ನವಿಲ ಮೇಲೆ ಕುಳಿತ 15 ಲಕ್ಷದ ಗಣಪ

ಈ ಸುದ್ದಿಯನ್ನು ಶೇರ್ ಮಾಡಿ

Ganersh-a

ಬೆಂಗಳೂರು, ಆ.30- ವಿಘ್ನ ನಿವಾರಕ ಗಣಪತಿ ಹಬ್ಬದ ಸಡಗರಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ.  ವಿವಿಧ ಆಕೃತಿಯ ವಿಭಿನ್ನತೆಯಿಂದ ಕೂಡಿದ ಮೂರ್ತಿಗಳು ನಗರವನ್ನು ಪ್ರವೇಶಿಸುತ್ತಿವೆ.  ವಿಶೇಷವಾಗಿ ರಾಜಾಜಿನಗರದ ಮಿಲ್ಕ್ ಕಾಲೋನಿಯ ಸ್ವಸ್ತಿಕ್ ಯುವಕರ ಸಂಘವು ಪ್ರತಿವರ್ಷದಂತೆ ಈ ವರ್ಷವೂ ಕೂಡ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನವಿಲ ಮೇಲೆ ಕುಳಿತ ವಿನಾಯಕನನ್ನು ಪ್ರತಿಷ್ಠಾಪನೆ ಮಾಡುತ್ತಿದೆ.   ವಿಶೇಷವೆಂದರೆ ಇದರಲ್ಲಿ ಅಮೆರಿಕನ್ ಡೈಮೆಂಡ್ ಬಳಸಿಕೊಂಡು 5.5 ಅಡ್ಡಿ ಎತ್ತರದ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ಕಳೆದ 3 ತಿಂಗಳಿಂದ ತಯಾರಿಸಲಾಗಿದೆ.  ಇದನ್ನು ರೈಲಿನ ಮೂಲಕ ಇಂದು ತರಲಾಗಿದ್ದು, ಇದು ಎಲ್ಲರ ಆಕರ್ಷಿಸಿದೆ.

ಆಶ್ರಯದಲ್ಲಿ 32ನೆ ವರ್ಷದ ಮಿಲ್ಕ್ ಕಾಲೋನಿ ಗಣೇಶೋತ್ಸವ ಸೆ.5 ರಿಂದ 11ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ. ಉತ್ಸವದ ಅಂಗವಾಗಿ ಸೆ.10ರಂದು ಸಂಜೆ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸೆ.5ರಂದು ಮಿಮಿಕ್ರಿ ದಯಾನಂದ್ ತಂಡದವರಿಂದ ಹಾಸ್ಯೋತ್ಸವ, 6ರಂದು ಸಂಗೀತ ರಸಮಂಜರಿ ನಡೆಯಲಿದ್ದು, ಇದರಲ್ಲಿ ಸಿನಿಮಾ ನಟರಾದ ವಿಜಯ್ ರಾಘವೇಂದ್ರ, ಸಾಧುಕೋಕಿಲ ಮುಂತಾದವರು ಭಾಗವಹಿಸುವರು.

ಸೆ.7ರಂದು ಗಂಗಾವತಿ ಪ್ರಾಣೇಶ್ ತಂಡದವರಿಂದ ಹಾಸ್ಯಸಂಜೆ, 8ರಂದು ಕಾರ್ತಿಕ್ ಶರ್ಮಾ ಮ್ಯೂಸಿಕಲ್ ನೈಟ್ಗೆ ನಟ ಗಣೇಶ್ ಆಗಮಿಸುವರು. 9ರಂದು ಲಿಟ್ಲ್ಚಾಂಪ್ಸ್ ಕಾರ್ಯಕ್ರಮದಲ್ಲಿ ಖ್ಯಾತ ಖಳನಟ ರವಿಶಂಕರ್ ಪಾಲ್ಗೊಳ್ಳುವರು. 10ರಂದು ನಡೆಯಲಿರುವ ನವೀನ್ ಸಜ್ಜು ಅವರ ಮ್ಯೂಸಿಕಲ್ ನೈಟ್ಗೆ ಕನ್ನಡ ನಟರಾದ ಪುನೀತ್ರಾಜ್ಕುಮಾರ್, ಯಶ್ ಆಗಮಿಸುವರು. 11ರಂದು ವೈಭವದ ಮೆರವಣಿಗೆ ನಂತರ ವಿನಾಯಕ ವಿಸರ್ಜನೆ ಮಾಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.  ಈ ಎಲ್ಲ ಕಾರ್ಯಕ್ರಮಗಳೂ ಯುವ ನಾಯಕ ಡಿ.ಸುರೇಶ್ಗೌಡ ಅವರ ನೇತೃತ್ವದಲ್ಲಿ ನಡೆಯಲಿವೆ.

► Follow us on –  Facebook / Twitter  / Google+

Facebook Comments

Sri Raghav

Admin