ನಗುಮೊಗದ ಬುದ್ಧ ನಿಜಕ್ಕೂ ಅದೃಷ್ಟಶಾಲಿಯೇ..?

ಈ ಸುದ್ದಿಯನ್ನು ಶೇರ್ ಮಾಡಿ

Budda

ಬೆಳಗಾಗಿ ಎದ್ದು ನರಿ ಮುಖ ನೋಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿ ಅನಾದಿ ಕಾಲದಿಂದಲೂ ಇದೆ. ಇತ್ತೀಚಿನ ದಿನಗಳಲ್ಲಿ ಈ ನಂಬಿಕೆ ದ್ವಿಗುಣಗೊಂಡಿದ್ದು, ಬಹುತೇಕ ಆಸ್ತಿಕರ ಮನೆಗಳಲ್ಲಿ ಜೋಡಿ ನರಿಗಳ ಚಿತ್ರಪಟ ಬಾಗಿಲಿಗೆ ಎದುರಾಗಿ ರಾರಾಜಿಸುತ್ತಿರುತ್ತದೆ. ಇಂತಹುದೇ ಅನೇಕ ವಿಶಿಷ್ಟ, ವಿಚಿತ್ರ ನಂಬಿಕೆಗಳು ವಿಶ್ವದಾದ್ಯಂತ ಚಾಲ್ತಿಯಲ್ಲಿವೆ. ಈ ಪೈಕಿ ಇಡೀ ವಿಶ್ವದಲ್ಲೇ ಅತ್ಯಂತ ಜನಪ್ರಿಯವಾಗಿರುವ ನಂಬಿಕೆ ನಗುಮೊಗದ ಬುದ್ಧನ ಪ್ರತಿಮೆ ಕುರಿತಾದದ್ದು. ನಗುಮೊಗದ ಬುದ್ಧ ಎಂದೇ ಪ್ರಸಿದ್ಧವಾಗಿರುವ ಬುದ್ಧನ ನಿಜ ನಾಮಧೇಯ ಬುದಾಯಿ. ಈತ ಚೀನೀಯರ ಜಾನಪದ ಕತೆಗಳ ನಾಯಕ ಎಂದು ಹೇಳಲಾಗಿದೆ. ಈ ಬುದಾಯಿ ಹೆಸರಿಗೂ ಸಂಸ್ಕøತ ಮೂಲದ ಬುದ್ಧನ ಹೆಸರಿಗೂ ಯಾವುದೇ ಸಂಬಂಧ ಇಲ್ಲದಿರುವುದು ವಿಶೇಷ.
ನಗುಮೊಗದ ಬುದ್ಧ ಚೀನೀಯರಲ್ಲಿ ಹೊಟಾಯಿ ಎಂದೇ ಜನಪ್ರಿಯವಾಗಿದ್ದಾನೆ. ಈತನ ಚಿತ್ರಪಟ ಅಥವಾ ಪ್ರತಿಮೆಯನ್ನು ಯಾವಾಗಲೂ ಮನೆಯ ಬಾಗಿಲಿಗೆ ಎದುರಾಗಿ ನೇತು ಹಾಕಲಾಗಿರುತ್ತದೆ. ಇದು ಸಂತೋಷ, ಅದೃಷ್ಟ ಹಾಗೂ ಸಂಪತ್ತಿಗೆ ಸಂಕೇತ ಎಂದು ನಂಬಲಾಗಿದೆ.

ನಗುಮೊಗದ ಬುದ್ಧನ ಪ್ರತಿಮೆ ಮುಂದೆ ಯಾವಾಗಲೂ ಒಂದು ಫೆಂಗ್ ಶುಯಿ ನಾಣ್ಯವನ್ನು ಇಟ್ಟು ಪ್ರಾರ್ಥಿಸಲಾಗುತ್ತದೆ. ನಗುಮೊಗದ ಬುದ್ಧನ ಚಿತ್ರಪಟ ಅಥವಾ ಪ್ರತಿಮೆಯನ್ನು ಮನೆಗೆ ತಂದ ಹಲವರ ಜೀವನದಲ್ಲಿ ಒಳ್ಳೆಯದಾಗಿರುವ ಅನೇಕ ನಿದರ್ಶನಗಳಿವೆ. ನಗುಮೊಗದ ಬುದ್ಧನ ಪ್ರತಿಮೆಯನ್ನು ಬೇರೆಯವರಿಂದ ಕೊಡುಗೆ ಪಡೆಯಬೇಕು ಎಂದೇನಿಲ್ಲ. ಬದಲಿಗೆ ಅದನ್ನು ನಾವೇ ಕೊಂಡುಕೊಂಡು ಮನೆಗೆ ತರಬಹುದು. ನಗುಮೊಗದ ಬುದ್ಧ ಹಾಗೂ ಗಣೇಶ ಒಟ್ಟೊಟ್ಟಿಗೆ ಇರುವ ಚಿತ್ರಪಟ ಅಥವಾ ಪ್ರತಿಮೆಯನ್ನು ಮನೆಗೆ ತಂದರೆ ಎರಡು ಪಟ್ಟು ಅದೃಷ್ಟ ಬರುತ್ತದೆ ಎಂಬ ನಂಬಿಕೆಯೂ ಚಾಲ್ತಿಯಲ್ಲಿದೆ.

ಬುದಾಯಿ ಅಥವಾ ಪುತಾಯಿ ಎಂದು ವಿಯೆಟ್ನಾಮಿಗರಲ್ಲಿ ಹಾಗೂ ಜಪಾನೀಯರಲ್ಲಿ ಮನೆಮಾತಾಗಿರುವ ನಗುಮೊಗದ ಬುದ್ಧ , ಚೀನೀಯರ ಜಾನಪದ ದೇವರು. ಈ ಹೆಸರಿನ ಅರ್ಥ ದೊಗಲೆ ಅಂಗಿ ತೊಟ್ಟವನು ಎಂದು. ನಗುಮೊಗದ ಬುದ್ಧನನ್ನು ಗೌತಮ ಬುದ್ಧನ ಪುನರ್ಜನ್ಮ ಎಂದೂ ನಂಬಲಾಗುತ್ತದೆ.   ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಜನಿಸಿದ ಚಾರಿತ್ರಿಕ ಇತಿಹಾಸವುಳ್ಳ ಗೌತಮ ಬುದ್ಧ ಎತ್ತರ ಹಾಗೂ ಸೌಮ್ಯ ಸ್ವಭಾವದ ಪ್ರತಿರೂಪವಾಗಿದ್ದರೆ, ಕ್ರಿಸ್ತ ಶಕ 502-557ರವರೆಗೆ ಚೀನಾದ ಲಿಯಾಂಗ್ ಸಾಮ್ರಾಜ್ಯದಲ್ಲಿ ವಾಸವಿದ್ದ ನಗುಮೊಗದ ಬುದ್ಧ ಅಥವಾ ಬುದಾಯಿ ತೀರಾ ಕುಳ್ಳ ಹಾಗೂ ದಡೂತಿ.

ಬುದಾಯಿಗೆ ನಗುಮೊಗದ ಬುದ್ಧ ಎಂಬ ಹೆಸರು ಬರಲು ಒಂದು ವಿಶಿಷ್ಟ ಐತಿಹ್ಯವಿದೆ. ಬುದಾಯಿ ಒಂದು ಬಡಕುಟುಂಬದಲ್ಲಿ ಜನಿಸಿ, ಅಪಾರ ಕಷ್ಟ-ನಷ್ಟಗಳನ್ನು ಅನುಭವಿಸಿದರೂ ಸದಾ ಹಸನ್ಮುಖಿಯಾಗಿರುತ್ತಿದ್ದನಂತೆ. ಬೌದ್ಧ ಸನ್ಯಾಸಿಯೂ ಆಗಿದ್ದ ಬುದಾಯಿ, ಗೌತಮ ಬುದ್ಧ ಜನಿಸಿದ ಸಾವಿರ ವರ್ಷಗಳ ನಂತರ ಜನಿಸಿದ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಸಂತೋಷ ಹಾಗೂ ಸಂತೃಪ್ತಿಯ ಪ್ರತೀಕ:

ನಗುಮೊಗದ ಬುದ್ಧನನ್ನು ಸಂತೋಷ ಹಾಗೂ ಸಂತೃಪ್ತಿಯ ಪ್ರತೀಕ ಎಂದೇ ನಂಬಲಾಗಿದೆ. ಹಲವು ಕೋನಗಳ ನಗುಮೊಗದ ಬುದ್ಧನ ಪ್ರತಿಮೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin