ನರೇಂದ್ರ ಮೋದಿ ‘ಪವರ್‍ಹೌಸ್’ ಮೇಲೆ ಆಮ್ಆದ್ಮಿ ಕಣ್ಣು…!

ಈ ಸುದ್ದಿಯನ್ನು ಶೇರ್ ಮಾಡಿ

Modi--01

ನವದೆಹಲಿ, ಫೆ.7-ಪಂಜಾಬ್ ಮತ್ತು ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ನಿರೀಕ್ಷೆಗೂ ಮೀರಿ ಗಮನಸೆಳೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ (ಆಪ್) ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ ಕೇಂದ್ರ ಗುಜರಾತ್ ಮೇಲೆ ಕಣ್ಣಿಟ್ಟಿದೆ. ಈ ವರ್ಷಾಂತ್ಯದ ವೇಳೆ ಗುಜರಾತ್‍ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲ 182 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೀಳಿಸಲು ಆಪ್ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಇದೇ ಉದ್ದೇಶಕ್ಕಾಗಿ ಪಕ್ಷವು ಗುಜರಾತ್ ಅಜಾದಿ ಆಂದೋಲನ್ ಎಂಬ ಎರಡು ತಿಂಗಳ ಅಭಿಯಾನ ಆರಂಭಿಸಿದೆ. ಮಾರ್ಚ್ 26ರವರೆಗೆ ಈ ಆಂದೋಲನ ಮುಂದುವರಿಯಲಿದೆ. ಅನಾರೋಗ್ಯದ ನಡುವೆಯೂ ಕೇಜ್ರಿವಾಲ್ ಡಿಸೆಂಬರ್‍ನಲ್ಲಿ ನಡೆಯುವ ಚುನಾವಣಾ ಪೂರ್ವಸಿದ್ಧತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕೇಜ್ರಿವಾಲ್ ಈಗಾಗಲೇ ಎರಡು ಬಾರಿ ಗುಜರಾತ್ ಪ್ರವಾಸ ಕೈಗೊಂಡಿದ್ದು, ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಅಲ್ಲದೇ ಕಳೆದೊಂದು ವರ್ಷದಿಂದ ಅಲ್ಲಿನ ರಾಜ್ಯ ಸರ್ಕಾರದ ವಿರುದ್ಧ ಆಪ್ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಪಕ್ಷವು ಇದೇ ಮೊದಲ ಬಾರಿ ಪೂರ್ಣ ಪ್ರಮಾಣದ ಪ್ರಚಾರ ಕೈಗೊಂಡಿದೆ ಎಂದು ಎಎಪಿ ವಕ್ತಾರ ಹರ್ಷಿಲ್ ನಾಯಕ್ ತಿಳಿಸಿದ್ದಾರೆ.   ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಶೋಷಣೆ ವಿರುದ್ಧ ಗುಜರಾತ್ ಜನರನ್ನು ವಿಮೋಚನೆ ಮಾಡುವುದು ಆಪ್‍ನ ಗುರಿಯಾಗಿದೆ. ಈ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಮತ್ತು ವ್ಯಾಪಾರ-ವಹಿವಾಟು ಎಲ್ಲವೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಷಾರೆಯಂತೆಯೇ ನಡೆಯುತ್ತಿದ್ದು, ಆಪ್ ಇದನ್ನು ಕೊನೆಗಾಣಿಸಲಿದೆ ಎಂದು ಗುಜರಾತ್ ವ್ಯವಹಾರಗಳ ಉಸ್ತುವಾರಿಯೂ ಆಗಿರುವ ದೆಹಲಿ ಶಾಸಕ ಗುಲಾಬ್ ಸಿಂಗ್ ಯಾದವ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin