ನಡುರಸ್ತೆಯಲ್ಲೇ ಹೊತ್ತಿ ಉರಿದ ಚಲಿಸುತ್ತಿದ್ದ ಮಾರುತಿ ಓಮ್ನಿ

ಈ ಸುದ್ದಿಯನ್ನು ಶೇರ್ ಮಾಡಿ

Chitradurga
ಚಿತ್ರದುರ್ಗ, ಅ.26-ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ರಸ್ತೆ ಮಧ್ಯದಲ್ಲೇ ಹೊತ್ತಿ ಉರಿದ ಘಟನೆ ಹಿರಿಯೂರು ತಾಲ್ಲೂಕಿನ ಸಕ್ಕಾರಾ ಗ್ರಾಮದ ಸಮೀಪ ನಡೆದಿದೆ. ಶಿರಾ ತಾಲ್ಲೂಕು ಆರೋಗ್ಯ ಅಧಿಕಾರಿಯೊಬ್ಬರಿಗೆ ಸೇರಿದ ಕಾರು ಎಂದು ಹೇಳಲಾಗಿದೆ. ಧರ್ಮಪುರದಿಂದ ಶಿರಾ ಪಟ್ಟಣಕ್ಕೆತೆರಳುವಾಗ ಈ ಅವಘಡ ಸಂಭವಿಸಿದೆ. ಘಟನೆ ಓಮ್ನಿಯಲ್ಲಿದ್ದ ಪೆಟ್ರೋಲ್ ಟ್ಯಾಂಕ್ ಲೀಕ್ ಆಗಿರಬಹುದೆಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಓಮ್ನಿ ಕಾರು ಭಾಗಶಃ ಸುಟ್ಟುಕರಕಲಾಗಿದೆ. ಈ ಸಂಬಂಧ ಹಿರಿಯೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin