ನರಬಲಿ ಕೊಟ್ಟು, ಶವದ ಜೊತೆ ಸಂಭೋಗ ಮಾಡಿ ಎಸ್ಕೇಪ್ ಆಗಿದ್ದ ಮಾಟಗಾರನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Rape-Sex

ಕನ್ನೌಜ್, ಜೂ.11- ನಿಧಿಗಾಗಿ 14 ವರ್ಷದ ಬಾಲಕಿಯನ್ನು ಕೊಂದು, ಶವ ಸಂಭೋಗ ಮಾಡಿ ಪರಾರಿಯಾಗಿದ್ದ ಮಾಟಗಾರನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಕನ್ನೌಜ್ ಜಿಲ್ಲೆಯ ಭಾದೌಸಿ ಗ್ರಾಮದಲ್ಲಿ ಕಳೆದ ವಾರ ಈ ಭಯಾನಕ ಕೃತ್ಯ ನಡೆದಿದೆ. ಮಾಟಗಾರ ಹಾಗೂ ಶಿಕ್ಷಕನಾಗಿದ್ದ ಕೃಷ್ಣ ಕುಮಾರ್ ಶರ್ಮ ಎಂಬಾತ ಕವಿತಾ ಎಂಬ ಬಾಲಕಿಯನ್ನು ಜೋಳದ ಹೊಲಕ್ಕೆ ಕರೆದೊಯ್ಡು ಕೊಂದು ಹಾಕಿ ನಂತರ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಮತ್ತು ಹೊಲದಲ್ಲಿರುವ ಬಂಗಾರದ ನಿಧಿ ಪಡೆಯಬೇಕಾದರೆ ಕೆಲವು ಕಠಿಣ ಆಚರಣೆಗಳನ್ನು ಮಾಡಬೇಕೆಂದು ಬಾಲಕಿಯ ತಂದೆಗೆ ಸುಳ್ಳು ಆಶ್ವಾಸನೆ ನೀಡಿ ಈತ ಈ ನೀಚ ಕೃತ್ಯ ಎಸಗಿದ್ದಾನೆ ಎಂದು ಕನ್ನೌಜ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಚಂದ್ರ ಗೋಸ್ವಾಮಿ ವಿವರಿಸಿದ್ದಾರೆ.

ಘಟನೆ ವಿವರ :

ಬಾಲಕಿಯ ತಂದೆ ಮಹಾವೀರ್ ಪ್ರಸಾದ ಮೂಢನಂಬಿಕೆಯ ವ್ಯಕ್ತಿಯಾಗಿದ್ದು, ತಮ್ಮ ಮನೆ ಮತ್ತು ಹೊಲದಲ್ಲಿ ಪ್ರಾಚೀನ ಕಾಲದ ಚಿನ್ನವನ್ನು ಹುದುಗಿಡಲಾಗಿದೆ ಎಂದು ಬಲವಾಗಿ ನಂಬಿದ್ದನು. ಇದೇ ಕಾರಣಕ್ಕಾಗಿ ವಾಮಾಚಾರ ಮಾಡುವ ಕೃಷ್ಣ ಕುಮಾರ್ ಶರ್ಮನನ್ನು ಭೇಟಿ ಮಾಡಿ ಸಹಾಯಕ್ಕಾಗಿ ಕೋರಿದ್ದನು. ನೆಲದಲ್ಲಿರುವ ಐದು ಕೆ.ಜಿ. ಚಿನ್ನದ ನಿಧಿ ಪಡೆಯಬೇಕಾದರೆ ನಿಮ್ಮ ಮಗಳನ್ನು ನರಬಲಿ ಅರ್ಪಿಸಿದರೆ ಕೆಲವೇ ಗಂಟೆಗಳಲ್ಲಿ ನಿಕ್ಷೇಪ ನಿಮ್ಮದಾಗುತ್ತದೆ. ನಂತರ ಬಾಲಕಿಯೂ ಬದುಕುತ್ತಾಳೆ ಎಂದು ಈ ದುಷ್ಟ, ಮಹಾವೀರ್ ಮತ್ತು ಆತನ ಪತ್ನಿ ಪುಷ್ಪಾರನ್ನು ನಂಬಿಸಿದ್ದನು.

ಇದನ್ನು ನಂಬಿದ ದಂಪತಿ ಸ್ಥಳೀಯ ದೇವಸ್ಥಾನದಲ್ಲಿ ಈತನೊಂದಿಗೆ ನರಬಲಿ ಪೂಜೆಗಾಗಿ ಹಾಜರಾದರು. ಕಠಿಣ ಆಚರಣೆಯ ನಾಟಕವಾಡಿದ ಕೃಷ್ಣಕುಮಾರ್ ಬಾಲಕಿಯ ಪ್ರಜ್ಞೆ ತಪ್ಪಿಸಿದ. ನಂತರ ಹೊಲದಲ್ಲಿ ಇನ್ನೊಂದು ಪೂಜೆ ಆಚರಿಸಬೇಕೆಂದು ತಂದೆ-ತಾಯಿಯೊಂದಿಗೆ ಬಾಲಕಿಯನ್ನು ಹೊಲಕ್ಕೆ ಕರೆದೊಯ್ಡು, ಅವರ ಮುಂದೆಯೇ ಆಕೆಯನ್ನು ನಗ್ನಗೊಳಿಸಿ, ಆಕೆಯ ಕೊರಳನ್ನು ಸೀಳಿ ರಕ್ತ ಸಂಗ್ರಹಿಸಿ ದೇವಿಗೆ ಸಮರ್ಪಿಸಬೇಕೆಂದು ತಿಳಿಸಿ ಹತ್ಯೆ ಮಾಡಿದ. ನಂತರ ಇನ್ನೊಂದು ವಿಧಿ-ವಿಧಾನ ಬಾಕಿ ಇದೆ ಎಂದು ಹೇಳಿ ಪೋಷಕರನ್ನು ದೇವಸ್ಥಾನಕ್ಕೆ ಕಳುಹಿಸಿ ಶವದ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ.

ಎಷ್ಟು ಹೊತ್ತಾದರೂ ಮಾಟಗಾರ ದೇವಸ್ಥಾನಕ್ಕೆ ಬರದೇ ಇದ್ದ ಕಾರಣ ಅನುಮಾನಗೊಂಡ ಮಹಾವೀರ್ ದಂಪತಿಗೆ ಆತನ ನಿಜವಾದ ದುಷ್ಟತನ ತಿಳಿಯುವ ಹೊತ್ತಿಗೆ ಕಾಲ ಮಿಂಚಿತ್ತು. ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಹೊಲಕ್ಕೆ ಧಾವಿಸಿದ ಪೊಲೀಸರು ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.   ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಾಟಗಾರನನ್ನು ಬಂಧಿಸಿದರು. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪಕ್ಕಾಗಿ ಪೋಷಕರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin