ನನ್ನ ರಾಜಕೀಯ ದಾರಿಯಲ್ಲಿದೆ, ಎಚ್ಚರಿಕೆಯಿಂದ ಹೆಜ್ಜೆಯಿಡುತ್ತೇನೆ : ಶ್ರೀನಿವಾಸ ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

srinivas-prads
ಬೆಂಗಳೂರು,ಅ.23- ಅಧಿಕಾರವಿದ್ದಾಗ ಎಲ್ಲರೂ ನಮ್ಮ ಜತೆ ಇರುತ್ತಾರೆ. ಆದರೆ ಅಕಾರ ಇಲ್ಲದಾಗ ಯಾರೂ ಗುರುತಿಸುವುದಿಲ್ಲ. ಆದರೆ ಕೆಲವರು ಪ್ರೀತಿ-ವಿಶ್ವಾಸ ನಂಬಿಕೆ ಇಟ್ಟು ಕೊನೆವರೆಗೂ ಇರುತ್ತಾರೆ. ಇದು ನನಗೆ ತುಂಬ ಖುಷಿಯಾಗುತ್ತದೆ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಆದರ್ಶ ಸುಗಮ ಸಂಗೀತ ಅಕಾಡೆಮಿ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆದರ್ಶ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ತಮ್ಮ ಮನದಾಳದ ಮಾತುಗಳನ್ನು ಹೀಗೆ ಬಿಚ್ಚಿಟ್ಟರು. ನನ್ನನ್ನು ಆಹ್ವಾನಿಸಿ ಸತ್ಕರಿಸುತ್ತಿರುವುದು ಸಂತೋಷದ ಜತೆಗೆ ಅಚ್ಚರಿಯನ್ನು ಕೂಡ ಉಂಟುಮಾಡಿದೆ. ನನ್ನ ರಾಜಕೀಯ ಜೀವನ ಕವಲು ದಾರಿಯಲ್ಲಿದೆ. ಮುಂದೆ ಅತಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ ಎಂದು ತಿಳಿಸಿದರು.

ಮಾಜಿ ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ, ದಲಿತ ಚಳವಳಿ ಮುಖಾಂತರ ತಮ್ಮ ಹೋರಾಟದ ಜೀವನ ಆರಂಭಿಸಿದ ಶ್ರೀನಿವಾಸ್ ಪ್ರಸಾದ್ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ವಿರೋಧ ಪಕ್ಷಗಳು ಈಗ ತುದಿಗಾಲಲ್ಲಿ ನಿಂತಿವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಇದೇ ವೇಳೆ ಆದರ್ಶ ಸುಗಮ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಮತ್ತು ವಾದ್ಯ ಸಂಗೀತ ನೆರೆದಿದ್ದವರನ್ನು ಮನರಂಜಿಸಿತು. ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ, ಗಾಯಕ ವೈ.ಕೆ. ಮುದ್ದುಕೃಷ್ಣ, ಸಾಹಿತಿ ಡಾ.ದೊಡ್ಡ ರಂಗೇಗೌಡ, ಡಾ. ಶಿವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin