ನಗ್ನಗೊಳಿಸಿ,ಮಂಚಕ್ಕೆ ಕಟ್ಟಿಹಾಕಿ ಪರ್ಫ್ಯೂಮ್ ಲೇಡಿ ಮೋನಿಕಾ ರೇಪ್ ಅಂಡ್ ಮರ್ಡರ್ : ಆರೋಪಿಗರಿಗಾಗಿ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Rape

ಪಣಜಿ, ಅ.8-ಗೋವಾ ರಾಜ್ಯವನ್ನು ತಲ್ಲಣಗೊಳಿಸಿದ ಪಫ್ರ್ಯೂಮ್ ಲೇಡಿ ಮೋನಿಕಾ ಘುರ್ಡೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಪಣಜಿ ಪೊಲೀಸರು ತೀವ್ರಗೊಳಿಸಿದ್ದಾರೆ. ಸ್ಯಾನ್ಗೋಲ್ಡಾದ ಅಪಾರ್ಟ್ಮೆಂಟ್ನ ಕೊಠಡಿಯ ಮಂಚದ ಹಿಂಭಾಗಕ್ಕೆ ಕೈಗಳನ್ನು ಕಟ್ಟಿ ಹಾಕಲ್ಪಟ್ಟಿದ್ದ ನಗ್ನ ಸ್ಥಿತಿಯಲ್ಲಿದ್ದ ಆಕೆಯ ಮೃತದೇಹವು ನಿನ್ನೆ ಪತ್ತೆಯಾಗಿತ್ತು.  ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ದುಷ್ಕರ್ಮಿಗಳನ್ನು ಪತ್ತೆ ಮಾಡಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಗೋವಾ ರಾಜ್ಯ ಪೊಲೀಸ್ ಮಹಾನಿರ್ದೇಶಕ ವಿಮಲ್ ಗುಪ್ತಾ ಹೇಳಿದ್ದಾರೆ. ಗುರುವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಫ್ಲಾಟ್ಗೆ ಬಂದ ಮನೆಕೆಲಸದಾಕೆ ಪದೇ ಪದೇ ಕಾಲಿಂಗ್ ಬೆಲ್ ಮಾಡಿದರೂ ಬಾಗಿಲು ತೆರೆಯಲಿಲ್ಲ. ಇದರಿಂದ ಪಕ್ಕದ ಫ್ಲಾಟ್ನಲ್ಲಿದ್ದ ಅಮೆರಿಕನ್ ಮಹಿಳೆ ಬಳಿಯಿದ್ದ ಇನ್ನೊಂದು ಕೀಲಿ ಕೈ ಬಳಸಿ ಬಾಗಿಲು ತೆರೆದಾಗ ಕೊಠಡಿಯಲ್ಲಿ ಮೋನಿಕಾ ಮೃತಪಟ್ಟಿದ್ದು ಪತ್ತೆಯಾಯಿತು.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ದಿಂಬಿನಿಂದ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.  ಮಂಚದ ಹಿಂಭಾಗಕ್ಕೆ ಆಕೆಯ ಕೈಗಳ್ಳನ್ನು ಕಟ್ಟಿ ಹಾಕಿ ಅತ್ಯಾಚಾರ ನಡೆಸಿ ನಂತರ ಹತ್ಯೆ ಮಾಡಲಾಗಿದೆ. ಆಕೆಯ ಮೈಮೇಲೆ ಯಾವುದೇ ಇರಿತದ ಗಾಯಗಳಾಗಿಲ್ಲ. ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಲಾಗಿಲ್ಲ. ದುಷ್ಕರ್ಮಿಗಳು ಬಲವಂತವಾಗಿ ಒಳನುಗ್ಗಿರುವ ಕುರುಹು ಸಹ ಪತ್ತೆಯಾಗಿಲ್ಲ. ಹೀಗಾಗಿ ಪರಿಚಿತರೇ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖ್ಯಾತ ಛಾಯಾಗ್ರಾಹಕಿಯಾಗಿದ್ದ ಮಹಾರಾಷ್ಟ್ರದ ನಾಗ್ಪುರದ ಮೋನಿಕಾ ನಂತರ ಸುಗಂಧದ್ರವ್ಯ ಉದ್ಯಮದತ್ತ ಆಕರ್ಷಿರಾಗಿದ್ದರು. ಗಂಡನಿಂದ ವಿಚ್ಛೇದನ ಪಡೆದಿದ್ದ ಅವರು ಗೋವಾಗೆ ಸ್ಥಳಾಂತರಗೊಂಡು ಎಂಒ ಲ್ಯಾಬ್ ಎಂಬ ಪ್ರಯೋಗಾಲಯ ಸ್ಥಾಪಿಸಿ ದುಬಾರಿ ಬೆಲೆಯ ಪಫ್ರ್ಯೂಮ್ಗಳನ್ನು ತಯಾರಿಸುತ್ತಿದ್ದರು. ಫಸ್ಟ್ ಲೇಡಿ ಟು ಸ್ಮೆಲ್ ಮತ್ತು ಪಫ್ರ್ಯೂಮ್ ಸ್ಪೆಷಲಿಸ್ಟ್ ಎಂದೇ ಮೋನಿಕಾ ಪ್ರಸಿದ್ಧರಾಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin