ನವೆಂಬರ್‍ನಿಂದ ಎಲೆಕ್ಟ್ರಿಕ್ ಸೆಡಾನ್ ಕಾರುಗಳಲ್ಲಿ ಓಡಾಡಲಿದ್ದಾರೆ ಕೇಂದ್ರ ಸಚಿವರು

ಈ ಸುದ್ದಿಯನ್ನು ಶೇರ್ ಮಾಡಿ

Electrik-Cars-01

ನವದೆಹಲಿ, ಆ.17- ಕೇಂದ್ರ ಸಚಿವರು ಮುಂದಿನ ನವೆಂಬರ್‍ನಿಂದ ಹೊಚ್ಚಹೊಸ ಎಲೆಕ್ಟ್ರಿಕ್ ಸೆಡಾನ್ ಕಾರುಗಳಲ್ಲಿ ಓಡಾಡಲಿದ್ದಾರೆ. ವಿಶ್ವದ ಮೂರನೇ ಅತಿದೊಡ್ಡ ಕಾರು ಕಂಪೆನಿಯಾದ ಸೆಡಾನ್, ದಿಲ್ಲಿಗೆ 10 ಸಾವಿರ ಬ್ಯಾಟರಿ ಚಾಲಿತ ಕಾರು ಹಾಗೂ 4,000 ಚಾರ್ಜಿಂಗ್ ಸ್ಟೇಷನ್ ಪೂರೈಸಲು ಒಡಂಬಡಿಕೆ ಮಾಡಿಕೊಂಡಿದೆ. ಎನರ್ಜಿ ಎಫೀಶಿಯೆನ್ಸಿ ಸರ್ವೀಸಸ್ ಲಿಮಿಟೆಡ್ ಎಂಬ ಸರ್ಕಾರಿ ಸಂಸ್ಥೆ ಈ ಸಂಬಂಧ ಜಾಗತಿಕ ಟೆಂಡರ್ ಕರೆದಿದ್ದು, ಸೆಡಾನ್ ಕಂಪೆನಿ ಶುಕ್ರವಾರ ಪ್ರಸ್ತಾವ ಮನವಿ ಸಲ್ಲಿಸಿದೆ. ಸರ್ಕಾರಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಾವು ವಿದ್ಯುತ್ ಕಾರು ಪ್ರಚುರಪಡಿಸಲು ಆರಂಭಿಸಲಿದ್ದೇವೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಪುನರ್ಬಳಕೆ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಎಸ್ಸೆಲ್ ಸಂಸ್ಥೆ ಎಲ್‍ಇಡಿ ಬಲ್ಬ್ಗಳನ್ನು ಪೆಟ್ರೋಲ್ ಬಂಕ್ಗಳಲ್ಲಿ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಸಚಿವರು ಈ ಹೇಳಿಕೆ ನೀಡಿದರು.

ಮೊದಲ ಹಂತದಲ್ಲಿ ಕಂಪೆನಿ 1000 ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲಿದ್ದು, ಮೊದಲ ಆರು ತಿಂಗಳಲ್ಲಿ ಇದು ಒಮ್ಮೆ ಚಾರ್ಜ್ ಮಾಡಿದರೆ 120-150 ಕಿಲೋಮೀಟರ್ ಕ್ರಮಿಸುತ್ತದೆ. ನವೆಂಬರ್ ವೇಳೆಗೆ 300-400 ಇಂಥ ಕಾರುಗಳನ್ನು ಖರೀದಿಸಲಿದ್ದೇವೆ ಎಂದು ಎಸ್ಸೆಲ್ ವ್ಯವಸ್ಥಾಪಕ ನಿರ್ದೆಶಕ ಸೌರಭ್ ಕುಮಾರ್ ವಿವರಿಸಿದರು. ಎಲ್ಲ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಇವುಗಳನ್ನು ನೀಡಲಾಗುತ್ತದೆ. ಇಂಥ ವಿದ್ಯುತ್ ವಾಹನ, ಚಾಲಕ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.ಈ ಮೂಲಕ ಮಾಸಿಕ 5,000 ರೂಪಾಯಿಗಿಂತಲೂ ಕಡಿಮೆ ದರದಲ್ಲಿ ಈ ಸೇವೆ ನೀಡಲು ಸಾಧ್ಯವಾಗಲಿದೆ. ಇದು ಮಾಲಿನ್ಯ ನಿಯಂತ್ರಣದಲ್ಲೂ ಮಹತ್ವದ ಪಾತ್ರ ವಹಿಸಲಿದೆ ಎಂದು ನುಡಿದರು.

Facebook Comments

Sri Raghav

Admin