ನದಿಯಲ್ಲಿ ಸಾಗರ ವಿಮಾನ ಪತನಗೊಂಡು 6 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Sea-Plane--02

ಸಿಡ್ನಿ, ಜ.1-ಸಾಗರವಿಮಾನ(ಸೀಪ್ಲೇನ್) ನದಿಯಲ್ಲಿ ಪತನಗೊಂಡು 6 ಮಂದಿ ಮೃತಪಟ್ಟ ದುರಂತ ಆಸ್ಟ್ರೇಲಿಯಾದ ಸಿಡ್ನಿ ಬಳಿ ಸಂಭವಿಸಿದೆ. ಸಿಡ್ನಿ ನಗರದಿಂದ 50 ಕಿ.ಮೀ. ದೂರದಲ್ಲಿರುವ ಕೋವಾನ್ ಸಮೀಪ ಈ ಲಘು ಜಲ ವಿಮಾನ ಪತನಗೊಂಡಿತು ಎಂದು ನ್ಯೂ ಸೌತ್‍ವೇಲ್ಸ್ ಪೊಲೀಸರು ತಿಳಿಸಿದ್ದಾರೆ. ಡಿಸಿಎಚ್-2 ಬೀವರ್ ಮಾದರಿಯ ವಿಮಾನ ಸಿಡ್ನಿ ಬಂದರಿನ ರೋಸ್‍ಬೇ ಪ್ರದೇಶಕ್ಕೆ ವಾಪಸ್ಸಾಗುತ್ತಿದ್ದಾಗ ಪತನಗೊಂಡಿತು ಎಂದು ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ವಿಭಾಗದ ವಕ್ತಾರರು ಹೇಳಿದ್ದಾರೆ. ನದಿ ಪಾಲಾದ ಪ್ರಯಾಣಿಕರ ವಿವರ ಮತ್ತು ವಿಮಾನ ಪತನಕ್ಕೆ ಕಾರಣವನ್ನು ಪೊಲೀಸರು ಈವರೆಗೆ ತಿಳಿಸಿಲ್ಲ.

Facebook Comments

Sri Raghav

Admin