ನನ್ನ ಪತಿಯನ್ನು ಬಂಧಿಸಲಾಗಿದೆ : ಯೋಧ ತೇಜ್ ಬಹದ್ದೂರ್ ಪತ್ನಿ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Tej-Bahuddur
ನವದೆಹಲಿ, ಫೆ.2- ದೇಶ ಕಾಯುವ ವೀರ ಯೋಧರಿಗೆ  ನೀಡುವ ಆಹಾರ ಕಳಪೆಯಿಂದ ಕೂಡಿರುತ್ತದೆ ಎಂದು ವೀಡಿಯೋ ಮೂಲಕ ಸಂದೇಶ ಕಳುಹಿಸಿ ಸಂಚಲನ ಮೂಡಿಸಿದ್ದ ಸೈನಿಕ ತೇಜ್ ಬಹದ್ದೂರ್‍ರನ್ನು ಬಂಧಿಸಲಾಗಿದೆ ಎಂದು ಅವರ ಪತ್ನಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.  ತೇಜ್ ಬಹದ್ದೂರ್‍ರ ಪತ್ನಿ ಶರ್ಮಿಳಾ ಅವರು ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ನನ್ನ ಪತಿ 29ನೆ ಬೆಟಾಲಿಯನ್‍ನಲ್ಲಿ ಬಿಎಸ್‍ಎಫ್‍ಗೆ ನೇಮಕಗೊಂಡಿದ್ದು , ಯಾದವ್ ಸಿಡಿ ಬಿಡುಗಡೆ ಗೊಳಿಸಿದ ನಂತರ ಅವರನ್ನು ಬಂಧಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂಬ ಸುದ್ದಿಯನ್ನು ಸೈನಿಕ ರೊಬ್ಬರು ದೂರವಾಣಿ ಮೂಲಕ ತಿಳಿಸಿದ್ದರು. ಅಲ್ಲದೆ ನನ್ನ ಪತಿ ಸೇನೆಯಿಂದ ನಿವೃತ್ತಿ ಹೊಂದಲು ಅರ್ಜಿ ಸಲ್ಲಿಸಿದರೂ ಕೂಡ ಅದನ್ನು ವಜಾ ಮಾಡಿ ಅವರನ್ನು ಬಂಧಿಸಲಾಗಿದೆ ಎಂದು ಶರ್ಮಿಳಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin