ನಮ್ಮ ತಂಟೆಗೆ ಬಂದ್ರೆ ಕಣ್ ಕೀಳ್ತಿವಿ ಹುಷಾರ್ : ಪಾಕ್ ಗೆ ಪರಿಕ್ಕರ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Manohar-Parikkar-01

ಪಣಜಿ, ನ.27-ಭಾರತ ಶಾಂತಿಪ್ರಿಯ ದೇಶ. ನಾವು ಯುದ್ದವನ್ನು ಬಯಸುವುದಿಲ್ಲ. ಆದರೆ ವಿನಾಕಾರಣ ನಮ್ಮ ತಂಟೆಗೆ ಬಂದರೆ ವೈರಿಗಳ ಕಣ್ಣುಗಳನ್ನು ಕಿತ್ತು ಹಾಕುತ್ತೇವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಭಾರತ ನಮ್ಮ ಒಬ್ಬ ಸೈನಿಕರನ್ನು ಕೊಂದರೆ ನಾವು ಅದಕ್ಕೆ ಪ್ರತಿಯಾಗಿ ಮೂವರು ಭಾರತೀಯ ಯೋಧರನ್ನು ಕೊಲ್ಲುತ್ತೇವೆ ಎಂಬ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್‍ರ ಉದ್ದಟತನದ ಹೇಳಿಕೆಗೆ ಪರಿಕ್ಕರ್ ತಿರುಗೇಟು ನೀಡಿದ್ದಾರೆ.


ನೋಟ್ ಬ್ಯಾನ್ ಖಂಡಿಸಿ ಕರೆಕೊಟ್ಟಿರುವ ಭಾರತ್ ಬಂದ್ ಗೆ ನಿಮ್ಮ ಬೆಂಬಲವಿದೆಯೇ ..?

View Results


ಕರಾವಳಿ ರಾಜ್ಯ ಗೋವಾದ ಅಲ್ಡೋನಾ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು. ನಮಗೆ ಜಗಳವೆಂದರೆ ಕಿರಿಕಿರಿ. ಆದರೆ ನಮ್ಮ ದೇಶದ ಮೇಲೆ ಯಾರಾದರೂ ಕೆಟ್ಟ ದೃಷ್ಟಿ ಬೀರಿದ್ದೇ ಆದರೆ ಆ ದುಷ್ಟ ಕಣ್ಣುಗಳನ್ನು ಕಿತ್ತು ಹಾಕಿ ಅವರ ಕೈಗೆ ಕೊಡುತ್ತೇವೆ. ಅಂಥ ಅಗಾಧ ಸಾಮಥ್ರ್ಯ ನಮಗಿದೆ ಎಂದು ರಕ್ಷಣಾ ಸಚಿವರು ಎಚ್ಚರಿಕೆ ನೀಡಿದರು.
ಗಡಿ ಭಾಗದಲ್ಲಿ ಕಾಲು ಕೆರೆದುಕೊಂಡು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ನಮ್ಮ ಯೋಧರು ಸರಿಯಾಗಿಯೇ ಪಾಠ ಕಲಿಸುತ್ತಿದ್ದಾರೆ ಎಂದು ಅವರು ಹೇಳಿದರು.  ಗಡಿಯಲ್ಲಿ ಯಾರ ಕೈಯಲ್ಲಿ ಎಕೆ-47 ಬಂದೂಕು ಕಂಡುಬರುತ್ತದೆಯೋ ಅವರ ಮೇಲೆ ಮುಲಾಜಿಲ್ಲದೇ ಗುಂಡು ಹಾರಿಸಿ ಸದೆಬಡಿಯಿರಿ ಎಂದು ನಮ್ಮ ವೀರಯೋಧರಿಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮನೋಹರ್ ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin