ನಟ ದುನಿಯಾ ವಿಜಯ್ ಮೇಲೆ ಹಲ್ಲೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

viji
ಬೆಂಗಳೂರು, ನ.15-ನಟ ದುನಿಯಾ ವಿಜಯ್ ಅವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ ಅವರ ಸಹೋದರ ಶಂಕರ್ ಅವರ ಮಾವ ಜಯರಾಂ ಮೇಲೆ ದುನಿಯಾ ವಿಜಯ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಶಂಕರ್ ಅವರಿಗೆ ಜಯರಾಂ ಎಂಬುವರ ಮಗಳನ್ನು ಕೊಟ್ಟು ಮೂರು ತಿಂಗಳ ಹಿಂದಷ್ಟೆ ವಿವಾಹ ಮಾಡಿಕೊಡಲಾಗಿದ್ದು, ಇತ್ತೀಚೆಗೆ ಮಗಳನ್ನು ನೋಡಲು ಜಯರಾಂ ದಂಪತಿ ಶಂಕರ್ ಮನೆಗೆ ತೆರಳಿದ್ದರು. ಈ ವೇಳೆ ದುನಿಯಾ ವಿಜಯ್ ಸಹ ಶಂಕರ್ ಮನೆಗೆ ಬಂದಿದ್ದರು. ಕೌಟುಂಬಿಕ ವಿಚಾರವಾಗಿ ಮಾತಿಗೆ ಮಾತು ಬೆಳೆದು ವಿಜಯ್ ನನ್ನ ಪತಿ ಜಯರಾಂ ಮೇಲೆ ಹಲ್ಲೆ ನಡೆಸಿದ್ದರು ಎಂದು ಜಯರಾಂ ಪತ್ನಿ ಯಶೋಧಾ ಆರೋಪಿಸಿದ್ದಾರೆ.

 

ದೂರು ನೀಡಿಲ್ಲ: ಇದು ನಮ್ಮ ಕುಟುಂಬದ ವಿಷಯ, ನಾವೇ ಬಗೆಹರಿಸಿಕೊಳ್ಳುತ್ತೇವೆ. ನಾವು ಯಾರ ವಿರುದ್ಧವೂ ದೂರು ನೀಡಿಲ್ಲ ಎಂದು ಜಯರಾಂ ಪುತ್ರಿ ಮಾನಸ ಸ್ಪಷ್ಟಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin