ನವ ಭಾರತ ಕನಸು ಸಾಕಾರದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು : ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

Mo0di-Teachers

ನವದೆಹಲಿ, ಸೆ.5-ನವ ಭಾರತ ನಿರ್ಮಾಣದ ಕನಸನ್ನು ನನಸು ಮಾಡುವಲ್ಲಿ ಶಿಕ್ಷಕರದ್ದು ಮಹತ್ವದ ಪಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ದೇಶದ ಶಿಕ್ಷಕರ ಸಮುದಾಯಕ್ಕೆ ಅಭಿನಂದಿಸಿದ ಅವರು, ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ ಎಂದು ಸ್ಮರಿಸಿದರು.

ಈ ದಿನದಂದು ನಾನು ಶಿಕ್ಷಣ ಸಮುದಾಯಕ್ಕೆ ನಮಿಸುತ್ತೇನೆ. ಶಿಕ್ಷಣದ ಮೂಲಕ ಜ್ಞಾನವನ್ನು ಪೋಷಿಸುತ್ತಾ ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಶಿಕ್ಷಕರನ್ನು ನಾನು ಅಭಿನಂದಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಮುಂಬರುವ ಐದು ವರ್ಷಗಳಲ್ಲಿ ಬೋಧನೆಯಿಂದ ಪರಿವರ್ತನೆಗೆ, ಶಿಕ್ಷಣದಿಂದ ಸಬಲೀಕರಣದೆಡೆಗೆ ಹಾಗೂ ಕಲಿಕೆಯಿಂದ ಮುನ್ನಡೆಗೆ ಎಂಬ ಧ್ಯೇಯಗಳು ಸಾಕಾರಗೊಳ್ಳಬೇಕೆಂಬ ಸದಾಶಯವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin