ನವೆಂಬರ್’ನಿಂದ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

LPG

ನವದೆಹಲಿ ಅ.05 : ಕೇಂದ್ರ ಸರ್ಕಾರ ನವೆಂಬರ್ ತಿಂಗಳ ಬಳಿಕ ಗ್ರಾಹಕರು ಎಲ್‌ಪಿಜಿ ಗ್ಯಾಸ್ ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಗ್ರಾಹಕರು ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ನೋಂದಣಿ ವ್ಯವಸ್ಥೆ ಜಾರಿಗೊಳಿಸುವಂತೆ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಪ್ರಸ್ತುತ ಕೇಂದ್ರ ಸರ್ಕಾರ ಗ್ರಾಹಕರ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸಬ್ಸಿಡಿ ಆಧಾರದಲ್ಲಿ ನೀಡುತ್ತಿದೆ. ಸಿಲಿಂಡರ್‌ಗಳ ಸಬ್ಸಿಡಿ ಮೊತ್ತ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

‘ಎಲ್‌ಪಿಜಿ ಸಬ್ಸಿಡಿ ಪಡೆಯಲು ಇಚ್ಛಿಸುವವರು ಆಧಾರ್‌ ಸಂಖ್ಯೆ ಹೊಂದಿರುವುದಕ್ಕೆ ದಾಖಲೆ ಕೊಡಬೇಕು’ ಎಂದು ತೈಲ ಸಚಿವಾಲಯದ ಆದೇಶದಲ್ಲಿ ಹೇಳಲಾಗಿದೆ. ಇನ್ನೂ ಆಧಾರ್‌ ಹೊಂದಿಲ್ಲದವರು, ನವೆಂಬರ್‌ 30ರೊಳಗೆ ಅದನ್ನು ಪಡೆದುಕೊಳ್ಳಲು ಸಚಿವಾಲಯ ಅವಕಾಶ ಕಲ್ಪಿಸಲಾಗಿದೆ. ನವೆಂಬರ್‌ 30ರವರೆಗೆ, ಗ್ರಾಹಕರ ಭಾವಚಿತ್ರ ಇರುವ ಬ್ಯಾಂಕ್‌ ಪಾಸ್‌ಬುಕ್‌, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಕಿಸಾನ್‌ ಪಾಸ್‌ಬುಕ್‌, ಪಾಸ್‌ಪೋರ್ಟ್‌ ಅಥವಾ ಚಾಲನಾ ಪರವಾನಗಿ ಪತ್ರದ ಜೊತೆ ಆಧಾರ್‌ ಯೋಜನೆಗೆ ಹೆಸರು ನೋಂದಾಯಿಸಿದಾಗ ಸಿಗುವ ದಾಖಲಾತಿಯನ್ನು ಎಲ್‌ಪಿಜಿ ವಿತರಕರಿಗೆ ಸಲ್ಲಿಸಿ ಸಬ್ಸಿಡಿ ಪಡೆಯಬಹುದು ಎಂದು ಸಚಿವಾಲಯ ಹೇಳಿದೆ.  ಈ ಆದೇಶವು ಅಸ್ಸಾಂ, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೊರತುಪಡಿಸಿ ಇತರೆಲ್ಲ ರಾಜ್ಯಗಳಲ್ಲಿ ತಕ್ಷಣದಿಂದ ಜಾರಿಗೆ ಬರಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin