ನರಭಕ್ಷಕ ಈ ಬಾಲಕ : 9 ವರ್ಷದ ಹುಡುಗನನ್ನು ಕೊಂದು, ರಕ್ತ ಕುಡಿದು ಮಾಂಸ ತಿಂದ ತೇಗಿದ ..!

ಈ ಸುದ್ದಿಯನ್ನು ಶೇರ್ ಮಾಡಿ

horrible-Boy

ಲೂಧಿಯಾನ, ಜ.21-ಇದು ಅತ್ಯಂತ ಭೀಭತ್ಸ ಕೃತ್ಯ. 9 ವರ್ಷದ ಬಾಲಕನೊಬ್ಬನನ್ನು ಭೀಕರವಾಗಿ ಕೊಂದು ದೇಹವನ್ನು 6 ತುಂಡುಗಳಾಗಿ ಕತ್ತರಿಸಿ ಭಕ್ಷಿಸಿ, ರಕ್ತ ಕುಡಿದ ಆರೋಪದ ಮೇಲೆ ಪಂಜಾಬ್‍ನ ಲೂಧಿಯಾನದ 16 ವರ್ಷದ ಹುಡುಗನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.   ದೀಪು ಕುಮಾರ್ ಎಂಬ ಬಾಲಕ ಸೋಮವಾರದಿಂದ ಕಣ್ಮರೆಯಾಗಿದ್ದ. ಮರುದಿನ ಲೂಧಿಯಾನದ ದುರ್ಗಿ ಪ್ರದೇಶದ ನಿರ್ಜನ ಸ್ಥಳವೊಂದರಲ್ಲಿ ತಲೆ ಕತ್ತರಿಸಿದ್ದ ಆತನ ದೇಹ ಪತ್ತೆಯಾಗಿತ್ತು. ಕಗ್ಗೊಲೆಯಾದ ಬಾಲಕ ಮತ್ತು ಈ ಭೀಕರ ಕೃತ್ಯ ಎಸಗಿದ ಹುಡುಗ ಇವರಿಬ್ಬರು ಒಂದೇ ಓಣಿಯ ವಲಸೆ ಕಾರ್ಮಿಕರ ಮಕ್ಕಳು.

ಬಾಲಕನ ತಲೆ ಕತ್ತರಿಸಿ, ಗಟಗಟನೆ ರಕ್ತ ಕುಡಿದ 8ನೇ ತರಗತಿ ವಿದ್ಯಾರ್ಥಿಯು ದೇಹವನ್ನು ಆರು ತುಂಡುಗಳಾಗಿ ಮಾಡಿ ಅವುಗಳನ್ನು ಭಕ್ಷಿಸಿದ, ನಂತರ ಕೈಕಾಲು-ಮುಖ ತೊಳೆದುಕೊಂಡು ಏನೂ ಗೊತ್ತಿಲ್ಲದಂತೆ ಮನೆಗೆ ಹಿಂದಿರುಗಿದ. ಅಲ್ಲದೇ ಆತನ ತಾಯಿ ಚಂಡೀಗಢಕ್ಕೆ ಹೋದ ಕಾರಣ ತಮ್ಮ ತಂದೆಗೆ ಈ ಹಂತಕ ಅಡುಗೆಯನ್ನೂ ತಯಾರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಆಧರಿಸಿ ಹಂತಕನನ್ನು ಪೊಲೀಸರು ಬಂಧಿಸಿದರು. ಬಾಲಕನೊಂದಿಗೆ ಸುಮಾರು 16 ವರ್ಷದ ಹುಡುಗ ಹೋಗುತ್ತಿದ್ದ ದೃಶ್ಯ ದಾಖಲಾಗಿತ್ತು. ಇವರು ಸ್ಥಳೀಯ ಕೂಲಿ ಕಾರ್ಮಿಕರ ಮಕ್ಕಳಿರಬಹುದೆಂದು ಶಂಕಿಸಿ ತಪಾಸಣೆ ನಡೆಸಿದ ಪೊಲೀಸರು ಆತನನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಇಡೀ ಘೋರ ಘಟನೆ ಬೆಳಕಿಗೆ ಬಂದಿತು.

ಇದೊಂದು ನರಭಕ್ಷಣೆ ಪ್ರಕರಣವಾಗಿದೆ. ಮಾಂಸಪ್ರಿಯನಾದ ಈತ ಮನುಷ್ಯರ ದೇಹವನ್ನು ತಿನ್ನಲು ಹಪಹಪಿಸುತ್ತಿದ್ದ. ಹಸಿ ಕೋಳಿ ಮತ್ತು ಕುರಿ ಮಾಂಸ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದ ಈತನಿಗೆ ಮಾನವ ದೇಹದ ರುಚಿ ನೋಡಲು ಬಯಕೆಯಾಗುತ್ತಿತ್ತಂತೆ. ಮಾಂಸ ತಿನ್ನಬೇಕಿನಿಸಿದಾಗಲೆಲ್ಲ ತನ್ನದೇ ಕಾಲನ್ನೂ ತಿನ್ನಲು ಈತ ಬಯಸಿದ್ದ ಸಂಗತಿಯನ್ನು ತಮ್ಮ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ ಭೂಪಿಂದರ್ ಸಿಂಗ್ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ 1.40ಕ್ಕೆ ದೀಪು ಮನೆಗೆ ಬಂದ ಈತ ಗಾಳಿಪಟಕ್ಕೆ ದಾರ ನೀಡುವುದಾಗಿ ಪುಸಲಾಯಿಸಿ ಆತನನ್ನು ತಾನು ವಾಸವಿದ್ದ ಸ್ಥಳಕ್ಕೆ ಕರೆದುಕೊಂಡು ಹೋದ. ಈ ಸಂದರ್ಭದಲ್ಲಿ ಆತನ ಪೋಷಕರು ಮನೆಯಲ್ಲಿ ಇರಲಿಲ್ಲ. ದೀಪುವನ್ನು ಉಸಿರುಗಟ್ಟಿಸಿ ಕೊಂದು ಮನೆಯ ಶೌಚಾಲಯಕ್ಕೆ ಶವವನ್ನು ಏಳೆದೊಯ್ದು, ಗಿಡ ಕತ್ತರಿಸುವ ಹರಿತವಾದ ಸಲಕರಣೆಯಿಂದ ತಲೆಯನ್ನು ಕತ್ತರಿಸಿ ನಂತರ ದೇಹವನ್ನು ಆರು ತುಂಡುಗಳಾಗಿ ಮಾಡಿ ಭಕ್ಷಿಸಿದ. ದೇಹದ ಉಳಿದ ಭಾಗವನ್ನು ಪಾಲಿಥೀನ್ ಬ್ಯಾಗ್‍ನಲ್ಲಿಟ್ಟ ಸೈಕಲ್ ಮೂಲಕ ಕೊಂಡೊಯ್ದು, ನಿರ್ಜನ ಸ್ಥಳದಲ್ಲಿ ಎಸೆದ. ನಂತರ ಬಾಲಕನ ಹೃದಯವನ್ನು ಹೊರಗೆ ತೆಗೆದು ತನ್ನ ಶಾಲೆಯ ಆವರಣದಲ್ಲಿ ಹಾಕಿದ.

ತನ್ನ ಶಾಲೆ ಮತ್ತು ಶಿಕ್ಷಕರನ್ನು ದ್ವೇಷಿಸುತ್ತಿದ್ದ 8ನೇ ತರಗತಿಯ ಈ ಕ್ರೂರ ವಿದ್ಯಾರ್ಥಿಯು ಸ್ಕೂಲ್‍ಗೆ ಕೆಟ್ಟ ಹೆಸರು ತರುವ ದುರದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ವಾಟರ್‍ಟ್ಯಾಂಕ್‍ನಲ್ಲಿ ಕೊಳೆತ ಹೃದಯವನ್ನು ವಶಪಡಿಸಿಕೊಳ್ಳಲಾಗಿದೆ. ಹಂತಕನನ್ನು ಪೊಲೀಸರು ದೈಹಿಕ ಮತ್ತು ಮಾನಸಿಕ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ. ಈ ಭೀಭತ್ಸ ಘಟನೆಯಿಂದ ಲೂಧಿಯಾನ ಜನತೆ ಬೆಚ್ಚಿ ಬಿದ್ದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin