ನಮ್ಮ ಸರ್ಕಾರದ ಜನಪರ ಯೋಜನೆಗಳೇ ವಿರೋಧ ಪಕ್ಷಗಗಳಿಗೆ ಪಾಠ ಕಲಿಸುತ್ತವೆ : ಆಂಜನೇಯ

ಈ ಸುದ್ದಿಯನ್ನು ಶೇರ್ ಮಾಡಿ

anjaneya

ಚಿತ್ರದುರ್ಗ,ಮೇ 13- ವಿರೋಧ ಪಕ್ಷಗಳ ಟೀಕೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಸರ್ಕಾರ ರೂಪಿಸಿರುವ ಜನಪರ ಯೋಜನೆಗಳೇ ಅವರಿಗೆ ತಕ್ಕ ಉತ್ತರ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿರುಗೇಟು ನೀಡಿದ್ದಾರೆ. ಕೋಟೆಗಳ ನಾಡು ದುರ್ಗದಲ್ಲಿಂದು ಸರ್ಕಾರ ಹಮ್ಮಿಕೊಂಡಿರುವ ಜನ ಮನನ-ಜನ ನಮನ ಎಂಬ ಜನರಿಗೆ ಸೌಲಭ್ಯ ವಿತರಣೆ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿ ನಾಲ್ಕು ವರ್ಷಗಳು ಕಳೆದಿದೆ. ಹಾಗಾಗಿ ಜನರಿಗೆ ನಮನ ಎಂಬ ವಿಶೇಷ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ನಮ್ಮ ಸರ್ಕಾರದ ನಾಲ್ಕು ವರ್ಷಗಳ ಆಡಳಿತ ಶೂನ್ಯ ಎಂಬ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಜನಪರ ಯೋಜನೆಗಳು ಅವರಿಗೆ ಉತ್ತರ ನೀಡುತ್ತವೆ. ನಮ್ಮ ಯೋಜನೆಗಳನ್ನು ಸಹಿಸಲಾಗದೆ ಮನಬಂದಂತೆ ಟೀಕೆ ಮಾಡುತ್ತಾರೆ. ಇದೆಲ್ಲವನ್ನು ಜನರೇ ಅರಿತಿದ್ದಾರೆ ಎಂದು ತಿಳಿಸಿದರು.   ನಮ್ಮಲ್ಲಿ ಕಳಪೆ ನಾಯಕತ್ವ ಇಲ್ಲ. ಎಲ್ಲರು ಸಂಘಟಿತರಾಗಿ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ. ಈ ಕಾರ್ಯಕ್ರಮದ ಮೂಲಕ ಜನರಿಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮನವರಿಕೆಯಾಗಬೇಕೆಂಬುದು ನಮ್ಮ ಕಳಕಳಿಯಾಗಿದೆ ಎಂದರು.

ಸೌಲಭ್ಯ ವಿತರಣೆ:

ಬಗರ್ ಹುಕುಂ ಸಾಗುವಳಿ ಚೀಟಿ, ಜಮೀನು ಹಕ್ಕುಪತ್ರ, ನಿರುದ್ಯೋಗಿಗಳಿಗೆ ಸಾಲಸೌಲಭ್ಯ, ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್, ಸ್ವಸಹಾಯ ಸಂಘಗಳ ಸದಸ್ಯರಿಗೆ ಸಹಾಯಧನ ಸೇರಿದಂತೆ ಫಲಾನುಭವಿಗಳಿಗೆ ಇಂದು ವಿವಿಧ ಸೌಲಭ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.

ಬೃಹತ್ ವೇದಿಕೆ:

ಸಮಾವೇಶಕ್ಕೆ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು , ಜನರು ಕುಳಿತುಕೊಳ್ಳಲು ಕೂಡ ವಿಸ್ತಾರವಾದ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ನಗರದಲ್ಲಿ ಸಚಿವರ ಫ್ಲೆಕ್ಸ್ ಅಳವಡಿಸಲಾಗಿತ್ತು. ನಗರದ ಸುತ್ತಮುತ್ತ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳ ಕುರಿತು ಫ್ಲೆಕ್ಸ್ ಬ್ಯಾನರ್‍ಗಳು ರಾರಾಜಿಸಿದವು.
ವೇದಿಕೆಯ ಅಕ್ಕಪಕ್ಕ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮ ಪರಿಚಯಿಸುವ ನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅಗ್ನಿಶಾಮಕ ದಳ, ಪ್ರವಾಸೋದ್ಯಮ, ಶಿಕ್ಷಣ, ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಕಾರ್ಯಕ್ರಮಗಳನ್ನು ಬಿಂಬಿಸಲಾಗಿದೆ.   ಹರಿದು ಬಂದ

ಜನಸಾಗರ:

ಇಂದು ಒಂಭತ್ತು ಜಿಲ್ಲೆಗಳ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಕೋಟೆ ನಾಡಿಗೆ ಜನಸಾಗರವೇ ಹರಿದು ಬಂದಿದೆ. ಎಲ್ಲೇ ನೋಡಿದರೂ ಜನ…ಜನ…ಜನ.   ಜನಸಾಗರ ಹಗೂ ಸಾವಿರಾರು ವಾಹನಗಳ ಆಗಮನದಿಂದ ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.  ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತಿತರರು ಇದ್ದರು.

Facebook Comments

Sri Raghav

Admin