್ರಿ ಮಾಡಿ ಎಮ್ ಪಿನ್ (MPIN) ಸೆಟ್ ಮಾಡಿ ನಂತರ ಸ್ಮಾರ್ಟ್ ಫೆÇೀನ್‍ನ್ನು ಉಪಯೋಗಿಸಬಹುದು.

ಇ-ವ್ಯಾಲೆಟ್(E-Wallet) ಖರೀದಿ:

ಖರೀಸಿದ ವಸ್ತುವಿನ ಹಣವನ್ನು ಪೂರ್ವವಾಗಿ ಮೊಬೈಲ್ ಅಥವಾ ಡೆಸ್ಕ್‍ಟಾಪ್ ಮೂಲಕ ಮಾಡಬಹುದಾಗಿದ್ದು, ಅಂತರ್ಜಾಲದ ಸಂಪರ್ಕ ಅಗತ್ಯವಾಗಿದೆ. ಹೆಚ್ಚಾಗಿ ಕೆಲವು ಕಂಪನಿ ಮತ್ತು ಬ್ಯಾಂಕುಗಳು ತಮ್ಮ ವೈಯಕ್ತಿಕ ವಾಲೆಟ್ ಹಾಕಿಕೊಂಡಿರುತ್ತವೆ.  ಈ ವಾಲೆಟ್ ಬಳಕೆಗೆ ಗ್ರಾಹಕರಿಗೆ 20000 ರೂ.ಗರಿಷ್ಠ ಲಿಮಿಟ್ ಇರುತ್ತದೆ.ಮತ್ತು ಉದ್ಯಮದಾರರಿಗೆ 50000 ರೂ.ಗಳ ಗರಿಷ್ಠ ಇದ್ದು, ಕೆವೈಸಿ (kyc)ಮೂಲಕ ಒಂದು ಲಕ್ಷದವರೆಗೆ ನಗದುರಹಿತ ವಹಿವಾಟು ಮಾಡಬಹುದು.

ಇಂತಹ ನಗದುರಹಿತ ಮೊಬೈಲ್ ವಹಿವಾಟು ವೇಳೆ ಕೆಲವು ಮುಂಜಾಗೃತೆ ಅಗತ್ಯ. ಲಾಗಿನ್ ಆಗುವಾಗ ದೃಢೀಕರಣ ಇರಲಿ. ಡಿಜಿಟಲ್ ವ್ಯಾಲೆಟ್ ಕೆಳಗಡೆ ಯಾವುದೇ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಮಾಹಿತಿ ದುರ್ಬಳಕೆ ಆಗುವ ಸಾಧ್ಯತೆ ಇದೆ. ಡಿಜಿಟಲ್ ವ್ಯಾಲೆಟ್‍ಗೆ ಪಾಸ್‍ವರ್ಡ ಬೇರೆ ಇರಲಿ, ನಿಮ್ಮ ಖಾತೆಯ ಮಾಹಿತಿ ಪಾಸ್‍ವರ್ಡ್ ಬೇರೆ ಇರಲಿ. ನಿಮ್ಮ ಖಾತೆಯ ಮಾಹಿತಿಗಳು ಸೋರಿಕೆಯಾಗುವುದನ್ನು ತಡೆಯಲು ಇ-ಮೇಲ್ ಅಥವಾ ಇತರೆ ಸಾಮಾಜಿಕ ಜಾಲತಾಣಗಳ ಪಾಸ್‍ವರ್ಡಗಳನ್ನು ಡಿಜಿಟಲ್ ವ್ಯಾಲೆಟ್‍ಗೆ ಅಳವಡಿಸದಿರಿ.
                –  ವಿಶಾಲ ಬಿ. ಮಲ್ಲಾಪುರ, ಉಪನ್ಯಾಸಕರು, ಬೆಳಗಾವಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin