ನಲ್‍ಪಾಡ್ ಅಡ್ಡೆ ಫರ್ಜಿ ಕೆಫೆ ಮತ್ತೆ ಓಪನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲ್‍ಪಾಡ್ ಅವರು ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ ಯುಬಿ ಸಿಟಿಯ ಫರ್ಜಿ ಕೆಫೆ ಮತ್ತೆ ತೆರೆಯಲು ಪೊಲೀಸರು ಷರತ್ತು ಬದ್ಧ ಅನುಮತಿ ನೀಡಿದ್ದಾರೆ. ವಿದ್ವತ್ ಹಲ್ಲೆ ಪ್ರಕರಣದ ನಂತರ ಯುಬಿ ಸಿಟಿಯಲ್ಲಿರುವ ಫರ್ಜಿ ಕೆಫೆಗೆ ಪೊಲೀಸರು ಬೀಗ ಜಡಿದಿದ್ದರು. ಹಲ್ಲೆ ನಡೆಸಿದ ನಲ್‍ಪಾಡ್ ಅವರಿಗೆ ಜಾಮೀನು ಸಿಗುವ ಮುನ್ನವೇ ಫರ್ಜಿ ಕೆಫೆ ತೆರೆಯಲು ಪೊಲೀಸರು ಅನುಮತಿ ನೀಡಿದ್ದಾರೆ. ಕೆಫೆಯೊಳಗೆ ಧೂಮಪಾನಕ್ಕೆ ಅವಕಾಶ ಮಾಡಿಕೊಡಬಾರದು. ಇರುವ ಟೇಬಲ್‍ಗಳಿಗಿಂತ ಒಬ್ಬನೇ ಒಬ್ಬ ವ್ಯಕ್ತಿ ಕೆಫೆಯಲ್ಲಿರಬಾರದು. ಗಲಾಟೆಯಾದ ಸಂದರ್ಭದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎನ್ನುವ ಷರತ್ತು ಸೇರಿದಂತೆ ಹಲವಾರು ಕಟ್ಟುನಿಟ್ಟಿನ ಸೂಚನೆ ನೀಡಿ ಫರ್ಜಿ ಕೆಫೆ ತೆರೆಯಲು ಕಬ್ಬನ್‍ಪಾರ್ಕ್ ಪೊಲೀಸರು ಅನುಮತಿ ನೀಡಿದ್ದಾರೆ.

Nalapad-Farzi-Cafe

Facebook Comments

Sri Raghav

Admin