ನನ್ನನ್ನೂ ನಿಮ್ಮ ಮಗನೆಂದು ಭಾವಿಸಿ : ಡಿ.ಕೆ.ರವಿ ತಾಯಿ ನೋವಿಗೆ ಸ್ಪಂದಿಸಿದ ತುಮಕೂರು ಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ahadfhdghತುಮಕೂರು, ಆ.4- ಐಎಎಸ್ ಅಧಿಕಾರಿ ಡಿ.ಕೆ.ರವಿ  ಅವರ ತಾಯಿ ಗೌರಮ್ಮ  ಅವರ ನೋವಿಗೆ ಸ್ಪಂದಿಸುವ ಮೂಲಕ ತುಮಕೂರು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಮಾನವೀಯತೆ ಮೆರೆದು ಮಗನಂತೆ ಅವರ ಕಾಳಜಿ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಗೌರಮ್ಮನವರು ತಮ್ಮ ಕಷ್ಟ ಹೇಳಿಕೊಂಡಾಗ ಅದಕ್ಕೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ಮೋಹನ್‍ರಾಜ್ ಅವರು ಸಹಾಯ ಹಸ್ತ ಚಾಚಿದ್ದಾರೆ. ಡಿ.ಕೆ.ರವಿ ಅವರು ಸಾವನ್ನಪ್ಪಿದಾಗ ದೊಡ್ಡಕೊಪ್ಪಲಿನಲ್ಲಿ ತಾಲೂಕು ಆಡಳಿತ ಹಾಕಿದ್ದ ಶಾಮಿಯಾನದ ಹಣವನ್ನು ಸರ್ಕಾರದಿಂದ ಮಾಲೀಕರಿಗೆ  ಪಾವತಿಸದ ಹಿನ್ನೆಲೆಯಲ್ಲಿ ಮಾಲೀಕ  ಗೌರಮ್ಮ ಅವರನ್ನು ಪದೇ ಪದೇ ಪೀಡಿಸುತ್ತಿದ್ದರು.

ಈ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲು ಕಚೇರಿಗೆ ಬಂದಿದ್ದ ಗೌರಮ್ಮ ಅವರನ್ನು ಭೇಟಿ ಮಾಡಿದ ಅವರು, ಊಟ ಮಾಡಿದ್ದೀರ ಎಂದು ವಿಚಾರಿಸಿದರಲ್ಲದೆ, ನನ್ನನ್ನು ನಿಮ್ಮ ಮನೆ ಮಗನಂತೆ ತಿಳಿದುಕೊಳ್ಳಿ ಎಂದು ಸಾಂತ್ವನ ಹೇಳಿ ಅವರ ಕಷ್ಟ ವಿಚಾರಿಸಿದರು.

ತಾಲೂಕು ಆಡಳಿತದ ನಿರ್ಲಕ್ಷ್ಯದ ಬಗ್ಗೆ ಅರಿತ ಅವರು ಕೂಡಲೇ ದಂಡಾಧಿಕಾರಿಗಳಿಗೆ ದೂರವಾಣಿ ಮೂಲಕ ಹಣ ಪಾವತಿಸುವ ಸಂಬಂಧ ಸೂಚನೆ ನೀಡಿದರು. ನಂತರ ತಮ್ಮ ಮನೆಗೆ ಬರುವಂತೆ ಗೌರಮ್ಮನವರನ್ನು ಆಹ್ವಾನಿಸಿದರಲ್ಲದೆ,  ಎರಡು ದಿನ ನಮ್ಮಲ್ಲೇ ಉಳಿದುಕೊಳ್ಳಿ ಎಂದು ಮನವಿ ಮಾಡಿದರು.ಅವರು ಒಪ್ಪದಿದ್ದಾಗ ತಮ್ಮ ಕಾರಿನಲ್ಲೇ ಮನೆಗೆ ಕರೆದುಕೊಂಡು ಹೋದರು.   ಡಿಸಿ ಮೋಹನ್‍ರಾಜ್ ಅವರು, ಜಿಲ್ಲಾಧಿಕಾರಿಯಾದರೂ ಓರ್ವ ತಾಯಿ ಎದುರು ಅಧಿಕಾರಿಯಾಗಿ ನಡೆದುಕೊಳ್ಳದೆ ಮಗನಂತೆ ವರ್ತಿಸಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತ್ತು. ಈ ವಿಷಯ ತಿಳಿದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin