ನನ್ನ ನಿವೃತ್ತಿ ನಿರ್ಧಾರ ಅಚಲ : ಅಭಿನವ್ ಬಿಂದ್ರಾ

ಈ ಸುದ್ದಿಯನ್ನು ಶೇರ್ ಮಾಡಿ

Abhinav

ರಿಯೋಡಿಜನೈರೋ, ಆ.9- ನಾನು ನಿವೃತ್ತಿ ಹೊಂದುತ್ತೇನೆ. ಈ ಬಗ್ಗೆ ನಾನು ಈಗಾಗಲೇ ಘೋಷಿಸಿದ್ದೇನೆ. ಇದನ್ನು ಮರು ಪರಿಗಣಿಸುವ ಪ್ರಶ್ನೆಯೇ ಇಲ್ಲ. ಯುವ ಶೂಟರ್‍ಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮುಂದುವರಿಸುತ್ತೇನೆ ಎಂದು ಒಲಂಪಿಕ್ ಪದಕ ಬೇಟೆಯಿಂದ ಸ್ವಲ್ಪದಲ್ಲೇ ವಂಚಿತರಾದ ಶೂಟರ್ ಅಭಿನವ್‍ಬಿಂದ್ರಾ ಹೇಳಿದ್ದಾರೆ. ಪದಕ ಗೆಲ್ಲುವಲ್ಲಿ ವಿಫಲರಾಗಿ ಹತಾಶರಾದಂತೆ ಕಂಡು ಬಂದ ಬಿಂದ್ರಾ, ನಾನು ಮತ್ತೆ ಶೂಟ್ ಮಾಡುವುದಿಲ್ಲ. ಬದಲಿಗೆ ಯುವಕ  ಉತ್ತೇಜನ ನೀಡುತ್ತೇನೆ. ನನ್ನ ಪ್ರತಿಷ್ಠಾನ ಸಂಸ್ಥೆ ಮೂಲಕ ಈಗಾಗಲೇ 30 ಯುವ ಶೂಟರ್‍ಗಳಿಗೆ ಪ್ರೋತ್ಸಾಹ ನೀಡುತ್ತೇನೆ ಎಂದು ನುಡಿದಿದ್ದಾರೆ. ಪದಕ ಕೈ ತಪ್ಪಿದ್ದಕ್ಕೆ ಬೇಸರವಾಗಿದೆ. ಆದರೆ, ನಿಮ್ಮ ಮುಂದೆ ಅಳಲು ತೋಡಿಕೊಳ್ಳಲು ಇಚ್ಚಿಸುವುದಿಲ್ಲ ಎಂದು ಬಿಂದ್ರಾ ಹೇಳಿದ್ದಾರೆ.

Rio Olympics: I am at peace with my decision to retire, says Abhinav Bindra

Facebook Comments

Sri Raghav

Admin