ನಮ್ಮ ಬೆಟ್ಟವನ್ನು ನಮ್ಮ ಗೋವುಗಳಿಗೆ ಬಿಡಿ ಶ್ರೀ ರಾಘವೇಶ್ವರತೀರ್ಥ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

HANURU

ಹನೂರು, ಫೆ.16-ಭಗವಂತ ನಮಗಾಗಿ ಗೋವನ್ನು ಸೃಷ್ಠಿಮಾಡಿದ್ದಾನೆ, ಅಂತೆಯೇ ಗೋವಿಗಾಗಿ ಮೇವನ್ನು ಸೃಷ್ಠಿಮಾಡಿದ್ದಾನೆ. ಕಾಡಿನ ಮೇವು ನಮ್ಮ ಗೋವುಗಳ ಹಕ್ಕು ಆದ್ದರಿಂದ ನಮ್ಮ ಬೆಟ್ಟವನ್ನು ನಮ್ಮ ಗೋವುಗಳಿಗೆ ಬಿಡಿ ಎಂಬ ಅಭಿಯಾನಕ್ಕೆ ಅದ್ಧೂರಿ ಚಾಲನೆ ದೊರಕಿದ್ದು ಮುಂದಿನ ದಿನಗಳಲ್ಲಿ ಈ ಮೂಲಕ ಗೋಪಾಲಕನ ವಿಶ್ವದರ್ಶನ ಮಾಡಿಸಬೇಕಾಗುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರತೀರ್ಥ ಸ್ವಾಮೀಜಿಗಳು ಸರ್ಕಾರವನ್ನು ಎಚ್ಚರಿಸಿದರು.ಹನೂರುಪಟ್ಟಣದಹೊರವಲಯದಲ್ಲಿಆಯೋಜಿಸಲಾಗಿದ್ದ ನಮ್ಮ ಬೆಟ್ಟ ನಮಗೆ ಬಿಡಿ ಎಂಬ ಪ್ರತಿಭಟನಾಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇವನ್ನು ಅಧಿಕಾರಿಗಳು ಸೃಷ್ಠಿಮಾಡಿಲ್ಲ, ರಾಜಕಾರಣಿಗಳು ಸೃಷ್ಠಿಮಾಡಿಲ್ಲ, ಸರ್ಕಾರ ಸೃಷ್ಟಿಮಾಡಿಲ್ಲ ಆ ಭಗವಂತ ಗೋಮಾತೆಗಾಗಿಯೇ ಸೃಷ್ಠಿಮಾಡಿದ್ದಾನೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂಇಲ್ಲ ಗೋವು-ಮೇವಿನ ನಡುವೆಯಾರೂ ಬೇಲಿ ಹಾಕಲು ಸಾಧ್ಯವಿಲ್ಲ ಹಾಗೇ ಮಾಡಿದ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧಉಗ್ರವಾದಹೋರಾಟ ಮಾಡಲೇ ಬೇಕಾಗುತ್ತದೆ ಎಂದು ತಿಳಿಸಿದರು.

1972ರ ಅರಣ್ಯರಕ್ಷಣಾಕಾಯಿದೆಯ ಪ್ರಕಾರ ನ್ಯಾಷನಲ್ ಪಾರ್ಕ್‍ಗಳಿಗೆ ಮಾತ್ರ ಗೋವುಗಳನ್ನು ಬಿಡಬಾರದು ಎಂಬ ಕಾನೂನಿದೆ, ಆದರೆ ವನ್ಯಜೀವಿ ವಲಯಗಳಲ್ಲಿ ಗೋವುಗಳನ್ನು ಮೇಯಲು ಬಿಡಬಾರದೆಂದುಎಲ್ಲಿಯೂ ಹೇಳಿಲ್ಲ. ಆದರೆ ಕಾಡಿನ ರಕ್ಷಣೆಯ ನೆಪವೊಡ್ಡಿ ಅಧಿಕಾರಿಗಳೇ ಅರಣ್ಯ ಸಂಪತ್ತಿನ ಲೂಟಿಗಾಗಿಟೊಂಕಕಟ್ಟಿ ನಿಂತಿದ್ದಾರೆಅರಣ್ಯ ಸಂಪತ್ತನ್ನು ಲೂಟಿ ಮಾಡಲು ತೊಂದರೆಯಾಗುತ್ತದೆಂಬ ಕಾರಣಕ್ಕೆ ಗೋಪಾಲಕರಿಗೆ ಅರಣ್ಯ ಪ್ರವೇಶ ನಿರ್ಬಂಧಿಸಿದ್ದಾರೆ ಎಂದು ನುಡಿದರು.ಮುಡಿಗುಂಡ ವಿರಕ್ತಮಠದ ಶ್ರೀಕಂಠಮಹಾಸ್ವಾಮಿ ಮಾತನಾಡಿ, ಪ್ರಪಂಚದಲ್ಲಿ ಗೋವಿಗೆ ಮಾತ್ರ ನಾವು ತಾಯಿಸ್ಥಾನವನ್ನುಕೊಟ್ಟಿದ್ದೇವೆ ಬೇರೆ ಯಾವುದೇ ಪ್ರಾಣಿಗೂ ಸಹ ತಾಯಿ ಸ್ಥಾನ ನೀಡಿಲ್ಲ. ಹೆತ್ತತಾಯಿ ಕೇವಲ 6 ರಿಂದ 1 ವರ್ಷಗಳಷ್ಟು ದಿನಗಳು ಮಾತ್ರ ಎದೆಹಾಲುಣಿಸಿ ಪೋಷಿಸುತ್ತಾಳೆ ಆದರೆ ಗೋಮಾತೆ ನಮ್ಮ ಜೀವನಪೂರ್ತಿ ಹಾಲುಣಿಸಿ ಪೋಷಿಸುತ್ತಾಳೆ ಇಂತಹ ಮಾತೆಗೆ ಮೇವನ್ನು ನೀಡದೆ ನಮ್ಮ ಸರ್ಕಾರ ವಂಚಿಸುತ್ತಿರುವುದು ದುರ್ದೈವದ ಸಂಗತಿ ಎಂದರು.

ಬೆಟ್ಟದ ತಪ್ಪಲಿನ 3000ಕ್ಕೂ ಹೆಚ್ಚು ಸಂಖ್ಯೆಯಗೋಪಾಲಕರುರೈತರು ಪಾಲ್ಗೊಂಡುಗೋಮಾತೆಯರಕ್ಷಣೆಗಾಗಿ ಹೋರಾಡಲು ಸಿದ್ದ ಎಂದು ಅಗ್ನಿಸಾಕ್ಷಿಯಾಗಿ ಪ್ರಜ್ಞೆ  ಮಾಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಸಂಪೂರ್ಣ ಅರಣ್ಯ ಅಕ್ರಮಿಸಿಕೊಂಡಿರುವ ಅರಣ್ಯಾಧಿಕಾರಿಗಳ ದುರಾಡಳಿದಿಂದ ರೈತರು ಮತ್ತು ಜಾನುವಾರುಗಳು ಮೇವಿಲ್ಲದೆ ಸಾವು ಬದುಕಿನ ನಡುವೆ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಹೇಳಿದರು.ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀಗುರುಸ್ವಾಮಿಗಳು, ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗುಂಡೇಗಾಲ, ಶ್ರೀ ನಂಜುಂಡಸ್ವಾಮಿಗಳು, ಹನೂರು ಭಿಕ್ಷದ ಮಠ, ರಾಮಾಪುರದಾಸೋಹ ಮಠಾಧ್ಯಕ್ಷ ಸೋಮಶೇಖರಸ್ವಾಮಿಗಳು,ಅಜ್ಜೀಪುರ ಪಟ್ಟದ ಮಠಾಧ್ಯಕ್ಷ ಶ್ರೀ ನಂದೀಶಶಿವಾಚಾರ್ಯ ಸ್ವಾಮಿ, ಡಾ.ಕೃಷ್ಣಮೂರ್ತಿ, ಮೋಹನ್, ನಿಶಾಂತ್, ಫ್ರಾಂಕ್ಲಿನ್, ಮಧು, ಈಶ್ವರಿ, ಮಾಜಿ ಶಾಸಕಿ ಪರಿಮಳನಾಗಪ್ಪ, ಪೋನ್ನಾಚಿ ಮಹದೇವಸ್ವಾಮಿ, ಕಿಸಾನ್ ಸಂಘದರೈತ ಮುಖಂಡರಾಜೇಂದ್ರ, ಕೆ.ಪಿ.ವೃಷಬೇಂದ್ರಸ್ವಾಮಿ ಭಾಗವಹಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin