ನವೆಂಬರ್ 9 ಮತ್ತು 10 ಇಸ್ಲಾಮಾಬಾದ್ 19ನೇ ಸಾರ್ಕ್ ಶೃಂಗ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Saarc

ಇಸ್ಲಾಮಾಬಾದ್, ಆ.27-19ನೇ ಸಾರ್ಕ್ ದೇಶಗಳ ಶೃಂಗ ಸಭೆ ಮುಂದಿನ ನವೆಂಬರ್ 9 ಮತ್ತು 10 ರಂದು ಇಸ್ಲಾಮಾಬಾದ್ನಲ್ಲಿ ನಡೆಯಲಿದೆ ಎಂದು ಪಾಕಿಸ್ತಾನ ಘೋಷಿಸಿದೆ. ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳುವಂತೆ ಪ್ರಧಾನಿ ನವಾಜ್ ಷರೀಫ್ ಆಹ್ವಾನಿಸಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಆದ್ರೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ಕಾಶ್ಮೀರದ ವಿಚಾರವಾಗಿ ಸಂಬಂಧ ಹಾಳಾಗಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಬಗ್ಗೆ ಇನ್ನು ಅಸ್ಪಷ್ಟತೆ ಇದೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಗೃಹ ಸಚಿವರ ಸಭೆಯಲ್ಲಿ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಈ ಸಂದರ್ಭ ಪಾಕ್ ಕಾಶ್ಮೀರ ವಿಚಾರ ತೆಗೆದು ಉದ್ವಿಗ್ನ ವಾತಾವರಣ ಉಂಟಾಗಿತ್ತು. ಅದಾದ ನಂತರ ಇದೇ 25 ಮತ್ತು 26ರಂದು ನಡೆದ ಸಾರ್ಕ್ ವಿತ್ತ ಸಚಿವರ ಸಭೆಯನ್ನು ಅರುಣ್ ಜೇಟ್ಲಿ ಕೈಬಿಟ್ಟಿದ್ದರು. ಜೇಟ್ಲಿ ಬದಲಿಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿನಾಥ್ ಭಾರತವನ್ನು ಪ್ರತಿನಿಧಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin