ನರಬಲಿ ಯತ್ನ ಸುಳ್ಳು : ಪೊಲೀಸರ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

sfAG

ಕೂಡ್ಲಿಗಿ(ಬಳ್ಳಾರಿ),ಆ26- ತಾಲೂಕಿನ ಸಾಸಲವಾಡಿ ಗ್ರಾಮದಲ್ಲಿ ನರಬಲಿ ಆರೋಪದ ಹಿನ್ನಲೆಯಲ್ಲಿ ಪೂಜಾ ಸಮಯದಲ್ಲಿ 20 ಜನರನ್ನು ಬಂಧಿಸಲಾಗಿದ ಎಂದು ತಿಳಿದು ಬಂದಿದೆ.
ಮಲಿಯಮ್ಮ ದೇಗುಲದಲ್ಲಿ ಕುಟುಂಬವೊಂದು ಪೂಜೆಗೆಂದು ಆಗಮಿಸಿತ್ತು.  ತಾಯಿ, ಮಗು ನರಬಲಿ ಕೊಡುತ್ತಿದ್ದಾರೆಂಬ ಅನುಮಾನದಿಂದ ಗ್ರಾಮಸ್ಥರು ಪೂಜೆಗೆಂದು ಬಂದ ಜುಂಜನ ಬೈಲು ಗ್ರಾಮದ ಎಲ್ಲರನ್ನು ಪೊಲೀಸರಿಗೆ ಒಪ್ಪಿಸಿದರು ಎನ್ನಲಾಗಿದೆ.

ಪೊಲೀಸರ ಸ್ಪಷ್ಟನೆ: ಸಾಸಲವಾಡಿ ಗ್ರಾಮದಲ್ಲಿ ಯಾವುದೇ ನರಬಲಿ ನಡೆದಿಲ್ಲ. ಈ ಬಗ್ಗೆ ಗಲಾಟೆಯಾಗಿಲ್ಲ. ಮಲಿಯಮ್ಞ ದೇವಸ್ಥಾನದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ ಅಷ್ಟೇ . ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ನರಬಲಿ ಯತ್ನ ಸುಳ್ಳು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin