ನಡು ರಸ್ತೆಯಲ್ಲೇ ಹೊತ್ತಿ ಉರಿದ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್, ಪ್ರಯಾಣಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Bus-----02

ಬೆಂಗಳೂರು, ಆ.12-ಬೆಂಗಳೂರಿನಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಇಂದು ಬೆಳಗ್ಗೆ ಬೆಂಕಿಗೆ ಆಹುತಿಯಾಗಿದ್ದು, ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.  ಚೆನ್ನೈಗೆ 5 ಕಿ.ಮೀ. ದೂರದಲ್ಲಿರುವ ಪೂನಾ ಮಲೈ ಬಳಿ ಇಂದು ಬೆಳಗ್ಗೆ 8.45ರಲ್ಲಿ ಈ ಅವಘಡ ಸಂಭವಿಸಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವೋಲ್ವೋ ಬಸ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಪ್ರಯಾಣಿಕರೆಲ್ಲರೂ ಬಸ್‍ನಿಂದ ಇಳಿದು ಹೊರಬಂದಿದ್ದಾರೆ. ಆದರೆ ಬಸ್ಸಿನ ಮೇಲ್ಭಾಗ ಮತ್ತು ಕೆಲವು ಸೀಟುಗಳು ಸಂಪೂರ್ಣ ಸುಟ್ಟು ಹೋಗಿದೆ.

 

44 ಸೀಟುಗಳುಳ್ಳ ಈ ಬಸ್‍ನಲ್ಲಿ 33 ಪ್ರಯಾಣಿಕರಿದ್ದರು. ವಾರಾಂತ್ಯವಾಗಿದ್ದರಿಂದ ಬಸ್‍ನಲ್ಲಿ ಪೂರ್ಣ ಪ್ರಮಾಣದ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.  ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿದ ಕೂಡಲೇ ಬೆಂಗಳೂರಿನಿಂದ ಕೆಎಸ್‍ಆರ್‍ಟಿಸಿಯ ತಾಂತ್ರಿಕ ತಂಡ ಚೆನ್ನೈಗೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದೆ.

Bus-----01

 

Facebook Comments

Sri Raghav

Admin