ನನ್ನ ತಂದೆಯ ಹಂತಕರನ್ನು ನಾವು ಕ್ಷಮಿಸಿದ್ದೇವೆ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01

ಸಿಂಗಪುರ್, ಮಾ.11-ನನ್ನ ತಂದೆ ರಾಜೀವ್‍ಗಾಂಧಿಯವರ ಹಂತಕರನ್ನು ನಾನು ಮತ್ತು ನನ್ನ ಸಹೋದರಿ ಪ್ರಿಯಾಂಕಾಗಾಂಧಿ ಕ್ಷಮಿಸಿದ್ದೇವೆ ಎಂದು ರಾಹುಲ್‍ಗಾಂಧಿ ಹೇಳಿದ್ದಾರೆ. ಸಿಂಗಪುರ್ ಪ್ರವಾಸದಲ್ಲಿರುವ ರಾಹುಲ್ ನಿನ್ನೆ ರಾತ್ರಿ ಐಎಎಂ ಅಲ್ಯುಮಿನಿ ಅಸೋಸಿಯೇಷನ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಮತ್ತು ನನ್ನ ಸಹೋದರಿ ಯಾವುದೇ ಕಾರಣಕ್ಕೂ ಹಿಂಸಾಚಾರವನ್ನು ಇಷ್ಟಪಡುವುದಿಲ್ಲ. ನನ್ನ ತಂದೆಯವರನ್ನು ಹಂತಕರು ಯಾವುದೇ ಕಾರಣಕ್ಕೆ ಹತ್ಯೆ ಮಾಡಿದ್ದರೂ ಅವರನ್ನು ನಾವು ಕ್ಷಮಿಸಿದ್ದೇವೆ ಎಂದು ಹೇಳಿದರು.

ತಂದೆಯ ನಿಧನದ ನಂತರ ಆ ಅಘಾತದಿಂದ ಹೊರಬರಲು ನನಗೆ ಮತ್ತು ಪ್ರಿಯಾಂಕಾಗೆ ಹಲವು ತಿಂಗಳುಗಳೇ ಬೇಕಾಯಿತು. ನಮ್ಮ ತಂದೆ ಹತ್ಯೆಗೆ ಕಾರಣಕರ್ತರಾದ ಎಲ್‍ಟಿಟಿಇ ನಾಯಕ ಟೈಗರ್ ಪ್ರಭಾಕರನ್ ಹತ್ಯೆಯಾದಾಗ ಆ ಸುದ್ದಿಯನ್ನು ನಾನು ಟಿವಿಯಲ್ಲಿ ನೋಡಿದೆ. ನನ್ನ ಕಣ್ಣ ಮುಂದೆ ಎರಡು ಸಂಗತಿಗಳು ಗೋಚರವಾದವು. ಆತ ಮಾಡಿದ ಕೃತ್ಯಗಳಿಗೆ ದೇವರೇ ಶಿಕ್ಷೆ ನೀಡಿದ್ದಾನೆ ಎಂಬುದು ಮತ್ತೊಂದು ಆತನ ಹತ್ಯೆಯಿಂದ ಮುಗ್ಧ ಮಕ್ಕಳು ಅನಾಥರಾದರಲ್ಲ ಎಂಬುದು ನನಗೆ ಬೇಸರ ತಂದಿತ್ತು ಎಂದು ರಾಹುಲ್ ಭಾವೋದ್ವೇಗದಿಂದ ನುಡಿದರು.

ನನಗೆ ಆಗ ಚಿಕ್ಕ ವಯಸ್ಸು. ಆದರೂ ನನ್ನ ಅಜ್ಜಿ (ಇಂದಿರಾಗಾಂಧಿ) ಮತ್ತು ನನ್ನ ತಂದೆಯವರು ಹತ್ಯೆಯಾಗುತ್ತಾರೆ ಎಂಬುದು ನನಗೆ ಗೊತ್ತಿತ್ತು. ನನ್ನ ಅಜ್ಜಿಯನ್ನು ಹತ್ಯೆಗೈದ ವ್ಯಕ್ತಿ (ಅಂಗರಕ್ಷಕ) ಜೊತೆ ನಾನು ಚಿಕ್ಕವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಆಟ ಆಡಿದ್ದೆ ಎಂಬ ಸಂಗತಿಯನ್ನು ಸ್ಮರಿಸಿದರು.  ಈಗ ನನ್ನ ಬಳಿ ರಕ್ಷಣೆಗಾಗಿ 10-15 ಜನ ಇರುತ್ತಾರೆ. ಇದನ್ನು ನಾನು ಸೌಕರ್ಯ ಎಂದು ಭಾವಿಸಿಲ್ಲ, ಇದರಿಂದ ಒಂದು ರೀತಿಯ ಕಿರಿಕಿರಿ ಉಂಟಾಗುತ್ತದೆ. ಆದರೂ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದು ರಾಹುಲ್ ಹೇಳಿದರು.

Facebook Comments

Sri Raghav

Admin