ನವೆಂಬರ್‍ನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha-01

ಬೆಂಗಳೂರು, ಅ.6-ನವೆಂಬರ್ ಅಂತ್ಯ ಇಲ್ಲವೆ, ಮೂರನೇ ವಾರದಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ. ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಪರಿವೀಕ್ಷಣೆ ನಡೆಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.15ರೊಳಗೆ ಬೆಳಗಾವಿ ಅಧಿವೇಶನ ನಡೆಸಲಾಗುವುದು. ಕನಿಷ್ಠ 2 ವಾರ ಅಧಿವೇಶನ ನಡೆಯಲಿದ್ದು, ಸದ್ಯ ಮಹದಾಯಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ತಿಳಿಸಿದರು. ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತು ಅಭಿವೃದ್ಧಿ ಬಗ್ಗೆ ಸರ್ಕಾರ ಗಮನ ಹರಿಸುವಂತೆ ಮಾಡುವುದು, ಉತ್ತರ ಕರ್ನಾಟಕದ ಜನರ ಕೈಯಲ್ಲಿದೆ ಎಂದು ಅವರು ಹೇಳಿದರು.

ಶಾಸಕರ ಭವನ ನಿರ್ಮಾಣ:

ಸುವರ್ಣಸೌಧದ ಆವರಣದಲ್ಲಿ ಸುಮಾರು 250 ಕೊಠಡಿಗಳ 200 ಕೋಟಿ ರೂ. ವೆಚ್ಚದ ಶಾಸಕರ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಅಧಿವೇಶನದ ವೇಳೆ ವಸತಿ ಸಮಸ್ಯೆ ನೀಗಿಸುವ ಹಿನ್ನೆಲೆಯಲ್ಲಿ ಈ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ಅಧಿವೇಶನದ ಹೊರತಾದ ಸಮಯದಲ್ಲಿ ಸೌಧ ಮತ್ತು ಶಾಸಕರ ಭವನ ಬಳಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ಪ್ರಾದೇಶಿಕ ಆಯುಕ್ತರೂ ಸೇರಿದಂತೆ ವಿಭಾಗ ಮಟ್ಟದ ಅಧಿಕಾರಿಗಳು, ಡೆಪ್ಯೂಟಿ ಸೆಕ್ರೆಟರಿ ಹಂತದ ಸಚಿವಾಲಯದ ಅಧಿಕಾರಿಗಳ ಕಚೇರಿಗಳನ್ನು ಸುವರ್ಣಸೌಧಕ್ಕೆ ಕೂಡಲೇ ಸ್ಥಳಾಂತರಿಸಿ ಸುವರ್ಣ ಸೌಧ ಉಪಯೋಗಿಸಲು ಮುಖ್ಯಮಂತ್ರಿಯವರ ಗಮನ ಸೆಳೆಯಲಾಗುವುದು ಎಂದರು. ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin