ನನ್ನ ತಂಟೆಗೆ ಬರಬೇಡಿ… ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ
 ಅಪಾಯಕಾರಿ ದೈತ್ಯ ಜೀವಿಗಳನ್ನೇ ಪಳಗಿಸಿ ತನ್ನ ಅಗಾಧ ಸಾಮಥ್ರ್ಯ ಪ್ರದರ್ಶಿಸಿದ್ದ ರಿಯಾಲಿಟಿ ಹೀರೋ ಸ್ಟೀವ್ ಇರ್ವಿನ್ ಯಕಶ್ಚಿತ್ ಸ್ಟಿಂಗ್ ರೇ ಎಂಬ ಪುಟ್ಟ ಮೀನು ಚುಚ್ಚಿದ ವಿಷದ ಮುಳ್ಳಿಗೆ ಬಲಿಯಾದ. ಇದು ಸಾಗರ ಜೀವಿಗಳ ಅತ್ಯಂತ ಅಪಾಯಕಾರಿ ಆಕ್ರಮಣಕ್ಕೆ ಒಂದು ಸಣ್ಣ ಉದಾಹರಣೆ. ನಾನು ಕಂಡು-ಕೇಳರಿಯಂಥ ಡೇಂಜರ್ ಸೀ ಕ್ರಿಯೇಚರ್‍ಗಳು ಸಾಗರಗರ್ಭದಲ್ಲಿವೆ. ಇವುಗಳಲ್ಲಿ ಲಯನ್ ಫಿಶ್ ಕೂಡ ಒಂದು. ಕೆರೆಬಿಯರ್ ಮತ್ತು ಪೂರ್ವ ಅಟ್ಲಾಂಟಿಕ್ ಸಮುದ್ರಗಳಲ್ಲಿ ಇವು ಕಂಡುಬರುತ್ತವೆ. ಇವು ಸ್ಕಾರ್ಪಿಯನ್‍ಫಿಶ್ (ಚೇಳು ಮೀನು) ಪ್ರಜÁತಿಗೆ ಸೇರಿದ ಮತ್ಸ್ಯ ಸಂಕುಲ. ಇವು ನೋಡಲು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ. ಇವುಗಳನ್ನು ಕೆಣಕಿದರೆ ಮರಣಾಂತಿಕ ಆಕ್ರಮಣ ಖಾತರಿ. ವಿಷದ ಮುಳ್ಳನ್ನು ಚುಚ್ಚಿ ನರಕ ಯಾತನೆ ನೀಡುತ್ತವೆ. ಸಾಗರದಾಳಕ್ಕೆ ಇಳಿಯುವ ಸ್ಕ್ಯೂಬಾ ಡೈವರ್‍ಗಳು ಲಯನ್‍ಫಿಶ್‍ನನ್ನು ನೋಡಿದರೆ ದಿಕ್ಕನ್ನೇ ಬದಲಿಸುತ್ತಾರೆ. ಸಮುದ್ರದ ಸಿಂಹ ಎಂದೇ ಕರೆಯಲ್ಪಡುವ ಇವು ಸಾಗರಲೋಕದ ವಿಸ್ಮಯಗಳಲ್ಲಿ ಒಂದು.

ಅಪಾಯಕಾರಿ ದೈತ್ಯ ಜೀವಿಗಳನ್ನೇ ಪಳಗಿಸಿ ತನ್ನ ಅಗಾಧ ಸಾಮಥ್ರ್ಯ ಪ್ರದರ್ಶಿಸಿದ್ದ ರಿಯಾಲಿಟಿ ಹೀರೋ ಸ್ಟೀವ್ ಇರ್ವಿನ್ ಯಕಶ್ಚಿತ್ ಸ್ಟಿಂಗ್ ರೇ ಎಂಬ ಪುಟ್ಟ ಮೀನು ಚುಚ್ಚಿದ ವಿಷದ ಮುಳ್ಳಿಗೆ ಬಲಿಯಾದ. ಇದು ಸಾಗರ ಜೀವಿಗಳ ಅತ್ಯಂತ ಅಪಾಯಕಾರಿ ಆಕ್ರಮಣಕ್ಕೆ ಒಂದು ಸಣ್ಣ ಉದಾಹರಣೆ. ನಾನು ಕಂಡು-ಕೇಳರಿಯಂಥ ಡೇಂಜರ್ ಸೀ ಕ್ರಿಯೇಚರ್‍ಗಳು ಸಾಗರಗರ್ಭದಲ್ಲಿವೆ. ಇವುಗಳಲ್ಲಿ ಲಯನ್ ಫಿಶ್ ಕೂಡ ಒಂದು. ಕೆರೆಬಿಯರ್ ಮತ್ತು ಪೂರ್ವ ಅಟ್ಲಾಂಟಿಕ್ ಸಮುದ್ರಗಳಲ್ಲಿ ಇವು ಕಂಡುಬರುತ್ತವೆ. ಇವು ಸ್ಕಾರ್ಪಿಯನ್‍ಫಿಶ್ (ಚೇಳು ಮೀನು) ಪ್ರಜತಿಗೆ ಸೇರಿದ ಮತ್ಸ್ಯ ಸಂಕುಲ. ಇವು ನೋಡಲು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ. ಇವುಗಳನ್ನು ಕೆಣಕಿದರೆ ಮರಣಾಂತಿಕ ಆಕ್ರಮಣ ಖಾತರಿ. ವಿಷದ ಮುಳ್ಳನ್ನು ಚುಚ್ಚಿ ನರಕ ಯಾತನೆ ನೀಡುತ್ತವೆ. ಸಾಗರದಾಳಕ್ಕೆ ಇಳಿಯುವ ಸ್ಕ್ಯೂಬಾ ಡೈವರ್‍ಗಳು ಲಯನ್‍ಫಿಶ್‍ನನ್ನು ನೋಡಿದರೆ ದಿಕ್ಕನ್ನೇ ಬದಲಿಸುತ್ತಾರೆ. ಸಮುದ್ರದ ಸಿಂಹ ಎಂದೇ ಕರೆಯಲ್ಪಡುವ ಇವು ಸಾಗರಲೋಕದ ವಿಸ್ಮಯಗಳಲ್ಲಿ ಒಂದು.
Facebook Comments

Sri Raghav

Admin